Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ರಾಹುವಿನ ದೈವಾನುಕೂಲವು ಒದಗಿ ಸಂತೋಷಪಡುವಿರಿ. ನೂತನ ಉದ್ಯೋಗ ಲಾಭ, ಅವಿವಾಹಿತರಿಗೆ ವಿವಾಹಯೋಗ, ವಿವಾಹಿತರಿಗೆ ಸಂತಾನಭಾಗ್ಯ, ಧನಾರ್ಜನೆ, ವ್ಯಾಪಾರವೃಛಿಯಾಗಿ ಸಂತಸ ತರುವ ಕಾಲ. ಈ ವರ್ಷ ನಿಜವಾಗಿಯೂ ಭಾಗ್ಯಶಾಲಿಗಳೆನ್ನಿಸುವಿರಿ. ತೊಡಗಿಸಿದ ಕಾರ್ಯ ಭಾಗಗಳೆಲ್ಲವೂ ಯಶಸ್ವಿಯಾಗಿ ಕೊನೆಗೊಳ್ಳುವ ಸುಯೋಗವಿದೆ. ಧೈರ್ಯೋತ್ಸಾಹಗಳು ಆತ್ಮಬಲ, ಜನಸಂಪರ್ಕ ವೃದಿಟಛಿಗೊಂಡು ಲಾಭದಾಯಕವೆನಿಸಲಿದೆ. ದೀಪಾವಳಿ ಅನಂತರ ಸಾಂಸಾರಿಕ ಜೀವನವು ಸುವ್ಯವಸ್ಥಿತವಾಗಿ ನಡೆಯುವುದು. ವ್ಯಕ್ತಿತ್ವದ ವಿಕಾಸ, ಸ್ವಜನ ಬಂಧು ವರ್ಗದವರ ಸಹಕಾರ, ಆರ್ಥಿಕ ಉನ್ನತಿ, ಕೌಟುಂಬಿಕ ಅಭಿವೃದಿಟಛಿ, ಪ್ರಭು ಜನರ ಆಗ್ರಹ, ಆಸ್ತಿ ಪಾಸ್ತಿಗಳ ಸಂಚಯ ಇತ್ಯಾದಿಗಳು ಕೈಗೂಡುವುವು. ಅನಿಷ್ಟ ಸ್ಥಾನದಲ್ಲಿರುವ ಶನಿಯಿಂದಾಗಿ ಕೆಲವೊಮ್ಮೆ ಹಿರಿಯರ ಆರೋಗ್ಯಕ್ಕೆಧಕ್ಕೆ. ಸ್ವಜನರೊಂದಿಗೆ ಮತಭೇದ. ಬಂಧುಗಳೊಂದಿಗೆ, ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಕಲಹಕ್ಕೆ ಕಾರಣವಾಗಿ ಅವರ ಅಸಂತೋಷ, ಗೌರವಕ್ಕೆ ಧಕ್ಕೆ, ಅಸುಖ ಇತ್ಯಾದಿಗಳು ಅನುಭವಕ್ಕೆ ಬರುವುವು. ಸಕಲ ಕಾರ್ಯಗಳಲ್ಲಿ ಜಯ, ಸದಾಚಾರ, ಆರೋಗ್ಯವೃದ್ಧಿ. ಕೆಲವೊಮ್ಮೆ ಹಂತಹಂತವಾಗಿ ಅನಾದರಣೆ, ಅಪವ್ಯಯಗಳು ಇರುತ್ತವೆ. ವಿವಿಧ ಮೂಲಗಳಿಂದ ಹೇರಳ ಧನಪ್ರಾಪ್ತಿ, ಕೇತು, ಶನಿಗಳಿಂದ ಕಾರ್ಯಗಳಲ್ಲಿ ವಿಘ್ನ, ಶ್ರಮ, ದುಷ್ಟ ವೃತ್ತಿ, ದೇಹಾಯಾಸ ಕಂಡುಬರುತ್ತದೆ. ಕೃಷಿ ಕ್ಷೇತ್ರ ವಿಸ್ತರಣೆ ಹಾಗೂ ನಿವೇಶನ ಖರೀದಿ ಯೋಗ ಕಂಡುಬರುತ್ತದೆ. ಧನದ ವಿಚಾರದಲ್ಲಿ ಚಿಂತೆಯಿಲ್ಲದೆ ಸುಸೂತ್ರವಾಗಿ ತೃಪ್ತಿ ಜೀವನವಾಗಲಿದೆ. ಎಷ್ಟೋ ಸಮಯದ ನಿರೀಕ್ಷಿತ ಕಾರ್ಯಗಳು ಕೈಗೂಡಿ ಸಂತೋಷವೆನಿಸುವುದು. ಜೂನ್‌ ಅನಂತರ ಮಿಶ್ರ ಫ‌ಲಗಳು ತೋರಿಬಂದರೂ ಸಾಂಸಾರಿಕವಾಗಿ ಕಿರಿಕಿರಿ, ಅವಮಾನ, ಉಷ್ಣಪೀಡೆ ಮುಂತಾದವುಗಳಿರುತ್ತವೆ. ಮೊದಲನೇ ಚರಣ: ಅಶ್ವಿ‌ನಿ, ಭರಣಿ, ಕೃತ್ತಿಕಾ. ಶುಭ ವಾರ : ಕುಜವಾರ. ಶುಭ ರತ್ನ : ಹವಳ. ಶುಭ ದಿಕ್ಕು : ದಕ್ಷಿಣ. ಶುಭ ವರ್ಣ : ಕೆಂಪು. ಶುಭ ಲೋಹ : ಹಿತ್ತಾಳೆ.
ವೃಷಭ
ಸ್ವಪ್ರಯತ್ನದಲ್ಲಿ ಮುಂದುವರಿದಲ್ಲಿ ಕಾರ್ಯಜಯವಿದೆ. ದೈವಬಲ ಇಲ್ಲದ ನಿಮಗೆ ಅನಾರೋಗ್ಯ, ಸ್ವಜನ ವಿರೋಧ ಮುಂತಾದವು ಒಂದಲ್ಲ ಒಂದು ರೀತಿಯಲ್ಲಿ ತಲೆದೋರುವುವು. ಮುಖ್ಯವಾಗಿ ದೀರ್ಘ‌ ಪ್ರಯಾಣದ ಅವಕಾಶವಿದ್ದು ಇದನ್ನು ಅನುಕೂಲಕರವಾಗಿ ಬಳಸಿಕೊಳ್ಳಬಹುದು. ದೈವಾನುಕೂಲವಿಲ್ಲದ ಪರಿಸ್ಥಿತಿಯಿಂದಾಗಿ ದೈಹಿಕ, ಮಾನಸಿಕ ಆಘಾತ ಇತ್ಯಾದಿಗಳಿಂದ ಬದುಕು ಅಸ್ತವ್ಯಸ್ತವಾದರೂ ದೇವತಾಪ್ರಾರ್ಥನೆಯಿಂದ ಶುಭ. ಅದೇ ರೀತಿ ಧಾರ್ಮಿಕ ಪ್ರವೃತ್ತಿಗಳಿಂದ ಶುಭವಾದೀತು. ಕೃಷಿ, ಕೈಗಾರಿಕೆ, ಕಾರ್ಮಿಕ ವರ್ಗ ಇನ್ನಿತರ ಶ್ರಮಸಾಧ್ಯ ಪ್ರವೃತ್ತಿಯವರಿಗೆ ಕಷ್ಟ-ನಷ್ಟಗಳು ತೋರಿ ಬರಲಿವೆ. ಜೂನ್‌ ಅನಂತರ ವ್ಯಾಪಾರೋದ್ಯಮಗಳಿಗೆ ಸಾಕಷ್ಟು ಪ್ರಗತಿ ಇದೆ. ಆದರೆ ಆರೋಗ್ಯದ ವಿಚಾರದಲ್ಲಿ ಮಾನಸಿಕ ಅಶಾಂತಿಯಿಂದವಾದ-ವಿವಾದಗಳಿಂದ ದೈಹಿಕ ಪರಿಣಾಮ ಬೀರಬಹುದು. ರಕ್ತದೋಷ, ನಿಶ್ಶಕ್ತಿ, ಉಷ್ಣ ಪ್ರಕೋಪಗಳಿರುವುದರಿಂದ ಈ ಸಮಯ ಆದಷ್ಟು ಜಾಗ್ರತೆ ವಹಿಸಬೇಕಾದೀತು. ಡಿಸೆಂಬರ್‌ ಅನಂತರ ಉದ್ಯಮಿಗಳಿಗೆ ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಧನಲಾಭ ಸಾಕಷ್ಟಿದ್ದರೂ ಹಲವು ರೀತಿಯ ಖರ್ಚುಗಳು, ನಷ್ಟವೂ ತೋರಿಬಂದು ಧೃತಿಗೆಡುವಂತಾಗುತ್ತದೆ. ಫೆಬ್ರವರಿ ಅನಂತರ ಈ ಮಾಸವು ಎಲ್ಲಾ ರೀತಿಯ ಪ್ರತಿಕೂಲತೆಗಳಿಗೆ ಕಾರಣವಾದೀತು. ಬಂಧುಜನರ ಕ್ಲೇಶ, ಕೈಗೊಂಡ ಕಾರ್ಯಗಳು ವಿಘ್ನಗಳ ಪಾಲಾಗಿ ಮನೋವ್ಯಥೆ ಆವರಿಸುತ್ತದೆ. ಆದ ಕಾರಣ ಸ್ವಜನರ ವಂಚನೆಗೆ ಸಿಲುಕದಂತೆ ಎಚ್ಚರ ವಹಿಸಿರಿ. ಮೇ ತಿಂಗಳಲ್ಲಿ ಆರ್ಥಿಕ ಹಾಗೂ ಸಾಂಸಾರಿಕ ಇಷ್ಟಸಿದ್ಧಿ, ವಿವಿಧ ಮೂಲಗಳಿಂದ ಆದಾಯ ವೃದ್ಧಿ, ಸ್ಥಾನಮಾನಾದಿಗಳಲ್ಲಿ ಅಭಿವೃದ್ಧಿ, ಸಮಾಜದಲ್ಲಿ ಗೌರವ, ಗೃಹಲಾಭ, ಮಕ್ಕಳ ಸುಖ ಇತ್ಯಾದಿ ಶುಭಫ‌ಲಗಳು ಅನುಭವಕ್ಕೆ ಬರುತ್ತವೆ. ಜೂನ್‌ ಅನಂತರ ಪ್ರಗತಿಯೂ ಲಾಭವೂ ಅಧಿಕವಾಗುವುದು. ಅನ್ಯರಿಂದ ಉತ್ತಮ ಬಾಂಧವ್ಯ ಕುದುರಿಸಿಕೊಳ್ಳಲು ಸಕಾಲ. ತೀರ್ಥಕ್ಷೇತ್ರ, ಧಾರ್ಮಿಕ ಕಾರ್ಯಕ್ಷೇತ್ರಗಳಿಂದ ಮಾನಸಿಕ ಸಂತೋಷ ತೋರಿಬರುವುದು. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವತಾರಾಧನೆಯಿಂದ ಅನುಗ್ರಹವಾಗುತ್ತದೆ. ಕೃತ್ತಿಕಾ, 2, 3, 4ನೇ ಪಾದ ರೋಹಿಣಿ, ಮೃಗಶಿರಾ 2ನೇ ಪಾದ ಶುಭ ವಾರ : ಶುಕ್ರವಾರ. ಶುಭ ರತ್ನ : ವಜ್ರ. ಶುಭ ದಿಕ್ಕು : ಆಗ್ನೇಯ. ಶುಭ ವರ್ಣ : ಬಿಳಿ. ಶುಭ ಲೋಹ : ಬೆಳ್ಳಿ.
ಮಿಥುನ
ರಾಶಿಸ್ಥಿತ ಗುರುವಿನ ಅನುಗ್ರಹ ಪೂರ್ಣವಾಗಿದ್ದು ಕಳೆದ ವರ್ಷ ಸಾಧಿಸಲಾಗದ ಹಾಗೂ ಅರ್ಧದಲ್ಲೇ ನಿಂತು ಹೋದ ಕೆಲಸಕಾರ್ಯಗಳಿಗೆ ಚಾಲನೆ ದೊರೆತುಪುನಃ ಆರಂಭವಾಗಿ ಜಯಪ್ರದವಾಗುತ್ತದೆ. ಸಮಾಜದಲ್ಲಿ ಸ್ಥಾನಮಾನ, ಗೌರವ ಪುನಃ ತೋರಿಬರುತ್ತದೆ. ಸಾಂಸಾರಿಕವಾಗಿ ಸುಖ, ಸಂತೋಷ, ವಿವಾಹಾದಿ ಮಂಗಲಕಾರ್ಯ ಪ್ರಸಕ್ತಿ, ಸಂತಾನ ಪ್ರಾಪ್ತಿ, ಉನ್ನತ ಸ್ಥಾನಮಾನ, ಸಂಪದಭಿವೃದ್ಧಿ, ಐಷಾರಾಮ ಸಾಧನಗಳ ಸಂಗ್ರಹ ಮೊದಲಾವುಗಳು ಅನುಭವಕ್ಕೆ ಬರುತ್ತವೆ. ಆದರೂ ಮಧ್ಯೆ ಮಧ್ಯೆ ರಾಹು ತುಸು ಆತಂಕಗಳನ್ನು ಉಂಟುಮಾಡುವನು. ಇದರಿಂದ ದುರ್ಜನರ ವಂಚನೆ, ಚೋರೋಪದ್ರವ, ಉದ್ಯೋಗ ವ್ಯವಹಾರಗಳಲ್ಲಿ ತೊಡಕುಗಳೇ ಆಗಾಗ ಕಂಡುಬರುವ ಕಾರಣ ಆರ್ಥಿಕ ಅಭದ್ರತೆ ನಿವಾರಣೆಗೆ ಕ್ರಮ ಅಗತ್ಯವಿದೆ. ದೀಪಾವಳಿಯ ಅನಂತರ ಕೊಂಚ ಜಾಗ್ರತೆ ವಹಿಸಬೇಕು. ಮುಂದೆ ಡಿಸೆಂಬರ್‌ನಲ್ಲಿ ಲಾಭಸ್ಥಾನದ ಶನಿಯಿಂದ ಬಾಕಿ ಹಣ ವಸೂಲಿ, ವ್ಯಾಪಾರದಲ್ಲಿ, ಉದ್ಯಮದಲ್ಲಿ ಯಶಸ್ಸು, ಸಾಮೂಹಿಕ ಕೆಲಸ ಕಾರ್ಯಗಳಲ್ಲಿ ಜಯ ಲಾಭಾದಿಗಳಿರುತ್ತದೆ. ಜನವರಿಯಲ್ಲಿ ಆರ್ಥಿಕ ಅಪವ್ಯಯ, ಅನಾರೋಗ್ಯ ತೋರಿಬಂದರೂ ಕಾರ್ಯಜಯವಿದೆ. ಫೆಬ್ರವರಿಯಲ್ಲಿ ಹೊಸ ಸ್ಥಾನಮಾನಗಳು, ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬಂದು ವ್ಯವಸಾಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ನಿಮ್ಮದು. ಇದರಿಂದ ಆರ್ಥಿಕ ಲಾಭ ಕಂಡು ಬರುವುದು. ಜಮೀನು ಖರೀದಿ ಮತ್ತು ವಿವಾದಗಳ ತೀರ್ಮಾನ ಈ ವರ್ಷದಲ್ಲಿ ವಿಶೇಷ ಫ‌ಲವಾಗುತ್ತದೆ. ಅವಿವಾಹಿತರಿಗೆ ಗುರುಬಲ ಇರುವುದರಿಂದ ಲಗ್ನ ಕಾರ್ಯಕ್ಕೆ ಮನಸ್ಸು ಮಾಡಿದರೆ ಉತ್ತಮ ಫ‌ಲಪ್ರಾಪ್ತಿ ಇದೆ. ನಿರುದ್ಯೋಗಿಗಳಿಗೆ ನಿಶ್ಚಿತವಾಗಿಯೂ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಈ ವರ್ಷ ಉತ್ತಮ ಫ‌ಲಿತಾಂಶ ಲಭ್ಯವಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಅನಂತರ ನಿಮ್ಮ ಎಷ್ಟೋ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿವೆ. ಗುರು, ರಾಹು, ಜಪ, ಪೂಜಾದಿಗಳ ಅನುಗ್ರಹದಿಂದ ನಿಮಗೆ ಯಶಸ್ಸು ತೋರಿ ಬರುತ್ತದೆ. ಮೃಗಶಿರಾ 3 ಮತ್ತು 4ನೇ ಪಾದ. ಆದ್ರಾì, ಪುನರ್ವಸು 1, 2, 3ನೇ ಪಾದ. ಶುಭ ವಾರ : ಬುಧವಾರ ಶುಭ ರತ್ನ : ಪಚ್ಚೆ. ಶುಭ ದಿಕ್ಕು : ಉತ್ತರ. ಶುಭ ವರ್ಣ : ಹಸುರು. ಶುಭ ಲೋಹ : ಕಂಚು.
