Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ಸಾಂಸಾರಿಕವಾಗಿ ಹಿರಿಯರೊಡನೆ ಸಹನೆಯಿಂದ ವರ್ತಿಸಬೇಕಾದೀತು. ಅಷ್ಟಮ ಶನಿ ಪೀಡೆ ಇದ್ದರೂ ದೈವಾನುಗ್ರಹ ಇರುವುದರಿಂದ ಹೆಚ್ಚಿನ ಕ್ಲೇಶವಿರದು. ಪಿತ್ತೋಷ್ಣದಿಂದಾಗುವ ದೇಹರುಜೆ ಮಾನಸಿಕ ತೊಳಲಾಟಕ್ಕೆ ಕಾರಣವಾಗ ಬಹುದು. ರಾಜಕೀಯದಲ್ಲಿ ಉದ್ವೇಗ, ರಾಜಕೀಯ ವರ್ಗದವರಿಗೆ ಹೆಚ್ಚಿಸಲಿದೆ. ಆಕಸ್ಮಿಕ ಧನ ವಿನಿಯೋಗದಿಂದ ಕೈಗೊಂಡ ಕಾರ್ಯ ಸುಗಮವಾಗಲಿದೆ. ವೃತ್ತಿರಂಗದಲ್ಲಿ ಮಾತು ಮಿತ ವಿರದಿದ್ದರೆ ಗಂಡಾಂತರ ತಪ್ಪಿದ್ದಲ್ಲ. ವಿದ್ಯಾರ್ಥಿಗಳ ಅಭ್ಯಾಸಬಲಕ್ಕೆ ನಿಶ್ಚಿತರೂಪದಲ್ಲಿ ಉತ್ತಮ ಫ‌ಲಿತಾಂಶ ಸಿಗುತ್ತದೆ. ಸಂಚಾರದಲ್ಲಿ ಜಾಗ್ರತೆ ಇರಲಿ. ಶುಭವಾರ: ಬುಧ, ಗುರು, ಭಾನುವಾರ.
ವೃಷಭ
ನ್ಯಾಯಾಲಯದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಆಗಾಗ ದೇಹಾರೋಗ್ಯ ಏರುಪೇರಾಗಿ ಮನಕ್ಕೆ ನೋವು ತಂದೀತು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ವಿವಿಧ ಅವಕಾಶಗಳಿಂದ ಉದ್ಯೋಗಲಾಭವಾಗಲಿದೆ. ಅವಿವಾಹಿತರ ಪ್ರಯತ್ನಬಲ ಫ‌ಲಿಸಲಿದೆ. ಗೃಹಿಣಿಯ ಅನುಕಂಪದಿಂದ ಪತಿದೇವನಿಗೆ ಸಮಾಧಾನ ಕಂಡೀತು. ವಿದ್ಯಾಭ್ಯಾಸದಲ್ಲಿ ಮಕ್ಕಳ ಅಸಡ್ಡೆ ಆತಂಕಕ್ಕೆ ಕಾರಣವಾದೀತು. ತಂದೆ - ಮಕ್ಕಳೊಳಗೆ ವಿರಸಕ್ಕೆ ಕಾರಣವಾಗದಂತೆ ಕಾಳಜಿ ವಹಿಸಬೇಕಾದೀತು. ಆರ್ಥಿಕವಾಗಿ ಎಲ್ಲಾ ರೀತಿಯಲ್ಲಿ ಧನಾಗಮನದಿಂದ ಕಾರ್ಯಸಾಧನೆ ಆಗಲಿದೆ. ಶುಭವಾರ: ಗುರು, ಶುಕ್ರ, ಶನಿವಾರ.
