Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅ-ಪಾರದರ್ಶಕ ಗೌನು ನೇಹಾ ಫ್ಯಾಷನ್ನು

ಈಕೆ ನೇಹಾ ಪಾಟೀಲ್‌. "ವೈಫ್ ಆಫ್ ದೇವದಾಸ್‌',  "ಟೈಟಲ್‌ ಬೇಕಾ' "ಫೆ.14', "ಸ್ಲಂ' "ಸ್ಟೋರಿ ಕಥೆ' ಸೇರಿದಂತೆ ಕನ್ನಡದ ಒಂದಿಷ್ಟು ಸಿನಿಮಾಗಳ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ "ಸಿತಾರಾ' ಸಿನಿಮಾದ ಆಡಿಯೋ ರಿಲೀಸ್‌ ಸಮಾರಂಭದಲ್ಲಿ ನೇಹಾ ಧರಿಸಿದ್ದ ಟ್ರಾನ್ಪರೆಂಟ್‌ ಸೆಲ್ವಾರ್‌ ಡ್ರೆಸ್‌ ವಿಭಿನ್ನತೆಯಿಂದ ಗಮನ ಸೆಳೆಯಿತು. 
*
ಹುಬ್ಬಳ್ಳಿ ಬೆಳಗಾಂ ಮತ್ತು ಬೆಂಗಳೂರು ಈ ಮೂರೂ ನಗರಗಳನ್ನೂ ತನ್ನೂರು ಅಂದುಕೊಂಡಿರೋ ಹುಡುಗಿ ನೇಹಾ ಪಾಟೀಲ್‌. ಮೊನ್ನೆ ಹುಬ್ಬಳ್ಳಿಯ ಅಜ್ಜಿಮನೆಗೆ ನಾಗರಪಂಚಮಿ ಹಬ್ಬಕ್ಕೆ ಹೋಗಿದ್ರಂತೆ. ಮೊಮ್ಮಕ್ಕಳು ಬರೋ ಖುಷಿಗೆ ಅಜ್ಜಿ ಅವರಿಗೆ ಅಂತ ಚೆಂದದ ಸೀರೆ ತೆಗೆಸಿಟ್ಟಿದ್ರು. ಹಬ್ಬದ ದಿನ ನೇಹಾ ಸೇರಿ ಮೂವರು ಮೊಮ್ಮಕ್ಕಳಿಗೂ ಅಜ್ಜಿಯೇ ಕಚ್ಚೆ ಸೀರೆ ಉಡಿಸಿದ್ರಂತೆ. ಜೋಕಾಲಿಯಲ್ಲಿ ಕೂರಿಸಿ ಅವ್ರೇ ತೂಗಿದ್ರಂತೆ. ಕಚ್ಚೆ ಸೀರೆ, ಸಾಂಪ್ರದಾಯಿಕ ಸರ, ಬಳೆ, ಜಿಮ್ಕಿ ಯಲ್ಲಿ ಹಬ್ಬ ಕಳೆಯೇರಿತ್ತಂತೆ. 

 "ಸಾಂಪ್ರದಾಯಿಕ ಉಡುಗೆಗಳು ಇಂತಹ ಸನ್ನಿವೇಶಗಳನ್ನು ಮೆಲುಕುಹಾಕುವ ಹಾಗೆ ಮಾಡುತ್ತವೆ. ಅದ್ರಲ್ಲಿ ಉಡುಪಿನ ಅಂದಚೆಂದಕ್ಕಿಂತ ಅಕ್ಕರೆ ಬೆರೆತಿರುವುದು ಮನಸ್ಸಿಗೆ ಹೆಚ್ಚು ಆಹ್ಲಾದ ನೀಡುತ್ತದೆ'  ಎನ್ನುವ ನೇಹಾ ಪಾಟೀಲ್‌ ಎಲ್ಲ ಬಗೆಯ ಉಡುಪುಗಳನ್ನೂ ಇಷ್ಟಪಡುತ್ತಾರೆ. ಅದರಲ್ಲೂ ಎಥಿ°ಕ್‌ ವೆರೈಟಿ ಅಂದರೆ ಆ ಉಡುಪಿನ ಮೇಲೆ ಹೆಚ್ಚು ಪ್ರೀತಿ. ಅವರು "ಸಿತಾರಾ' ಸಿನಿಮಾದ ಆಡಿಯೋ ರಿಲೀಸ್‌ ಸಮಾರಂಭದಲ್ಲೂ ಸಾಂಪ್ರದಾಯಿಕ ಮಾದರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ರು. 