ಕಟಕ
ಬಹುದಿನಗಳ ಬಳಿಕ ಹೆಚ್ಚಿನ ಕಾರ್ಯಗಳು ವಿಳಂಬವಾಗಿಯಾದರೂ ಸಿದ್ಧಿಯಾಗಲಿದೆ. ಹಾಗೆ ಜೀವನದಲ್ಲಿ ವಿಸ್ತೃತವಾದ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಇದು ಕೆಲವೊಮ್ಮೆ ಗಮನಕ್ಕೆ ಬಾರದೆ ಸಾಮಾನ್ಯವೆಂಬಂತೆಯೂ ನಡೆದು ಹೋಗಬಹುದಾದರೂ ಮುಂದಕ್ಕೆ ಇದರ ಫ‌ಲಗಳು ಅನುಭವಕ್ಕೆ ಬರಲಿವೆ. ಉದ್ಯೋಗ, ವ್ಯವಹಾರಗಳಲ್ಲಿ ಇಷ್ಟಾರ್ಥ ಸಿದ್ಧಿಯಾಗಲಿದೆ. ಭಡ್ತಿ ಅಥವಾ ಉನ್ನತಉದ್ಯೋಗಗಳು ದೊರಕುವ ಅವಕಾಶವೂ ಇದೆ. ಆರ್ಥಿಕ ಸ್ಥಿತಿಗಳು ಉತ್ತಮಗೊಳ್ಳುವುವು. ವಿವಾಹ, ಸಂತಾನ ಯೋಗ ಇಷ್ಟಾರ್ಥ ಸಿದ್ಧಿಸುವುವು. ಗೃಹಕೃತ್ಯದ ಉತ್ತಮ ಪ್ರಗತಿ ಇದೆ. ದೀಪಾವಳಿಯ ಅನಂತರದ ಎಲ್ಲಾ ಥರದ ಉದ್ಯೋಗದವರಿಗೂ ಪ್ರಗತಿ ಹಾಗೂ ಜಯವಿದೆ. ಸೋಮಾರಿ ನಿರುದ್ಯೋಗಿಗಳೆನಿಸಿಕೊಂಡವರೂ ಲಾಭಕರ ಉದ್ಯೋಗದಲ್ಲಿ ಪ್ರವೃತರಾಗುವರು. ಡಿಸೆಂಬರ್‌ ಅನಂತರ ಕೃಷಿ, ಭೂಮ್ಯಾದಿ ಅಭಿವೃದ್ಧಿ ಇತ್ಯಾದಿಗಳಿರುತ್ತವೆ. ಈ ಮಧ್ಯೆ ಹಣದ ದುರ್ವ್ಯಯ ಇಷ್ಟಜನರೊಂದಿಗೆ ಕಲಹದಿಂದ ಮಾನಸಿಕ ದುಃಖವುಂಟಾದೀತು. ಮಾರ್ಚ್‌ ಅನಂತರ ಸಂಬಂಧಿಗಳು, ಸ್ನೇಹಿತರು ಹಾಗೂ ನಿಕಟ ಸಂಪರ್ಕ ಹೊಂದಿದ ಜನರೊಂದಿಗೆ ವ್ಯವಹಾರ ಕಷ್ಟಕರವೆನಿಸೀತು. ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ವರ್ಷವೆನಿಸಲಿದೆ. ಕಷ್ಟಗಳನ್ನು ಪ್ರಯತ್ನದಿಂದ ಎದುರಿಸಿದಲ್ಲಿ ಗುರು ಅನುಗ್ರಹಕಾರಕನಾದಾನು. ಜೂನ್‌ ಅನಂತರ ಶನಿಯಿಂದ ಆರ್ಥಿಕವಾಗಿ ಪ್ರತಿಕೂಲ ಫ‌ಲವಿದೆ. ಧರ್ಮಬಾಹಿರ ಕಾರ್ಯಗಳಿಂದ ಗುರು ಜನರ ವಿರೋಧ ಉಂಟಾದೀತು. ಅಧಿಕಾರಿ ವರ್ಗದವರಿಂದ ಧಾರಾಳ ಲಾಭವೂ ಕೈಗೂಡುವುದು. ಆದರೂ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವರ್ಷದ ಕೊನೆಗೆ ದೈವಬಲವಿಲ್ಲದೆ ಹೋದರೂ ರಾಶಿಸ್ಥಿತ ಗುರುವಿನಿಂದ ಆರ್ಥಿಕವಾಗಿ ಸ್ಥಿತಿ ಉತ್ತಮಗೊಳ್ಳುತ್ತದೆ. ಕೊಂಚ ಅನಾರೋಗ್ಯವಿದ್ದರೂ ಸ್ಥಿರತೆ ಕಂಡು ಬಂದೀತು. ಅಭಿಮಾನಿಗಳ ಪ್ರೋತ್ಸಾಹ ಹಾಗೂ ಸಹಕಾರವೂ ಇದೆ. ಪ್ರಾಣ ದೇವರ ಉಪಾಸನೆ ನಿಮಗೆ ಹೆಚ್ಚಿನ ಶ್ರೇಯಸ್ಸು ತರಲಿದೆ. ಪುನರ್ವಸು 4ನೇ ಪಾದ, ಪುಷ್ಯ, ಆಶ್ಲೇಷಾ ಶುಭ ವಾರ : ಸೋಮವಾರ. ಶುಭ ರತ್ನ : ಮುತ್ತು. ಶುಭ ದಿಕ್ಕು : ವಾಯವ್ಯ ಶುಭ ವರ್ಣ : ಬಿಳಿ. ಶುಭ ಲೋಹ : ಬೆಳ್ಳಿ.
ಸಿಂಹ
ದೀಪಾವಳಿ ಅನಂತರ ಸಕಾಲದಲ್ಲಿ ಮಿತ್ರರ ಸಹಾಯದಿಂದ ಕಷ್ಟ ಪರಿಹಾರವಾಗುವುದು. ಕೌಟುಂಬಿಕವಾಗಿಯೂ ಪ್ರಗತಿ ಇದೆ. ಶನಿಯು ಚತುರ್ಥದ ಸ್ಥಾನದಿಂದ ತನ್ನ ಹಾಗೂ ಅಷ್ಟಮದ ಕೇತು ಅಶುಭ ಫ‌ಲಗಳನ್ನು ಕೊಡಲಾರಂಭಿಸುವನು. ಇದರಿಂದ ದೈವಬಲವೂ ಪ್ರತಿಕೂಲ ಸ್ಥಿತಿಯಿಂದ ಇರುವ ಕಾರಣ ಸುಖ-ಸಂತೋಷಗಳು ಮರೀಚಿಕೆಯಾದಾವು. ಉದ್ಯೋಗ, ವ್ಯವಹಾರಗಳಲ್ಲಿ ತೀವ್ರ ಪ್ರತಿಸ್ಪರ್ಧೆ, ಶತ್ರುಗಳಿಂದ ಕಿರುಕುಳ, ಅರ್ಥಹಾನಿ, ಮಾನಸಿಕ ಉದ್ವೇಗ, ಪ್ರಯಾಣ, ಕಷ್ಟ-ನಷ್ಟಗಳು ಎದುರಾಗುವುವು. ಆರೋಗ್ಯವು ಕೆಟ್ಟೀತು. ಆದರೆ ಹಿಂದೆ ಸಾಧಿಸಿದ ಕೆಲಸಗಳಿಂದ ಆದಾಯ ಕೈಸೇರಲಿದೆ. ಸ್ವಕಾರ್ಯ ಪೂರೈಕೆಗಾಗಿ ಕಠಿಣ ದುಡಿಮೆಯಿಂದ ಪ್ರಯತ್ನಿಸಬೇಕಾಗುವುದು. ಒಂದರ ಹಿಂದೆ ಒಂದರಂತೆ ಕಷ್ಟ-ನಷ್ಟಗಳು, ಅಡ್ಡಿ-ಆತಂಕಗಳು ತೋರಿಬಂದರೂ ಕರ್ತವ್ಯದಿಂದ ವಿಮುಖರಾಗದಿರಿ. "ತಾಳಿದವನು ಬಾಳಿಯಾನು' ಎಂಬಂತೆ ಅನಿರೀಕ್ಷಿತ ಘಟನೆಗಳಿಂದ ತಿರುವು ತೋರಿಬರುತ್ತದೆ. ಗೃಹ ಕಲಹಗಳಿಂದ ಮಾನಸಿಕ ಶಾಂತಿ ಭಂಗವಾದೀತು. ದೇಹಾಲಸ್ಯ ಉಂಟಾಗಿ ಕೋಪ- ತಾಪಗಳು