ಮಿಥುನ
ರಾಜಕೀಯ ವ್ಯಕ್ತಿಗಳಿಂದ ತೊಂದರೆ ಕಾಣಿಸಲಿದೆ. ಅನಾರೋಗ್ಯದಿಂದ ವೈದ್ಯಕೀಯ ಖರ್ಚುವೆಚ್ಚಗಳು ಸೇರಲಿವೆ. ದುಡಿಯುವ ಕಾರ್ಮಿಕ ವರ್ಗದವರಿಗೆ ತುಸು ಚೇತರಿಕೆ ತೋರಿಬಂದೀತು. ಸರಕಾರಿ ಉದ್ಯಮಿಗಳಿಗೆ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ನಡೆದಾವು. ಸಮೂಹ ಯಜಮಾನಿಕೆಯ ಸಂಸ್ಥೆಗಳಲ್ಲಿ ವಂಚನೆ, ಬಿರುಕು ಕಾಣಿಸಲಿವೆ. ಜಾಗ್ರತೆ ವಹಿಸಬೇಕಾದೀತು. ಮುಸುಕಿನೊಳಗಿನ ಗುದ್ದಿನಿಂದ ಧನಸ್ರೋತಕ್ಕೆ ಅಡ್ಡಿಯಾದೀತು. ಹೊಸ ಗೆಳೆತನದಿಂದ ಸ್ಥಾನಮಾನವಿದೆ. ಅವಿವಾಹಿತರು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಬಲ ಹೆಚ್ಚಿಸಬೇಕಾಗುತ್ತದೆ. ಶುಭವಾರ: ಬುಧ, ಗುರು, ಶನಿವಾರ.
ಕಟಕ
ವೃತ್ತಿರಂಗದಲ್ಲಿ ಭಾರೀ ಬದಲಾವಣೆಯ ಸೂಚನೆ ತಂದೀತು. ಮಕ್ಕಳಿಂದ ಸುಖ, ಸಮಾಧಾನಗಳು ದೊರಕಲಿವೆ. ವಿವಿಧ ರೀತಿಯ ಧನ ಸಂಗ್ರಹದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ವ್ಯಾಪಾರಿಗಳ ಹೂಡಿಕೆ ಲಾಭಪ್ರದವಾಗಲಿದೆ. ಕಲೆ, ಶಿಕ್ಷಣ ವೃತ್ತಿಯಲ್ಲಿ ದುಡಿಯುವವರಿಗೆ ಹೆಚ್ಚಿನ ಜವಾಬ್ದಾರಿಯ ಹೊರೆ ಬೀಳಲಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲದ ಭಾಗ್ಯ ತಂದೀತು. ಕೌಟುಂಬಿಕವಾಗಿ ದಾಯಾದಿಗಳಿಂದ ಶತ್ರು ಬಾಧೆ ಅನುಭವಿಸಬೇಕಾದೀತು. ತಾಳ್ಮೆ, ಸಹನೆ ಇರಲಿ. ಶುಭವಾರ: ಮಂಗಳ, ಸೋಮ, ಭಾನುವಾರ.
ಸಿಂಹ
ಹಿರಿಯರ ಸೇವಾ ಶುಶ್ರೂಷೆಗಾಗಿ ಧನ ವ್ಯಯವಾಗಲಿದೆ. ಸಾಂಸಾರಿಕವಾಗಿ ಆಗಾಗ ಹಣದ ಮುಗ್ಗಟ್ಟು ಕಾಡಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಡಕು ತೋರಿಬಂದೀತು. ಗೃಹದಲ್ಲಿ ಬಂಧ್ವಾಗಮನದಿಂದ ಸಂತೋಷವಾಗಲಿದೆ. ನಿರು ದ್ಯೋಗಿಗಳಿಗೆ ಆಸೆ ಅನಿರೀಕ್ಷಿತವಾಗಿ ಫ‌ಲಿಸಲಿದೆ. ವಿವಾಹೇಚುfಗಳಿಗೆ ನಿರಾಶೆ ಕಂಡು ಬರುತ್ತದೆ. ಇನ್ನೂ ಹೆಚ್ಚಿನ ಪ್ರಯತ್ನಬಲವಿರಲಿ. ಗೃಹನಿರ್ಮಾಣ, ಭೂ ಖರೀದಿಗೆ ಬೆಲೆ ಹೆಚ್ಚಾದರೂ ಭಾಗ್ಯ ತಂದೀತು. ವ್ಯರ್ಥ ಪ್ರಯಾಣ, ಅನಾವಶ್ಯಕ ಧನಹಾನಿಗೆ ಕಾರಣವಾಗಲಿದೆ. ಆಗಾಗ ಕೋಪ ತಾಪಗಳಿಂದ ಉದ್ವೇಗಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಶುಭವಾರ: ಶುಕ್ರ, ಶನಿ, ಭಾನುವಾರ.
