Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅತಿಕಾಯ ಮೋಕ್ಷ!

ಮ್ಯಾಮ್‌, ನನ್ನ ವಯಸ್ಸು 25. ನನ್ನ ಸಮಸ್ಯೆ ಏನೆಂದರೆ, ನಾನು ಎರಡು ವರ್ಷದ ಹಿಂದೆ ಬಹಳ ತೆಳ್ಳಗಿದ್ದೆ. ಆದರೆ ಈಗ ಬಹಳವೇ ದಪ್ಪವಾಗಿ ಬಿಟ್ಟಿದ್ದೇನೆ. ಆದ್ದರಿಂದ ನಾನು ನಿತ್ಯ ಕಟ್ಟುನಿಟ್ಟಾಗಿ ಡಯಟ್‌ ಮಾಡಲು ಪ್ರಾರಂಭಿಸಿದ್ದೇನೆ. ಆದರೆ ನನಗೆ ಜಿಮ್‌ಗೆ ಹೋಗಲು ಅಥವಾ ಬೆಳಗಿನ ವಾಕ್‌ಗೆ ಹೋಗಲು ಸಮಯ ಇರುವುದಿಲ್ಲ. ಆದ್ದರಿಂದ ನಾನು ಮನೆಯಲ್ಲೇ ಒಂದು ಜಿಮ್‌ ಸೈಕಲ್‌ ಹಾಕಿಸಿಕೊಂಡು ಬಿಡುನ ಸಮಯದಲ್ಲಿ ವರ್ಕ್‌ಔಟ್‌ ಮಾಡಿದರೆ ಒಳಿತಲ್ಲವೇ? ದಯವಿಟ್ಟು ತಿಳಿಸಿ.
-ಪ್ರದೀಪ, ದೊಡ್ಡಬಳ್ಳಾಪುರ

ದಿನ ನಿತ್ಯ ವ್ಯಾಯಾಮ ಮಾಡುವುದರ ಮೂಲಕ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಅಥವಾ ಅದನ್ನು ಸಹಜ ಸ್ಥತಿಯಲ್ಲಿ ಇಡಬಹುದು.  ನಿಮಗೆ ಜಿಮ್‌ ಸೈಕಲ್‌ ಹೊಡೆಯಲು ಸಾಧ್ಯವಾಗದಿದ್ದರೆ ಇಲ್ಲೊಂದು ಬೇರೆ ಮಾರ್ಗೋಪಾಯವಿದೆ. ದಿನ ನಿತ್ಯ ಕನಿಷ್ಟ 15 ರಿಂದ 40 ನಿಮಿಷದವರೆಗೆ ಸೈಕಲ್‌ ತುಳಿಯಿರಿ. ಆಗ ನಿಮ್ಮ ದೇಹದ ತೂಕ ಸಹಜ ಸ್ಥಿತಿಗೆ ಬಂದು ಬಿಡುತ್ತದೆ. ಇದರ ಜೊತೆ ನಿಮ್ಮ ಆಹಾರದ ಮೇಲೆ ನಿಮಗೆ ಗಮನ ಇರಲಿ. ಆದಷ್ಟು ಜಂಕ್‌ ಫ‌ುಡ್‌ ಮತ್ತು ಕರಿದ ತಿಂಡಿಗಳಿಗೆ ಬ್ರೇಕ್‌ ನೀಡಿ. ದಿನನಿತ್ಯ ಯಥೇತ್ಛವಾಗಿ ನೀರನ್ನು ಕುಡಿಯಿರಿ. ಹೆಚ್ಚೆಚ್ಚು ಹಣ್ಣುಹಂಪಲು, ತರಕಾರಿಗಳು, ಕಾಳುಗಳನ್ನು ಸೇವಿಸಿ. ಡಯಟ್‌ನಿಂದಾಗಿ ಶೇ.70ರಷ್ಟು ದೇಹದ ತೂಕ ಇಳಿಸಲು ಸಾಧ್ಯ. ಇವೆಲ್ಲವನ್ನೂ ತಪ್ಪದೇ ಪಾಲಿಸಿದ್ದಲ್ಲಿ ನಿಮ್ಮ ದೇಹದ ತೂಕ ಇಳಿದು, ನೀವು ಫಿಟ್‌ ಆಗುತ್ತೀರಿ.

ನನಗೀಗ 55 ವರ್ಷ. ನಾನು 10 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದೇನೆ. ನಾನು ಯಾವುದೇ ಔಷಧಿ ಮಾಡಿದರೂ ನನ್ನ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಆಗಲೇ ಇಲ್ಲ. ನಾನು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಯಾವ ರೀತಿಯ ಕಸರತ್ತನ್ನು ನಡೆಸಬೇಕು, ದಯವಿಟ್ಟು ತಿಳಿಸಿಕೊಡಿ.
-ಚಂದ್ರಕಲಾ, ರಾಮನಗರ

ಮಧುಮೇಹ ಎಂಬುದು ಮೆಟಬಾಲಿಕ್‌ ಆದ ವ್ಯತ್ಯಾಸಗಳಿಂದಲೂ ಉಂಟಾಗಬಹುದಾದ ಸಮಸ್ಯೆ. ದೇಹದ ತೂಕ ಹೆಚ್ಚಿದರೂ ಮಧುಮೇಹ ಕಾರಣವಾಗುತ್ತದೆ. ಇದಕ್ಕೆ ರಾಮ ಬಾಣ ಎಂದರೆ ವ್ಯಾಯಾಮ. ದಿನ ನಿತ್ಯ ವ್ಯಾಯಮ ಮಾಡುವುದರಿಂದ ದೇಹದ ತೂಕ ಇಳಿಸುವುದರ ಜೊತೆಗೆ ರಕ್ತದಲ್ಲಿ ಸಕ್ಕರೆಯ ಅಂಶವೂ ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆ ಆಹಾರ ಸೇವನೆಯ ಬಗೆಗೆ ಗಮನ ಇಡುವುದು ಅಷ್ಟೇ ಮುಖ್ಯ. ಮಧುಮೇಹ ಇರುವವರು ಪಿಷ್ಠ ಇರುವ ಬೇಳೆ ಕಾಳುಗಳನ್ನು ಸೇವಿಸಬೇಕು. ಜೊತೆಗೆ ನಿತ್ಯ 40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ನಿಮ್ಮ ತೂಕವನ್ನು ಇಳಸಿಕೊಳ್ಳಬಹುದು.

 

Trending videos

 
ಓದುಗರ ಅಭಿಪ್ರಾಯ
Back to Top