ಅಧಿಕವಾಗುವುದು. ಆದರೂ ದ್ವಾದಶದ ಗುರು ಬಲದಿಂದ ನಿಮ್ಮ ಇಚ್ಛಿತ ಕಾರ್ಯಗಳು ಅನುಭವಕ್ಕೆ ಕಂಡುಬಂದು ಹಣ ಪ್ರಾಪ್ತಿ, ಐಶ್ವರ್ಯ, ಸಮಾಜದಲ್ಲಿ ಸ್ಥಾನಮಾನ, ಗೌರವ, ಕೌಟುಂಬಿಕ ಇಷ್ಟಸಿದ್ಧಿಗಳು ಸಂಭವಿಸುತ್ತವೆ. ಜೂನ್‌ ಅನಂತರ ಮಿಶ್ರ ಫ‌ಲವಿದೆ. ಭೂ ಸಂಬಂಧ ವ್ಯವಹಾರಗಳಲ್ಲೂ ಹೊಸ ಕಾರ್ಯಪ್ರವೃತ್ತಿಯಲ್ಲೂ ಹೆಚ್ಚಿನ ಯಶ ಉಂಟಾಗಲಿದೆ. ಮುಂದೆ ವರ್ಷಾಂತ್ಯದವರೆಗೂ ಹೆಚ್ಚಿನ ಕಾರ್ಯಗಳು ಹಂತಹಂತವಾಗಿ ಉತ್ತಮ ಅಭಿವೃದ್ಧಿ ತಂದುಕೊಡಲಿವೆ. ಕೃಷಿಯಲ್ಲಿ ನಿಮಗೆ ವಿಶೇಷ ಕೊಡುಗೆಯಾಗಿ ಅಧಿಕ ಬೆಳೆ ಮತ್ತು ಅಧಿಕ ಲಾಭವನ್ನು ಸೂಚಿಸುತ್ತದೆ. ನವಗ್ರಹ ಸ್ತೋತ್ರ, ಕುಲದೇವತಾ ಅನುಗ್ರಹಕ್ಕೆ ಪ್ರಯತ್ನಿಸಿದಲ್ಲಿ ನಿಮ್ಮ ಅಭೀಷ್ಟಗಳು ಸಿದ್ಧಿಸಲಿವೆ. ಮಘಾ, ಹುಬ್ಟಾ, ಉತ್ತರಾ ಮೊದಲ ಪಾದ. ಶುಭ ವಾರ : ರವಿವಾರ. ಶುಭ ರತ್ನ : ಮಾಣಿಕ್ಯ. ಶುಭ ದಿಕ್ಕು : ಪೂರ್ವ. ಶುಭ ವರ್ಣ : ಸಪ್ತವರ್ಣ. ಶುಭ ಲೋಹ : ತಾಮ್ರ.
ಕನ್ಯಾ
ಏಕಾದಶದ ಲಾಭಸ್ಥಾನಗತನಾದ ಗುರುವಿನ ಅನುಗ್ರಹದಿಂದ ಸುಖ, ಸಂಪತ್ತುಗಳು ವೃದ್ಧಿಯಾಗಲಿವೆ. ಅಲ್ಲದೆ ಅತ್ಯುಜ್ವಲ ಭಾಗ್ಯವನ್ನು ತಂದುಕೊಡಲಿದ್ದಾನೆ. ವಿವಾಹಾದಿ ಮಂಗಲಕಾರ್ಯ ಪ್ರಸಕ್ತಿ. ಸಾಂಸಾರಿಕ ಸುಖ, ಇಚ್ಛಿತ ಕಾರ್ಯಗಳಲ್ಲಿ ಜಯಲಾಭಾದಿಗಳು, ಕುಟುಂಬಾಭಿವೃದ್ಧಿ, ಆಸ್ತಿಪಾಸ್ತಿಗಳ ಸಂಗ್ರಹ, ಸ್ಥಾನಾಂತರ ಲಾಭ, ಉದ್ಯೋಗದಲ್ಲಿ ಪ್ರಗತಿ ಲಾಭಗಳಿವೆ. ಸಂತಾನ ಪ್ರಾಪ್ತಿ, ದೈಹಿಕ ಆರೋಗ್ಯವು ಸಾಕಷ್ಟು ಉತ್ತಮವಿರುವುದು. ದೀಪಾವಳಿಯ ಅನಂತರ ಮಕ್ಕಳಿಂದ ಸಂತೋಷ, ಐಶ್ವರ್ಯಾಭಿವೃದಿಟಛಿ, ಭೂ ವ್ಯವಹಾರದಲ್ಲಿ ಜಯ ಇತ್ಯಾದಿಗಳೊಂದಿಗೆ ಕೆಲವೊಮ್ಮೆಶತ್ರು ಪೀಡೆ. ಜ್ವರ, ಸಾಲಗಾರರ ಪೀಡೆ, ಮಾನಸಿಕ ಅಶಾಂತಿ, ಅಪಘಾತಗಳು, ನಿಮ್ಮ ಸಪ್ತಮದ ಕೇತುವಿನ ಪ್ರತಿಕೂಲತೆ ಯಿಂದ ಕಂಡುಬರುತ್ತದೆ. ಜನವರಿ ಅನಂತರ ದುಃಖ ನಿವಾರಣೆ, ಶತ್ರುಪೀಡೆ ನಿವಾರಣೆ, ಮನಶ್ಯಾಂತಿ, ಅಜೀರ್ಣ, ಉಷ್ಣವಿಕಾರ, ರಕ್ತದೋಷ ಇತ್ಯಾದಿಗಳು ತೋರಿಬರುತ್ತವೆ. ಮೇ ಅನಂತರ ಹಂತಹಂತವಾಗಿ ಆರ್ಥಿಕ ಸ್ಥಿತಿಯ ಏರಿಕೆ ಉಂಟಾಗಿ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ. ಗುರುವಿನ ದೈವಬಲದಿಂದ ಧನಪ್ರಾಪ್ತಿ, ವಿವಿಧ ಮೂಲಗಳಿಂದ ಕಾರ್ಯಜಯ, ಗೃಹಕೃತ್ಯಗಳಲ್ಲಿ ಪ್ರಗತಿ, ಉತ್ತಮ ಮೇಧಾಶಕ್ತಿ, ಸಾಂಸಾರಿಕ ಸುಖ ವಿಭವಗಳು, ಅಭಿವೃದಿಟಛಿಯಿಂದ ಆರ್ಥಿಕ ವಾಗಿಯೂ ಬೆಳವಣಿಗೆಯುಂಟಾಗುತ್ತದೆ. ಜೂನ್‌ ಅನಂತರ ಕೌಟುಂಬಿಕವಾಗಿಯೂ ಸಂಬಂಧ ವೃದ್ಧಿ, ಪ್ರಮುಖ ವ್ಯವಹಾರವೊಂದರಲ್ಲಿ ಸಣ್ತೀಪರೀಕ್ಷೆಯ ಕಾಲ. ಕೌಟುಂಬಿಕ ವ್ಯಾಜ್ಯಗಳು ಉದ್ಭವಿಸಿಯಾವು. ಮುಂದೆ ನಂತರದ ಅವಧಿಯಲ್ಲೂ ವ್ಯಾಪಾರೋದ್ಯಮ ಲಾಭಕರವಾಗಿಯೇ ಉಳಿದರೂ ಇತರ ಸಂಗತಿಗಳಲ್ಲಿ ನಷ್ಟ, ಅಡಚಣೆಗಳು ತೋರಿಬಂದಾವು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಸ್ತ್ರೀಯರಿಗೆ ಆರೋಗ್ಯದಲ್ಲಿ ಆಗಾಗ ತೊಂದರೆ ತೋರಿಬಂದರೂ ಸಾಂಸಾರಿಕವಾಗಿ ಗೃಹಸುಖವುಂಟಾಗುತ್ತದೆ. ಪ್ರತೀ ಶುಕ್ರವಾರ ಲಕ್ಷ್ಮೀಪೂಜೆ, ಪಂಚಮಿ ದಿನ ನಾಗಾರಾಧನೆಗಳಿಂದ ಅನುಗ್ರಹಕ್ಕೆ ಪಾತ್ರರಾದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಖಂಡಿತ ಸಾಧಿಸಬಹುದು. ಉತ್ತರಾ 2, 3, 4ನೇ ಪಾದ. ಹಸ್ತಾ, ಚಿತ್ರಾ 1, 2ನೇ ಪಾದ. ಶುಭ ವಾರ : ಬುಧವಾರ. ಶುಭ ರತ್ನ : ಪಚ್ಚೆ. ಶುಭ ದಿಕ್ಕು : ಉತ್ತರ. ಶುಭ ವರ್ಣ : ಹಸುರು. ಶುಭ ಲೋಹ : ಕಂಚು.