ಕನ್ಯಾ
ಹಣದ ಮುಗ್ಗಟ್ಟು ಹೆಚ್ಚಿನ ರೀತಿಯಲ್ಲಿ ಬಾಧಿಸದು. ಜಾಗರೂಕತೆಯಿಂದ ಕಾರ್ಯಕ್ಷೇತ್ರದಲ್ಲಿ ಹೆಜ್ಜೆಯಿಡಿ. ಸ್ವಾಭಿಮಾನಿಗಳಾದ ನಿಮಗೆ ವೃತ್ತಿಬಾಂಧವರ ಚಿತಾವಣೆ ಬೇಸರ ತಂದೀತು. ಶುಭಕಾರ್ಯಕ್ಕೆ ಆಗಾಗ ವಿಘ್ನಭಯ ತೋರಿ ಬಂದರೂ ಕಾರ್ಯಾನುಕೂಲ ನಿಶ್ಚಿತ ರೂಪದಲ್ಲಿ ಜರಗಲಿದೆ. ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿ, ಗುರುಹಿರಿಯರಿಗೆ ಸಮಾಧಾನ ತಂದೀತು. ಗೃಹದಲ್ಲಿ ಕೌಟುಂಬಿಕ ವರ್ಗದವರ ಆಗಮನವಿದೆ. ಅವಿವಾಹಿತರಿಗೆ ವೈವಾಹಿಕ ಭಾಗ್ಯ ಸಂತಸ ತಂದೀತು. ನೆರೆಹೊರೆಯವರ ಸಹಕಾರದಿಂದ ಮುನ್ನಡೆಗೆ ಹೆಚ್ಚಿನ ಸಾಧ್ಯತೆ ಇರುತ್ತದೆ. ಶುಭವಾರ: ಬುಧ, ಗುರು, ಮಂಗಳವಾರ.
ತುಲಾ
ಕಾರ್ಯಕ್ಷೇತ್ರದ ದೀರ್ಘ‌ಕಾಲಿಕ ಕಾರ್ಯಾರಂಭಗಳಿಗೆ ಅನುಕೂಲ ತಂದೀತು. ಗೃಹದಲ್ಲಿ ಶುಭಮಂಗಲ ಕಾರ್ಯಗಳು ನಡೆದಾವು. ಸರಕಾರಿ ಇಲಾಖೆ ಯಿಂದಲೋ ನ್ಯಾಯಾಲಯದ ವ್ಯವಹಾರಗಳಿಂದಲೋ ಲಾಭವಾಗಲಿದೆ. ಕ್ರೀಡಾ ವಿಚಾರದಲ್ಲಿ ಕ್ರೀಡಾಳುಗಳಿಗೆ ವಿಶೇಷ ರೀತಿಯ ಯಶಸ್ಸು ತಂದುಕೊಡಲಿದೆ. ಹಣಕಾಸಿನ ಸದ್ವಿನಿಯೋಗದ ಸಂತೃಪ್ತಿ ತಂದೀತು. ರಾಜಕೀಯ ಪ್ರವೃತ್ತಿಯವರಿಗೆ ಕಾದು ನೋಡುವ ಸಮಯವಿದು. ಅವಿವಾಹಿತರಿಗೆ ಯೋಗ್ಯ ಸಂಬಂಧಗಳಿಂದ ವಿವಾಹ ಸಂಪದವಿದೆ. ಸದುಪಯೋಗಿಸಿಕೊಳ್ಳಿ. ಸಾಂಸಾರಿಕ ಕೌಟುಂಬಿಕ ಸಮಸ್ಯೆಗಳ ನಿವಾರಣೆಯಾಗುತ್ತದೆ. ಶುಭವಾರ: ಶುಕ್ರ, ಬುಧ, ಕುಜವಾರ.
ವೃಶ್ಚಿಕ
ಯಾವುದೇ ರಂಗದಲ್ಲಿ ಸಾಕಷ್ಟು ವಿಮರ್ಶೆ ಮಾಡಿ ಮುಂದುವರಿಯಿರಿ. ಕೃಷಿ ಕಾರ್ಯದಲ್ಲಿ ಸಾಕಷ್ಟು ಧನಲಾಭವಿದೆ. ಆರೋಗ್ಯ ಕೊಂಚ ಏರುಪೇರಾದರೂ ಸಮಸ್ಯೆ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅನಾವಶ್ಯಕ ಅಸಮಾಧಾನವಾದೀತು. ನಿರುದ್ಯೋಗಿಗಳಿಗೆ ಪ್ರಯತ್ನಬಲವೇ ಆಧಾರವಾದೀತು. ಉದ್ಯೋಗಿಗಳಿಗೆ ಬದಲಾವಣೆಯ ಸಾಧ್ಯತೆ ಇರುತ್ತದೆ. ಅವಿವಾಹಿತರ ವೈವಾಹಿಕ ಸಂಬಂಧಗಳು ಸದ್ಯದಲ್ಲೇ ಫ‌ಲ ನೀಡಲಿವೆ. ಆದಾಯಕ್ಕೆ ಕೊರತೆ ತೋರದು. ಆಗಾಗ ಹಠ ಛಲಗಳಿಂದ ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾದೀತು. ದೂರ ಸಂಚಾರ ಹಾಗೂ ಚಾಲನೆಯಲ್ಲಿ ಜಾಗ್ರತೆ ಇರಲಿ. ಶುಭವಾರ: ಬುಧ, ಕುಜ, ಸೋಮವಾರ.
ಧನು
ಸರಕಾರಿ ಅಧಿಕಾರಿಗಳಿಂದ ಭೀತಿ ತಂದೀತು. ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ನಡೆದಾವು. ಇಷ್ಟಕಾರ್ಯಕ್ಕೆ ಶ್ರೀದೇವತಾನುಗ್ರಹವಿದೆ. ದೇಹಾರೋಗ್ಯ ಸುಧಾರಿಸುತ್ತಾ ಹೋಗಲಿದೆ. ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಕಾರ್ಯ ಕ್ಷಮತೆಗೆ ಪೂರಕವಾಗಲಿದೆ. ಆದರೂ ಅಪವಾದ ಭೀತಿ ತಪ್ಪದು. ಹಣಕಾಸಿನ ವಿಚಾರದಲ್ಲಿ ನಿಮ್ಮ ಧಾರಾಳತನ ನಿಮಗೆ ಸಮಸ್ಯೆ ತಂದೀತು. ಹಿಡಿತ ಇರಲಿ. ಕೌಟುಂಬಿಕವಾಗಿ ಪ್ರೀತಿ - ವಿಶ್ವಾಸ ಸಹಕಾರಗಳು ನಿಮಗೆ ಲಭಿಸಲಿವೆ. ಅಲ್ಪ ತೃಪ್ತಿಯೂ ಅಧಿಕ ಸುಖ ನೀಡಲಿದೆ. ವಾರಾಂತ್ಯದಲ್ಲಿ ಅವಿವಾಹಿತರಿಗೆ ಶುಭ ವಾರ್ತೆ ಮುನ್ನಡೆಗೆ ಕಾರಣವಾದೀತು. ಶುಭವಾರಗಳು: ಗುರು, ಬುಧ, ಕುಜವಾರ.
ಮಕರ
ಮಾನಸಿಕ ಅಸ್ಥಿರತೆಯೇ ಮೂಲಭೂತ ಹೇತುವಾಗಿ ಕಾಡಲಿದೆ. ನಾನಾ ರೀತಿಯಲ್ಲಿ ಖರ್ಚುವೆಚ್ಚಗಳಿದ್ದರೂ ಧನಾಗಮನ ಉತ್ತಮವಿದ್ದು ಸಮಾಧಾನ ವಿರುತ್ತದೆ. ರಾಜಕೀಯದಲ್ಲಿ ರಾಜಕೀಯ ವರ್ಗದವರಿಗೆ ತಾಟಸ್ಥ್ಯ ಧೋರಣೆ ಉತ್ತಮ. ವೃತ್ತಿರಂಗದಲ್ಲಿ ಪ್ರಗತಿ ಇದ್ದರೂ ಚಾಡಿ ಮಾತು ಗುಲ್ಲೆಬ್ಬಿಸಲಿದೆ. ನಿವೇಶನ ಖರೀದಿಯಂಥ ಮಹತ್ಕಾರ್ಯಗಳು ನಡೆದಾವು. ದೇವತಾ ಕಾರ್ಯಗಳ ಚಿಂತನೆ ಕಾರ್ಯ ಗತವಾದೀತು. ಸಂಚಾರವನ್ನು ಕಡಿಮೆ ಮಾಡಿದಷ್ಟು ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಕನಸು ನನಸಾಗುತ್ತದೆ. ಶುಭವಾರ: ಕುಜ, ಗುರು, ಭಾನುವಾರ.
ಕುಂಭ
ಹೊಸ ವೃತ್ತಿ-ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಬೆಳವ ಣಿಗೆ ತೋರಿಬರುತ್ತದೆ. ಬಗೆಹರಿಯದ ಸಮಸ್ಯೆಗಳು ಹಂತ ಹಂತವಾಗಿ ಮಾತುಕತೆಯಿಂದ ಪರಿಹಾರ ಕಾಣಲಿವೆ. ದಾಂಪತ್ಯದಲ್ಲಿ ಪ್ರೀತಿ - ವಿಶ್ವಾಸಗಳು ಹೆಚ್ಚಲಿದ್ದು ಸಾಂಸಾರಿಕ ಸುಖ ಅನುಭವಕ್ಕೆ ಬರುತ್ತದೆ. ಸಾಮಾಜಿಕ ಸಂಘ - ಸಂಸ್ಥೆಗಳಲ್ಲಿ ಸ್ಥಾನಮಾನಗಳು ದೊರಕಲಿವೆ. ಸದುಪಯೋಗಿಸಿಕೊಳ್ಳಿ. ದೇವತಾಕಾರ್ಯಗಳು ಮನಸ್ಸಿಗೆ ಶಾಂತಿಯನ್ನು ನೀಡಲಿವೆ. ಮುಂಜಿ, ಮದುವೆ ಇತ್ಯಾದಿ ಶುಭಕಾರ್ಯಗಳಿಗೆ ಸಕಾಲವಿದು. ದೇಹಾರೋಗ್ಯದಲ್ಲಿ, ಮಾನಸಿಕವಾಗಿ ಕೂಡ ಹೆಚ್ಚಿನ ರೀತಿಯಲ್ಲಿ ಜಾಗ್ರತೆ ವಹಿಸಬೇಕು. ಶುಭವಾರ: ಶನಿ, ಶುಕ್ರ, ಬುಧವಾರ.
ಮೀನ
ಆಗಾಗ ಪ್ರತಿಕೂಲತೆಗಳು ತೋರಿಬಂದು ಕಾರ್ಯಸಾಧನೆಗೆ ಅಡ್ಡಿಯಾದಾವು. ಆದರೂ ಪ್ರಯತ್ನಬಲ ಜಾರಿಯಲ್ಲಿರಲಿ. ಹಣಕಾಸಿನ ವಿಚಾರಗಳು ಆತಂಕಕ್ಕೆ ಕಾರಣವಾದರೂ ಆಗಾಗ ಧನಾಗಮನ ಸಮಸ್ಯೆಯನ್ನು ನೀಗಿಸಲಿದೆ. ಮುಖ್ಯವಾಗಿ ಹೆಚ್ಚಿನ ಪ್ರಯತ್ನಬಲ, ಆತ್ಮವಿಶ್ವಾಸ ಅಭಿವೃದ್ಧಿ ಖಂಡಿತ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಜಾಗ್ರತೆ ಮುಖ್ಯವಾಗಿರುತ್ತದೆ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯದ ಸಾಧ್ಯತೆ ಇರುತ್ತದೆ. ಪ್ರಯತ್ನಬಲ ಜಾರಿಯಲ್ಲಿರಲಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯವಿದೆ. ನಿರುದ್ಯೋಗಿಗಳು ಆಗಾಗ ನಿರಾಶೆಯನ್ನು ಅನುಭವಿಸಲಿದ್ದಾರೆ. ಆದರೂ ಪ್ರಯತ್ನ ಇರಲಿ. ಶುಭವಾರ: ಭಾನು, ಶನಿ, ಗುರುವಾರ.
 
Back to Top