Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಫ್ಯಾಶನ್‌ ಅಂದ್ರೆ ಫ್ಯಾಶನ್‌ ಅಷ್ಟೇ!

ಇವತ್ತಿನ ಆಧುನಿಕ ದಿನಮಾನಗಳಲ್ಲಿ ಏನೇ ಮಾಡಿದರೂ,ಏನೇ ನೋಡಿದರೂ ಅದು ಡಿಫ‌ರೆಂಟ್‌ ಆಗಿರಬೇಕು. ತನ್ನೊಟ್ಟಿಗೆ ಇರುವ ಜನರುಗಳಿಗಿಂತ ಭಿನ್ನವಾಗಿ
ಕಾಣಿಸಿಕೊಳ್ಳುವಂತಹ ಬಯಕೆ ಇಂದಿನ ಯುವಜನರಲ್ಲಿ ಇ¨ªೆ ಇರುತ್ತದೆ. ಇವತ್ತಿನ ಆಧುನಿಕ ರಂಗದಲ್ಲಿ ಇಡೀ ದೇಶ ಪ್ರಗತಿದಾಯಕ ಹಾದಿಯಲ್ಲಿ ಸಾಗುತ್ತಿರುವಾಗ ಮನುಷ್ಯನ ಜೀವನ ಶೈಲಿಯೇ ಬದಲಾಗಿದೆ. ಜಗತ್ತಿನ ಕಾಲ ಮತ್ತು ವಿದ್ಯಮಾನಗಳಿಗೆ ತಕ್ಕಂತೆ ಬದಲಾವಣೆಯನ್ನು ಹೊಂದುವುದು ಜಗದ ನಿಯಮ ಎಂಬ ಮಂತ್ರಪಾಲನೆಯೊಂದಿಗೆ ಹೊಸದಾದ ತಂತ್ರಜ್ಞಾನ, ಅಭಿವೃದ್ಧಿಯ ನಡುವೆ ದಿನನಿತ್ಯದ ಪ್ರತಿಯೊಂದು ಕಾರ್ಯವೂ ಭಿನ್ನವಾಗಿರಬೇಕು. ಈ ಭಿನ್ನತೆಯೇ ಇಂದು ಫ್ಯಾಶನ್‌ ಆಗಿ ಮಾರ್ಪಾಡಾಗಿರುವಂತಹದು.
ಜನರಲ್ಲಿ ಫ್ಯಾಶನ್‌ ಎಂಬುದು ಒಂದು ಹೊಸ ಟ್ರೆಂಡ್‌ ಆಗಿ ಮಾರ್ಪಾಡಾಗಿದ್ದು ಈ ಫ್ಯಾಶನ್ನಿನ ಮೋಡಿಗೆ ಒಳಗಾಗದ ವ್ಯಕ್ತಿಗಳಿಲ್ಲ. ಧರಿಸುವ ಬಟ್ಟೆಗಳಿಂದ ಹಿಡಿದು ದಿನಬಳಕೆಯ ಪ್ರತಿ ವಸ್ತುಗಳು ಫ್ಯಾಶನ್‌ಮಯವಾಗಿರಬೇಕೆಂಬ ಹಂಬಲದೊಂದಿಗೆ ಪ್ರಯತ್ನಿಸುತ್ತಿರುತ್ತಾರೆ. ಯಾವಾಗ ನಮ್ಮ ದೇಶದಲ್ಲಿ ಈ ಫ್ಯಾಶನ್‌ ಶುರುವಾಯಿತೋ ಅಂದಿನಿಂದಲೇ ನಮ್ಮ ಸಂಸ್ಕೃತಿಯು ಕೂಡ ಅವನತಿಯತ್ತ ಸಾಗಲಾರಂಭಿಸಿತು. ಜನ ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತ, ಬೇರೆ ದೇಶದ ಸಂಸ್ಕೃತಿಯನ್ನು ಇಷ್ಟಪಡುತ್ತ, ಅಲ್ಲಿ ಕಂಡಂತಹ ಹೊಸತನವನ್ನು ರೂಢಿಸಿಕೊಳ್ಳುವುದರೊಂದಿಗೆ ಅವರಂತೆ ಕಾಣಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿ ಫ್ಯಾಶನ್‌ನ್ನು ಅನುಕರಣೆ ಮಾಡಲಾರಂಭಿಸಿದರು.