ತುಲಾ
ರಾಶಿಸ್ಥಿತ ಏಳೂವರೆ ಶನಿ ಪದೇಪದೇ ಇಷ್ಟಾರ್ಥ ಸಿದ್ಧಿಗೆ ತಡೆಯನ್ನೊಡ್ಡಿದರೂ ಮಧ್ಯೆಮಧ್ಯೆ ಇತರ ಗ್ರಹಗಳ ಶುಭ ಫ‌ಲಗಳು ಆದಷ್ಟು ಮನಶ್ಯಾಂತಿಗೆ ಕಾರಣವಾದೀತು. ಆರ್ಥಿಕ ಅಡಚಣೆ, ದೂರದ ವ್ಯರ್ಥ ಸಂಚಾರ, ದೈಹಿಕ ಹಾಗೂ ಮಾನಸಿಕ ಆಘಾತ, ಪ್ರಯಾಣಾಪಘಾತ, ವ್ಯವಹಾರಗಳಲ್ಲಿ ಅಪಯಶಸ್ಸು, ಪ್ರೀತಿ ಜನರ ವಿಯೋಗ, ಬಂಧುಜನರಿಂದ ಕಷ್ಟನಷ್ಟಗಳು, ವ್ಯಾಜ್ಯ ತಕರಾರುಗಳು, ದುರ್ಜನರ ಒಡನಾಟ, ಗೌರವ ಹಾನಿ, ಅಧಿಕಾರಿ ಜನರ ಆಗ್ರಹ ಇತ್ಯಾದಿಗಳಿಗೆ ಕಾರಣರೆನಿಸುವರು. ದೀಪಾವಳಿಯ ಅನಂತರ ಕೆಲವೊಂದು ಕಾರ್ಯಗಳಲ್ಲಿ ಜಯ, ಲಾಭಾದಿಗಳು ಧನಪ್ರಾಪ್ತಿ, ಜನರ ಸಹಾನುಭೂತಿ, ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು, ಶತ್ರು ನಾಶ ಸಾಂಸಾರಿಕ ಸುಖ, ಮಿತ್ರ ಲಾಭ, ವಾಹನ ಸುಖ ಇತ್ಯಾದಿಗಳು ಅನುಭವಕ್ಕೆ ತೋರಿಬರುತ್ತವೆ. ಸಮಾಧಾನ, ತಾಳ್ಮೆ ಅತೀ ಅಗತ್ಯ. ಜನವರಿ ತಿಂಗಳಲ್ಲಿ ವ್ಯಾಪಾರೋದ್ಯಮಗಳಿಗೆ ಪಾಲುದಾರರಿಗೆ, ಲೇವಾದೇವಿ ವ್ಯವಹಾರಸ್ಥರಿಗೆ ಭಾಗಶಃ ಯಶಸ್ಸು ಲಭ್ಯವಾಗುತ್ತದೆ. ಕೈಗಾರಿಕೋದ್ಯಮಗಳಿಗೂ ಕಾರ್ಮಿಕ ವರ್ಗದವರಿಗೂ, ಶ್ರಮಜೀವಿಗಳಿಗೂ ಕಷ್ಟನಷ್ಟಗಳು ಅಧಿಕವಾದಾವು. ಮಾರ್ಚ್‌ ತಿಂಗಳಲ್ಲಿ ಕ್ರಯವಿಕ್ರಯ, ಗೃಹ, ವಾಹನಾದಿ ವ್ಯವಹಾರವುಳ್ಳವರಿಗೆ ಉತ್ತಮ ಆರ್ಥಿಕ ಲಾಭ ತಂದೀತು. ಗೃಹಕೃತ್ಯದಲ್ಲಿ ಇಷ್ಟಾರ್ಥದಂತೆ ನಡೆಯುವುದು, ಬಂಧುಗಳಲ್ಲಿ ಮನಸ್ತಾಪ, ಧನಹಾನಿ ಹಾಗೂ ಮಾನಹಾನಿಗೆ ಕಾರಣವಾಗದಂತೆ ಎಚ್ಚರವಿರಲಿ. ಜುಲೈ ಅನಂತರ ನಿಮಗೆ ಅನುಕೂಲವಾಗಿ ನೆಮ್ಮದಿ ಲಭ್ಯ ಹಾಗೂ ಭಡ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಅತೀ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಮಹಿಳೆಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕು. ಆದರೂ ಜೂನ್‌ ಅನಂತರ ಹಂತಹಂತವಾಗಿ ಸುಧಾರಣೆಯಾಗಲಿದೆ ಹಾಗೂ ನೆಮ್ಮದಿ ಲಭ್ಯವಿದೆ. ಪ್ರತೀ ಶುಕ್ರವಾರ ಲಕ್ಷ್ಮೀ ಪೂಜೆಯನ್ನು ಮಾಡಿದಲ್ಲಿ ಎಲ್ಲಾ ರೀತಿಯ ಉತ್ತರೋತ್ತರ ಅಭಿವೃದ್ಧಿಗೆ ಹಾಗೂ ಮಾನಸಿಕ ಶಾಂತಿಗೆ ಫ‌ಲಪ್ರದವಾಗಿ ತೋರಿಬಂದೀತು. ಚಿತ್ರಾ 3, 4ನೇ ಪಾದ ಸ್ವಾತೀ ವಿಶಾಖಾ 1, 2, 3ನೇ ಪಾದ ಶುಭವಾರ: ಶುಕ್ರವಾರ ಶುಭರತ್ನ: ವಜ್ರ, ಶುಭ ದಿಕ್ಕು: ಆಗ್ನೇಯ ಶುಭವರ್ಣ: ಚಿತ್ರವರ್ಣ ಶುಭಲೋಹ: ಬೆಳ್ಳಿ.
ವೃಶ್ಚಿಕ
ಸ್ವಾಭಿಮಾನಿಗಳೂ, ಛಲವಾದಿಗಳೂ ಆದ ನೀವು ಮಿಶ್ರ ಫ‌ಲಾನುಭೂತಿಯನ್ನು ಪಡೆಯಲಿರುವಿರಿ. ಭಾಗ್ಯಸ್ಥಾನಗತನಾದ ಗುರುವಿನಿಂದಾಗಿ ಸೌಭಾಗ್ಯ, ಸಂಪತ್ತು ತಾನಾಗಿ ಬಂದು ಸೇರುವುವು. ಕೆಲವೊಮ್ಮೆ ಅನಾರೋಗ್ಯವೂ ನಿಮ್ಮನ್ನು ಬಾಧಿಸುತ್ತಾ ಕಳವಳಕ್ಕೀಡು ಮಾಡಿದರೂ ಎಣಿಕೆಯಂತೆ ಕಾರ್ಯ ಜಯವಾಗುವುದರಿಂದ ನೀವು ಆ ಕುರಿತು ಚಿಂತಿಸುವ ಆವಶ್ಯಕತೆ ಇಲ್ಲ. ಹೆಚ್ಚಿನ ಕೆಲಸಕಾರ್ಯಗಳು ಅನಾಯಾಸವಾಗಿ ಪೂರ್ಣವಾಗಿ ದಕ್ಷತೆ ಹೆಚ್ಚಿಸುವುದು. ಸಂಚಾರ ಯೋಗವಿದ್ದರೂ ಅನಿಷ್ಟವಾಗುವುದಿಲ್ಲ. ಮುಂದುವರಿದಂತೆ ಪರಿಸ್ಥಿತಿ ಉತ್ತಮಗೊಂಡು ಸ್ಥಾನ-ಮಾನಾದಿಗಳ ಉತ್ಕರ್ಷಣೆಗೆ ಕಾರಣವಾಗುವಂಥ ಕಾರ್ಯಗಳು ಕೈಗೂಡುವುವು. ಕಲಹ ಸಂಭವವಿದೆ. ಮುಖ್ಯವಾಗಿ ಧನಾರ್ಜನೆಯು ಉತ್ತಮವಿರುವುದರಿಂದ ಅಡಚಣೆ ತೋರಿಬಾರದು. ವೈವಾಹಿಕ ಜೀವನದಲ್ಲಿ ಸಂತೃಪ್ತಿ ಕಂಡುಬರುತ್ತದೆ. ಪ್ರಾಪ್ತ ವಯಸ್ಕರಿಗೆ ಇದು ಕಲ್ಯಾಣ ಕಾರ್ಯಕ್ಕೆ ಸಕಾಲವಾಗಿ ಕಂಕಣ ಬಲ ಕೂಡಿ ಬರಲಿದೆ. ಫೆಬ್ರವರಿ ತಿಂಗಳಿಂದ ಆರ್ಥಿಕ ಉನ್ನತಿ, ತಂಟೆ-ತಕರಾರುಗಳಿಂದ ಬಿಡುಗಡೆ, ಶತ್ರುನಾಶ, ಮನಶ್ಯಾಂತಿ, ಉದ್ದೇಶಿತ ಕಾರ್ಯಸಾಧನೆ, ಸಂತಾನಸುಖ ಇತ್ಯಾದಿಗಳಿರುತ್ತದೆ. ಈ ವರ್ಷ ಉತ್ತಮ ಫ‌ಲಿತಾಂಶ ಕಂಡುಬರುತ್ತದೆ. ವಿಶೇಷವಾಗಿ ಉನ್ನತ ವ್ಯಾಸಂಗದಲ್ಲಿದ್ದವರಿಗೆ ಹೆಚ್ಚಿನ ಅನುಕೂಲ ಯೋಗವಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚವು ಕಡಿಮೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಜೂನ್‌ ತಿಂಗಳ ಅನಂತರ ದಿನೇ ದಿನೇ ಅಭಿವೃದ್ಧಿ ಪಡೆಯಲಿದೆ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪೂರ್ಣ ಜಯ ನಿಮ್ಮದಾಗಲಿದೆ. ನಿವೇಶನ ಖರೀದಿ ಮತ್ತು ಕೃಷಿ ಭೂಮಿ ಖರೀದಿ ಬಗ್ಗೆ ಜಾಗ್ರತೆ ಬೇಕು. ಅನಂತೇಶ್ವರನ ಆರಾಧನೆ ನಿಮ್ಮ ಬಾಳಿಗೆ ಹೆಚ್ಚಿನ ಶ್ರೇಯಸ್ಸು ತರಲಿದೆ. ವಿಶಾಖಾ 4ನೇ ಪಾದ, ಅನುರಾಧಾ, ಜ್ಯೇಷ್ಠ ಶುಭವಾರ: ಮಂಗಳವಾರ, ಶುಭರತ್ನ: ಹವಳ, ಶುಭದಿಕ್ಕು: ದಕ್ಷಿಣ, ಶುಭವರ್ಣ: ನಸುಗಂದು, ಶುಭಲೋಹ: ಹಿತ್ತಾಳೆ.
ಧನು
ಉಚ್ಚ ಸ್ಥಾನದ ಗುರುಬಲವಿದ್ದರೂ ಶನಿ, ರಾಹುಗಳು ಈ ವರ್ಷ ಅನಿಷ್ಟ ಸ್ಥಾನಸ್ಥಿತರಾದ ಅನೇಕ ವಿಧದ ಕಷ್ಟನಷ್ಟಗಳಿಗೆ ಕಾರಣವಾಗಿ ಉದ್ಯೋಗ, ವ್ಯವಹಾರಗಳಲ್ಲಿ ಅಪಯಶಸ್ಸು, ಆರ್ಥಿಕ ಅಡಚಣೆ, ವ್ಯಾಧಿಗಳು, ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಸ್ಥಾನಚಲನ, ಕರ್ಮವಿಘ್ನ, ಬಂಧುಬಳಗದವರಿಂದ ಅನೇಕ ಕ್ಲೇಶಗಳು ಸಂಭವಿಸಿ ಮನೋಪೀಡೆಗೆ ಒಳಗಾಗಬೇಕಾದೀತು. ಮಿತ್ರರು ವಿಮುಖರಾಗುವರು. ಧನ ಸಂಪತ್ತು, ಕೌಟುಂಬಿಕ ಸುಖಾದಿಗಳು ಕ್ಷೀಣಿಸುವುವು. ಸ್ವಜನರಿಗೂ ಬಂಧುವರ್ಗದವರಿಗೂ ಹಾನಿ. ಧನವ್ಯಯ, ದೈನ್ಯತೆ, ಪಶು ಭಯಾದಿಗಳು ತೋರಿಬಂದೀತು. ಆದರೆ ವಾಹನ, ಸ್ಥಿರಾಸ್ತಿ, ವ್ಯವಹಾರ ಮೊದಲಾದ ಕಾರ್ಯಕ್ಷೇತ್ರವುಳ್ಳವರು ಇದ್ದುದರಲ್ಲೇ ಪ್ರಗತಿ ಹೊಂದಿ ಭಾಗ್ಯಶಾಲಿಗಳೆನಿಸುವರು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪ್ರಯತ್ನಬಲದಿಂದಲೇ ಮಿಶ್ರಫ‌ಲಗಳನ್ನು ಪಡೆಯುವರು. ಅನಂತರ ಅನಾರೋಗ್ಯ, ಸಂತಾನ, ಸಿದ್ಧಿ ನಿಮಿತ್ತ ಕಷ್ಟಗಳೇ ತೋರಿಬಂದರೂ ಕಾರ್ಯರಂಗದಲ್ಲಿ ಜಯ ಲಾಭಾದಿಗಳು ಉನ್ನತಿ, ಶತ್ರುಭಯ ಕಲಹಾದಿಗಳ ನಿವಾರಣೆ, ಧನ, ಸುವರ್ಣಾದಿಗಳು ಪ್ರಾಪ್ತಿ. ರೋಗಶಮನ, ಶೋಕ ಪರಿಹಾರ, ಆರ್ಥಿಕ ಅಭಿವೃದಿಟಛಿ ಮೊದಲಾದ ಫ‌ಲಗಳಿವೆ. ಜನವರಿ ತಿಂಗಳಲ್ಲಿ ದೂರದ ವ್ಯರ್ಥ ಪ್ರಯಾಣದಿಂದ ತೊಂದರೆಗಳಿದ್ದು ಧನದಾಯದ ಮಟ್ಟಿಗೆ ಉತ್ತಮ ಪ್ರಗತಿ ಇದೆ. ಮುಂದೆ ಮಾರ್ಚ್‌ ಅನಂತರ ಮಿಶ್ರ ಫ‌ಲಗಳೆ ಮುಂದುವರಿದು ಅನಾರೋಗ್ಯ, ಹಣಕಾಸು ವ್ಯವಹಾರಗಳಲ್ಲಿ ವಿರೋಧಗಳಿವೆ. ಜೂನ್‌ ಅನಂತರ ಗುರುಬಲದಿಂದ ವಿವಿಧ ಮೂಲಗಳಿಂದ ಧನಪ್ರಾಪ್ತಿ, ಆರ್ಥಿಕ ಅಭಿವೃದ್ದಿ, ಸರಕಾರದ ಕೋರ್ಟು ಕಚೇರಿ ಕೆಲಸಗಳಲ್ಲಿ ಇಷ್ಟಬಲ, ಅಧಿಕಾರಿ ಜನರ ಅನುಗ್ರಹ, ಸದಾಚಾರ ಆರೋಗ್ಯಭಾಗ್ಯ ಇತ್ಯಾದಿ ಫ‌ಲಗಳಿರುತ್ತದೆ. ಈ ಮಧ್ಯೆ ಸಾಂಸಾರಿಕ ತಾಪತ್ರಯಗಳು ಕೆಲವೊಮ್ಮೆ ಒದಗಬಹುದು. ಮುಂದೆ ಹಂತ ಹಂತವಾಗಿ ಕೆಲಸಗಳಲ್ಲಿ ಪ್ರಗತಿ, ಧನಸಮೃದ್ಧಿ, ವಿವಾಹ ಕಾರ್ಯಕ್ಕೆ ವರ್ಷ ಪೂರ್ತಿ ಉತ್ತಮ ಕಾಲವಾಗಿರುತ್ತದೆ. ಉತ್ತಮ ಕಂಕಣ ಭಾಗ್ಯವಿದೆ. ನಿಮ್ಮ ರಾಜಕೀಯ ಭವಿಷ್ಯದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಸ್ಥಾನಮಾನ ದೊರಕುತ್ತದೆ. ಭವಿಷ್ಯದ ನಿಮ್ಮ ಮುಂದಿನ ಉತ್ತಮ ಜೀವನಕ್ಕೆ ಶಿವಸ್ತುತಿ, ರುದ್ರಾಭಿಷೇಕದಿಂದ ಅನುಗ್ರಹ ದೊರೆತು ಯಶಸ್ಸು ಕಂಡುಬರುತ್ತದೆ. ಮೂಲಾ, ಪೂರ್ವಾಷಾಡ, ಉತ್ತರಾಷಾಢದ 1ನೇ ಪಾದ ಶುಭವಾರ: ಗುರುವಾರ, ಶುಭರತ್ನ: ಕನಕ ಪುಷ್ಯರಾಗ, ಶುಭದಿಕ್ಕು: ಈಶಾನ್ಯ, ಶುಭವರ್ಣ: ಹಳದಿ, ಶುಭಲೋಹ: ಚಿನ್ನ
ಮಕರ
ಉತ್ತಮ ಗ್ರಹವಾದ ಗುರುವಿನ ದೈವಬಲ ಹೊಂದುವ ನಿಮಗೆ ಈ ವರ್ಷ ಸ್ಥಾನಮಾನಗಳು ಭದ್ರವಾಗಿದ್ದು, ವ್ಯಾಪಾರಾದಿ ಉದ್ಯಮಗಳಲ್ಲಿ ವಿಶೇಷ ಲಾಭದಾಯಕವಾಗಿರುತ್ತದೆ. ಸಂಸಾರ ಸುಖವು ತೃಪ್ತಿಕರವಾಗಿದ್ದು ವಿಶೇಷ ಸಂಭ್ರಮವಿದ್ದರೂ ಹೆಚ್ಚಿನ ಪ್ರಗತಿಯಿಲ್ಲ. ಅನಾವಶ್ಯಕ ಖರ್ಚು, ಆಪ್ತ ಜನರೆಲ್ಲ ದ್ವೇಷ ಕಟ್ಟಿಕೊಂಡು ಕಾರ್ಯದಲ್ಲಿ ವಿಘ್ನವುಂಟಾಗುವುದು. ಆರ್ಥಿಕ ಗಳಿಕೆ ಉತ್ತಮವಿದ್ದು ವಿಶೇಷ ಗೌರವವೂ ದೊರೆತು ನೆಮ್ಮದಿಗೆ ಭಂಗವಾಗದು. ಶನಿಯಿಂದ ಡಿಸೆಂಬರ್‌ ಅನಂತರ ಎಲ್ಲಾ ವಿಧದ ವೃತ್ತಿಯವರಿಗೂ ಸುಖದುಃಖ ಲಾಭಾನುಲಾಭಗಳು ಸಮಾನವೆನಿಸುತ್ತದೆ. ತೊಡಗಿದ ಕಾರ್ಯಭಾಗಗಳು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಾ ವರ್ಷದ ಕೊನೆಗೆ ತುಸು ಪ್ರಗತಿ ತೋರಿಬಂದೀತು. ಫೆಬ್ರವರಿ ತಿಂಗಳಲ್ಲಿ ವ್ಯವಹಾರದಲ್ಲಿ ಇಷ್ಟ ಸಿದ್ಧಿ. ಸದಾಚಾರ ಪ್ರವೃತ್ತಿಯಿಂದ ಗುರುಹಿರಿಯರ ದಯಾಭಾಗ್ಯ ಲಭಿಸಿ ಆರೋಗ್ಯವು ಸುಧಾರಿಸುತ್ತದೆ. ಅವಿವಾಹಿತರಿಗೆ ಉತ್ತಮ ಕಂಕಣಬಲ ಒದಗಿ ವೈವಾಹಿಕ ಸುಖ ತೋರಿಬರಲಿದೆ. ಹಾಗೇ ಗೃಹಧನಾದಿ ಲಾಭವಿದೆ. ಮಾರ್ಚ್‌ ತಿಂಗಳಲ್ಲಿ ಭೂವ್ಯವಹಾರ ಗಳನ್ನು ಈ ಅವಧಿಯಲ್ಲಿ ನಿರ್ವಹಿಸುವಾಗ ಅತೀ ಎಚ್ಚರ ಅಗತ್ಯವಿದೆ. ಬಹುದಿನಗಳ ಬಳಿಕ ಅನುಭವಿಸಿದ ಕಹಿಯ ಅನುಭವ ಇನ್ನೂ ದೂರವಾಗುವ ಕಾಲ ಸನ್ನಿಹಿತವಾಗುವ ಸಮಯವಿದು. ಇದರ ಸದುಪಯೋಗ ಮಾಡಿಕೊಂಡಲ್ಲಿ ಯಶಸ್ಸು ನಿಶ್ಚಿತವೆನ್ನಬಹುದು. ವೈಭವದ ಅಲಂಕಾರಿಕ ಉಪಕರಣಗಳು ಮನೆಯನ್ನು ಅಲಂಕರಿಸಲಿವೆ. ಒಟ್ಟಿನಲ್ಲಿ ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಪರಿವರ್ತನೆಯನ್ನು ತಂದುಕೊಡಲಿದೆ. ಕಾರ್ಮಿಕ ವರ್ಗದವರಿಗೆ ಶ್ರಮಕ್ಕೆ ತಕ್ಕ ಯೋಗ್ಯ ಪ್ರತಿಫ‌ಲ ದೊರೆಯುತ್ತದೆ. ಬಂಧುಮಿತ್ರರ ಆಗಮನ ವರ್ಷವಿಡೀ ಸಂತಸದ ವಾತಾವರಣವನ್ನು ತಂದುಕೊಡಲಿದೆ. ನನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಮುಖ್ಯವಾಗಿ ಈ ವರ್ಷ ನಿಮ್ಮ ಆಶಾದೀಪ ಬೆಳಗುವ ಕಾಲ ಇದಾಗಿರುತ್ತದೆ. ಉತ್ತರಾಷಾಢ 2,3,4ನೇ ಪಾದ, ಶ್ರವಣಾ ಧನಿಷ್ಠಾ 1,2,3ನೇ ಪಾದ ಶುಭವಾರ: ಶನಿವಾರ, ಶುಭರತ್ನ: ಇಂದ್ರನೀಲ, ಶುಭದಿಕ್ಕು: ಪಶ್ಚಿಮ, ಶುಭವರ್ಣ: ನೀಲಿ, ಶುಭಲೋಹ: ಕಬ್ಬಿಣ.
ಕುಂಭ
ದೈವಬಲ ಇಲ್ಲದ ನಿಮಗೆ ಶನಿಯು ಇಷ್ಟಸ್ಥಾನದಲ್ಲಿ ಸಂಚರಿಸುವುದರಿಂದ ಶತ್ರುಗಳು ಹಿಮ್ಮೆಟ್ಟಿ ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಸ್ಥಿರತೆ ಕಾಣಬಹುದು. ಆರೋಗ್ಯವು ತುಸು ಮಟ್ಟಿಗೆ ತಾತ್ಕಾಲಿಕವಾಗಿ ಉತ್ತಮವಾಗಿ ತೋರಿದರೂ ಕಾಳಜಿ ಅಗತ್ಯವಿದೆ. ಅಷ್ಟಮದ ರಾಹುವಿನಿಂದ ಶತ್ರುಗಳ, ದಾಯಾದಿಗಳ ಕಲಹ, ಕಿರುಕುಳ ಹೆಚ್ಚುತ್ತಿರುವ ಖರ್ಚುವೆಚ್ಚಗಳಿಂದ ಧನಹಾನಿ, ಬಂಧುಗಳೊಂದಿಗೆ ವಾದವಿವಾದಗಳು ಒದಗುವುವು. ದೀಪಾವಳಿಯ ಅನಂತರ ಆರೋಗ್ಯವು ಉತ್ತಮವಿರುವುದಲ್ಲದೆ ವೈವಾಹಿಕ ಜೀವನದಲ್ಲಿ ಸುಖ, ಸಂತೋಷಗಳು, ಐಶ್ವರ್ಯ ಪ್ರಾಪ್ತಿ, ಹೆಚ್ಚಿನ ಜವಾಬ್ದಾರಿಗಳು ಹಾಗೂ ಕೆಲವೊಂದು ಮಹಣ್ತೀದ ಸಂಗತಿಗಳು ಈ ವರ್ಷ ಕೈಗೂಡುವ ಸಂಭವವಿದೆ. ಜನವರಿ ಅನಂತರ ಹೆಚ್ಚಿನ ಪ್ರಗತಿ ತೋರಿಬಾರದಿದ್ದರೂ ಧರ್ಮ ನ್ಯಾಯಗಳಿಗೆ ಸಮ್ಮತವಲ್ಲದ ಸಂಗತಿಗಳಲ್ಲಿ ಪ್ರವೃತ್ತರಾಗುವ ಪ್ರಸಕ್ತಿ ಉಂಟಾದೀತು. ಭೂವ್ಯವಹಾರಾದಿಗಳಲ್ಲಿ ಜಯ ಲಾಭ, ವ್ಯಾಜ್ಯಗಳಲ್ಲಿ ಅನುಕೂಲ ಫ‌ಲ, ಆರ್ಥಿಕ ಇಷ್ಟ ಸಿದ್ಧಿ. ಆರೋಗ್ಯದ ಕುರಿತು ಕಾಳಜಿ ಅಗತ್ಯವಿರುತ್ತದೆ ಹಾಗೂ ಲಾಭನಷ್ಟಗಳೂ ಅಧಿಕ. ಮಾರ್ಚ್‌ ತಿಂಗಳಲ್ಲಿ ತುಸು ನೆಮ್ಮದಿ ತೋರಿಬಂದರೂ ಆಹಾರ ವ್ಯತ್ಯಯದಿಂದಾಗಿ ದೇಹಾರೋಗ್ಯವು ಕೆಡುವ ಸಂಭವವಿದೆ. ಚಿಂತಿತ ಕಾರ್ಯವು ದುಷ್ಟ ಜನರಿಂದಾಗಿ ನಿಂತುಬಿಡುತ್ತದೆ. ಜೂನ್‌ ತಿಂಗಳಲ್ಲಿ ಆರ್ಥಿಕ ತಾಪತ್ರಯವಿರದಿದ್ದರೂ ಇತರ ದೃಷ್ಟಿಯಿಂದ ಅಸಮಾಧಾನಕರವಾಗಿದೆ. ಭೀತಿ ಮನೋಭಾವ ನಿತ್ಯವಾಗಿರುತ್ತದೆ. ಸುಖದುಃಖಗಳು ಸರಿಸಮಾನವಾಗಿ ಶುಭಾಶುಭ ಮಿಶ್ರ ಫ‌ಲದಾಯಕವಾಗಿರುತ್ತದೆ. ಬಹುಜನರೊಂದಿಗೆ ಕಲಹ, ದುಃಖ, ಶತ್ರು ಪೀಡೆ, ಮಿತ್ರಧನ, ಬಾರ್ಯಾದಿ ಸುಖಹಾನಿ, ಕುಟಿಲ ಮನಸ್ಸಿನಿಂದ ಇನ್ನಷ್ಟು ಹಾನಿಯಾಗದಿರಲು ಆದಷ್ಟು ಶ್ರೀಕುಲದೇವರ ಅನುಗ್ರಹ ಪಡೆಯಲು ಯತ್ನಿಸಿದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ಮುಂದೆ ದೈವಾನುಕೂಲವೂ ಒದಗಿ ಸ್ಥಾನಮಾನ, ಸಂಪತ್ತುಗಳ ಅಭಿವೃದ್ಧಿ. ಧನಿಷ್ಠಾ 2, 4ನೇ ಪಾದ, ಶತಭಿಷಾ, ಪೂರ್ವಾಭಾದ್ರಾ 1,2,3ನೇ ಪಾದ ಶುಭವಾರ: ಶನಿವಾರ ಶುಭರತ್ನ: ಕಡುನೀಲಿ, ಶುಭ ದಿಕ್ಕು: ಪಶ್ಚಿಮ ಶುಭವರ್ಣ: ಕಡು ಕಪ್ಪು, ಶುಭ ಲೋಹ: ಕಬ್ಬಿಣ.
ಮೀನ
ಜನ್ಮರಾಶಿಯಲ್ಲಿ ಸಂಚರಿಸುವ ರಾಹುಕೇತು, ಕಾಳಸರ್ಪ ದೋಷ, ಶನಿಗಳಿಂದಾಗಿ ಧನ ಸಂಪದಾದಿಗಳ ಹಾನಿ. ಭಯ, ದುಃಖ, ಚಿಂತೆ, ಸ್ಥಾನ ಚಲನೆ, ಸ್ವಜನ, ಗುರುಜನರ ವೈರ, ಕೆಲಸ ಕಾರ್ಯಗಳಲ್ಲಿ ಅಡ್ಡಿ, ಆತಂಕ ಹಾಗೂ ಅಸಫ‌ಲತೆ, ಶತ್ರುಗಳಿಂದ ಧನಪರಿಹಾರ, ಕುಟುಂಬ ವರ್ಗದವರಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ, ಅನಾರೋಗ್ಯ, ಪ್ರಯಾಣ ಇತ್ಯಾದಿಗಳು ಬಹುಪ್ರಕಾರ ತೋರಿಬರುತ್ತವೆ. ಅನಂತರ ಗುರುಬಲದಿಂದ ಆರೋಗ್ಯದಲ್ಲಿ ಉತ್ತಮ ಸುಧಾರಣೆ, ಶತ್ರುಗಳಿಂದ ಮುಕ್ತಿ, ದುಃಖ ಮತ್ತು ಮಾನಸಿಕ ವ್ಯಥೆಗಳು ಕಮ್ಮಿಯಾಗಲಿವೆ. ಸಂತಾನ ಚಿಂತೆ, ಸ್ವಜನರೊಡನೆ ಕಲಹವುಂಟಾದೀತು. ಮುಂದೆ ಡಿಸೆಂಬರ್‌ನಲ್ಲಿ ಆರ್ಥಿಕ ವಿಚಾರದಲ್ಲಿ ಉತ್ತಮ ಬೆಳವಣಿಗೆ ತೋರಿಬರುತ್ತದೆ. ಫೆಬ್ರವರಿ ತಿಂಗಳಲ್ಲಿ ಶತ್ರು ಸಂಬಂಧೀ ಕಷ್ಟಗಳಿಂದ ಬಿಡುಗಡೆ. ರೋಗನಾಶ, ಧನಪ್ರಾಪ್ತಿ, ಕಾರ್ಯಜಯ ಇತ್ಯಾದಿ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ಆಯವ್ಯಯಗಳು ಸಮತೂಕದಲ್ಲಿ ನಿಲ್ಲಲಿರುವುದಾದರೂ ವ್ಯವಹಾರದಲ್ಲಿ ಆತ್ಮೀಯರಿಂದಲೇ ವಂಚಿತರಾಗಲಿರುವಿರಿ. ಮಾರ್ಚ್‌ ಅನಂತರ ವ್ಯಾಪಾರಿಗಳಿಗೆ ಹೆಚ್ಚಿನ ಆರ್ಥಿಕ ಸ್ಥಿತಿ ಉಂಟಾಗಿ ಬಂಧುವರ್ಗದ ಸಹಕಾರ ದೊರಕಲಿದೆ. ಜೂನ್‌ ಅನಂತರ ಅರ್ಥರ್ಜನೆಯ ಮಾರ್ಗ ಸುಗಮವಿದ್ದರೂ ಖರ್ಚಿನ ಅಂಶವು ಮಿತಿಮೀರುವುದು. ಅನಂತರ ಆರ್ಥಿಕ ಸ್ಥಿತಿಯು ಉತ್ತಮವಿದ್ದು ಸುಖೋಪಕರಣಗಳ ಸಂಗ್ರಹ ಹಾಗೂ ದೇಹಾರೋಗ್ಯ ವಿಷಯದಲ್ಲಿ ಪುಷ್ಟಿಕರವಾಗಿದ್ದು, ಅಪೇಕ್ಷಿತ ಸುಖ, ಸಿದ್ಧಿ ಉಂಟಾಗಲಿದೆ. ವಿದ್ಯಾರ್ಥಿ ವರ್ಗದವರಿಗೆ ವಿದ್ಯಾಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ತೋರಿಬಂದರೂ ಉದಾಸೀನತೆ ಸಲ್ಲದು. ಉದ್ಯೋಗದಲ್ಲಿ ಅವಕಾಶಗಳು ದೊರೆತು ಸಮಸ್ಯೆಗಳು ಪರಿಹಾರ ಕಾಣಲಿವೆ. ಮಹಿಳೆಯರಿಗೆ ದೀಪಾವಳಿಯ ಅನಂತರ ಉದ್ಯೋಗದಲ್ಲಿ ಭಡ್ತಿ, ಉನ್ನತ ವ್ಯಾಸಂಗದಲ್ಲಿ ಪ್ರಗತಿ ಇದೆ. ಆವಶ್ಯಕ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಫ‌ಲ ತೋರಿಬರಲಿದೆ. ಕಾಳಸರ್ಪದ ಗ್ರಹಚಾರದ ಉಪಶಮನಕ್ಕಾಗಿ ಪ್ರತೀ ಸೋಮವಾರ ಅನಂತೇಶ್ವರನ ಆರಾಧನೆ ಅನುಗ್ರಹಕರವಾಗಲಿದೆ. ಪೂರ್ವಾಭಾದ್ರಾ 4ನೇ ಪಾದ, ಉತ್ತರಾಭಾದ್ರಾ , ರೇವತಿ ಶುಭವಾರ: ಗುರುವಾರ ಶುಭರತ್ನ: ಶ್ವೇತ, ಪುಷ್ಯರಾಗ, ಶುಭದಿಕ್ಕು: ಈಶಾನ್ಯ ಶುಭವರ್ಣ: ಶುಭ್ರ ಬಿಳಿ, ಶುಭ ಲೋಹ: ಚಿನ್ನ.
 
Back to Top