ಇಂದಿನ ಮಾಡರ್ನ್ ಯುಗದಲ್ಲಿ ಪ್ರತಿಯೊಂದು ಕಾರ್ಯದಲ್ಲಿಯೂ ಫ್ಯಾಶನ್‌ ಎಂಬುದು
ಆವರಿಸಿಕೊಂಡಿದೆ. ಅದರಲ್ಲೂ ಹುಡುಗ, ಹುಡುಗಿಯರಂತೂ ಒಬ್ಬರಿಗಿಂತ ಒಬ್ಬರದು ಮೀರಿಸುವ ರೀತಿ. ತಮಗೆ ಇಷ್ಟವಾದ ವ್ಯಕ್ತಿಯ ಉಡುಗೆ, ತೊಡುಗೆ, ಇನ್ನಿತರ ಶೈಲಿಗಳನ್ನು ಅನುಕರಣೆ ಮಾಡುವುದರ ಮೂಲಕ ಅವರಂತೆ ಕಾಣಲು ಬಯಸುತ್ತಾರೆ. ಇನ್ನೂ ಕೆಲವರದು ಅತಿಯಾದ ಫ್ಯಾಶನ್‌. ನೀಟಾಗಿದ್ದ ಪ್ಯಾಂಟ್‌ ಮತ್ತು ಶರ್ಟ್‌ಗಳನ್ನು ಧರಿಸುವದನ್ನು ಬಿಟ್ಟು ಹರಿದಂತಹ ಹಾಗೂ ತೂತು ಇರುವ ಬಟ್ಟೆಗಳನ್ನ ಧರಿಸುತ್ತಾರೆ.
ಕೆಲವು ಹುಡುಗರು, ಹುಡುಗಿಯರ ಹಾಗೇ ಕಿವಿಯಲ್ಲಿ ರಿಂಗ್‌ ಧರಿಸಿ, ತಲೆಗೂದಲನ್ನು
ಉದ್ದನೆಯದಾಗಿ ಬಿಟ್ಟು ಹೇರ್‌ಬ್ಯಾಂಡ್‌ ಧರಿಸಿ ಭಿನ್ನವಾದ ಕೇಶನ್ಯಾಸದೊಂದಿಗೆ ಫ್ಯಾಶನ್‌ ಮಾಡುತ್ತಾರೆ.ಒಟ್ಟಿನಲ್ಲಿ ಮತ್ತೂಬ್ಬರಿಂದ ಮೆಚ್ಚುಗೆ ಪಡೆಯಲು, ಹೆಂಗಳೆಯರ ಮನಸೆಳೆಯಲು ತಮಗಿಷ್ಟವಾದ ರೀತಿಯಲ್ಲಿ ಫ್ಯಾಶನ್‌ ಮಾಡುತ್ತಾರೆ. ಇದು ಒಂದು ರೀತಿಯ ಖುಷಿಯಾಗಿ ಕಂಡುಬರುವಂತದಾಗಿದ್ದು ಯುವಕರನ್ನು ಕೇಳಿದರೇ 'ಜಸ್ಟ್‌ ಫಾರ್‌ ಎ ಫ್ಯಾಶನ್‌' ಎನ್ನುತ್ತಾರೆ.

ಹುಡುಗಿಯರನ್ನು ನೋಡುವಂತಹುದಾದರೆ ಹುಡುಗರಿಗಿಂತ ತಾವೂ ಯಾವುದರಲ್ಲಿಯೂ ಕಡಿಮೆ ಇಲ್ಲವೆಂದು ತೋರಿಸಲು ಅವರೂ ಟೀಶರ್ಟ್‌, ಜೀನ್ಸ್‌ಪ್ಯಾಂಟ್‌, ಚಪ್ಪಲಿಗಳನ್ನು ಧರಿಸುವರು. ಇದರಿಂದ ಹುಡುಗ- ಹುಡುಗಿ ಯಾರೆಂಬ ಗುರುತು ಹಿಡಿಯುವದು ಕಷ್ಟವಾಗುತ್ತೇ. 

ಹಿಂದಿನ ದಿನಗಳಲ್ಲಿ ಮಹಿಳೆಯರು ಧರಿಸುವ ಆಭರಣಗಳು ಮತ್ತು ಸೀರೆಗಳು ಕೇವಲ ಮದುವೆಗೆ ಮಾತ್ರ ಸೀಮಿತವಾಗಿವೆ. ಈ ಮಾಡರ್ನ್ ಮಯ ಜಗತ್ತಿನ ನಡುವೆ ಪ್ಯಾಷನ್‌ ಆಗಿ ಕಾಣಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ವಿವಿಧ ಬಣ್ಣಗಳಿಂದ ಮುಖಕ್ಕೆ ಮೇಕಪ್‌, ಪಳಪಳನೆ ಹೊಳೆಯುವ ಕಣ್ಣುಗಳಿಗೆ ಕಪ್ಪು ಕಾಡಿಗೆ, ದಿನಕ್ಕೊಂದು ಬಗೆಯ
ಕೇಶವಿನ್ಯಾಸಗಳು, ಮ್ಯಾಚಿಂಗ್‌ ಬಟ್ಟೆಗಳು, ಅದೇ ಬಣ್ಣದ ಚಪ್ಪಲಿಗಳು, ಹೀಗೆ ಅಂದವಾಗಿ ಕಾಣಿಸಿಕೊಳ್ಳುವದಕ್ಕಾಗಿ ಹಲವು ರೀತಿಯಾಗಿ ಫ್ಯಾಶನ್‌ ಮಾಡುತ್ತಾರೆ.

ಇದೇ ರೀತಿ ಮುಂದುವರೆದು ಇಂದಿನ ಪೀಳಿಗೆಯ ಹುಡುಗಿಯರಿಗೆ ಮದುವೆಯಾಗುವಾತ ಸಭ್ಯನಾಗಿ ಸಾಫ್ಟ್ವೇರ್‌ ಹುಡುಗ ಸಿಕ್ಕರೇ ಇಷ್ಟವಾಗುವದಿಲ್ಲ, ಇವರಿಗೆ ಫ್ಯಾಶನ್‌ ಆಗಿರುವ ಗಂಡು ಮಾತ್ರ ಇಷ್ಟವೆನ್ನುತ್ತಾರೆ. ಕಾರಣ, ಇಂದಿನ ಪೀಳಿಗೆಯ ಜನರಿಗೆ ಮೋಜು, ಮಸ್ತಿ
ಬೇಕು. ಈ ಫ್ಯಾಶನ್‌ ಎಂಬುವಂತಹದು ಯುವಕ-ಯುವತಿಯರಿಗೆ ಮಾತ್ರ ಸೀಮಿತವಾಗಿಲ್ಲ. ಚಡ್ಡಿವಾಲಾಗಳಾದ ಚಿಕ್ಕ ಮಕ್ಕಳಿಂದ ಹಿಡಿದು ಮುದುಕ, ಮುದುಕಿಯರ ಫ್ಯಾಶನ್‌ ಹೇಳತೀರದು.

ವಯಸ್ಸಾದರೂ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಆಗಿ ಶೂ ಹಾಕಿ, ಡ್ರೆಸ್‌ ಮಾಡಿಕೊಂಡದ್ದನ್ನು ನೋಡಿದರೇ ಇನ್ನು ಹರೆಯದವರ ಹಾಗೇ ಕಾಣುತ್ತಾರೆ.

ಫ್ಯಾಶನ್‌ ಎಂಬುದಕ್ಕೆ ಕೊನೆಯಿಲ್ಲ. ದಿನದಿಂದ ದಿನಕ್ಕೆ ಜನರಿಗೆ ಹೊಸ ಹೊಸ ಶೈಲಿಯ ಪರಿಚಯವಾಗುತ್ತೆ. ಇದರಿಂದಾಗಿ ಜನ ಬೇರೆ ದೇಶದ ಸಂಸ್ಕೃತಿಯನ್ನು, ಸಂಪ್ರದಾಯಗಳನ್ನು, ಅಲ್ಲಿನ ಜನರ ಜೀವನ ಶೈಲಿಯನ್ನು ಅನುಕರಿಸುತ್ತಿ¨ªಾರೆ.
ಮುಂದಿನ ದಿನಮಾನಗಳಲ್ಲಿ ಭಿನ್ನ ರೀತಿಯದಾದ ಫ್ಯಾಶನ್‌ ದಿನಗಳು ಬರಬಹುದು ಆದರೆ ಇದರ ಅನುಕರಣೆಯಿಂದ ಯಾವುದೇ ತೊಂದರೆಯಿಲ್ಲ, ಆದರೆ ಜನ ಅತಿಯಾದ ಅನುಕರಣೆಯಿಂದ ದೇಶದ ಸಂಸ್ಕೃತಿಯನ್ನು ಮರೆಯಬಾರದು ಅಷ್ಟೆ.

ಶಿವರಾಯ ಪೂಜಾರಿ
ಎಸ್‌.ಡಿ.ಎಮ್‌ ಕಾಲೇಜು, ಉಜಿರೆ

 

Trending videos

 
ಓದುಗರ ಅಭಿಪ್ರಾಯ
Back to Top