ಮೊಣಕಾಲನ್ನ ದಾಟಿ ಕೆಳಗಿಳಿಯೋ ನೀ ಲೆನ್‌¤ ಟಾಪ್‌, ಬ್ಲ್ಯಾಕ್‌ ಕಲರ್‌ ಪ್ಯಾಂಟ್‌ನ ಅಂಚಿನಲ್ಲಿ ಕೈಯಲ್ಲಿ ಹೆಣೆದ ಡಿಸೈನ್‌ಗಳಿವೆ. ಈ ಡ್ರೆಸ್‌ ನಾರ್ಮಲ್‌ ಅನ್ನಿಸಿದ್ರೂ ಢಿಫ‌ರೆಂಟ್‌. ಇದರ ಮೊಣಕಾಲಿನ ಭಾಗದ ವಿನ್ಯಾಸ ಮಾಮೂಲಿಗಿಂತ ಭಿನ್ನ. ಎದುರು ಭಾಗ ಅಂಗೈ ಅಗಲಕ್ಕಿಂತ ಹೆಚ್ಚು ಅಂತರದ ಡಿಸೈನ್‌ ಇದೆ. ಉಳಿದ ಪ್ಯಾಂಟ್‌ಗಳಿಂತ ಸ್ವಲ್ಪ ಮೇಲೆಯೇ ನಿಂತಿದೆ. ಹಾಗಾಗಿ ಈ ಡಿಸೈನ್‌ ಎಲ್ಲೂ ಮುಚ್ಚಿ ಮರೆಯಾಗುವಂತಿಲ್ಲ. 

ಟಾಪ್‌ ಸಂಪೂರ್ಣ ಪಾರದರ್ಶಕ. ನ್ಯೂಡ್‌ ಕಲರ್‌ನಲ್ಲಿರೋ ರೆಕ್ಕೆಯಂಥ ಲಾಂಗ್‌ ಟಾಪ್‌ನ ಮುಂಭಾಗದಲ್ಲೇ ಉದ್ದ ಸೀಳಿದೆ. ಅದರ ಅಂಚಿಗೆ ದಪ್ಪದ ಎಂಬ್ರಾಯಿಡರಿ ವರ್ಕ್‌ ಇದೆ. ಕಡುಗಪ್ಪು ಮತ್ತು ನ್ಯೂಡ್‌ ಕಲರ್‌ ಕಾಂಬಿನೇಶನ್‌ ಇಲ್ಲಿ ಸಖತ್ತಾಗಿ ಕಾಣಿ¤ದೆ. ಈ ಪ್ಯಾಂಟ್‌ ಮತ್ತು ಟಾಪ್‌ ನಡುವೆ ಸ್ವಲ್ಪ ಗ್ಯಾಪ್‌ ಇದೆ. ಕತ್ತು ಮುಚ್ಚಿರೋ ಟಾಪ್‌ನ ಮೇಲ್ಭಾಗ ರಿಚ್‌ ಡಿಸೈನ್‌ ಇದೆ. ಅಲ್ಲಿ ಕ್ರೀಮ್‌ ಕಲರ್‌ ಮೇಲೆ ಕಪ್ಪು ಬಣ್ಣದ ಡಿಸೈನ್‌ ೆ. ಕ್ಲೋಸ್‌ಡ್‌ ನೆಕ್‌ ಇರೋ ಕಾರಣಕ್ಕೋ ಏನೋ ಈ ಡ್ರೆಸ್‌ ಹೆಚ್ಚು ಆಕರ್ಷಕ. ಅದಕ್ಕೆ ತಕ್ಕಂತೆ ಉದ್ದ ಕೈ ವಿನ್ಯಾಸವಿದೆ. ಕೈಯ ಅಂಚಿನಲ್ಲೂ ಎಂಬ್ರಾಯಿಡರಿ ಪಟ್ಟಿ . 

ಸಾಮಾನ್ಯವಾಗಿ ಕ್ಲೋಸ್‌ಡ್‌ ನೆಕ್‌ ಡಿಸೈನ್‌ ಅಥವಾ ಡೀಪ್‌ ನೆಕ್‌ ಡಿಸೈನ್‌ ಇದ್ದಾಗ ಈ ವಿನ್ಯಾಸ ಕಾಣುವಂತೆ ಹೇರ್‌ ಸ್ಟೈಲ್‌ ಮಾಡ್ತಾರೆ. ಪ್ರಂಚ್‌ ಬನ್‌, ನಾಟ್‌ ಹಾಕಿ ಮೇಲಿತ್ತಿ ಕಟ್ಟೋದು ಮೊದಲಾದ ಹೇರ್‌ಸ್ಟೈಲ್‌ ಇರತ್ತೆ. ಆದರೆ ನೇಹಾ ಇಲ್ಲಿ ಉದ್ದದ ಜಡೆ ಹಣೆದು ಎದುರು ಹಾಕ್ಕೊಂಡಿದ್ದಾರೆ. ಕ್ಲೋಸ್‌ನೆಕ್‌ ಡಿಸೈನ್‌ಗೆ ಇದು ಚೆನ್ನಾಗೇ ಕಾಣತ್ತೆ. ಜಡೆಗೆ ಮಲ್ಲಿಗೆ ದಂಡೆ ಮುಡಿದಿರೋದು ಸಾಂಪ್ರದಾಯಿಕ ಚೆಲುವನ್ನು ಇಲ್ಲಿ ಮೂಡಿಸಿದಂತಾಗಿದೆ. 

"ಕಾಲಿಗೆ ಗೆಜ್ಜೆ ಗಲ ಗಲ ಅಂತಿದ್ರೆ ಏನ್‌ ಸಂಭ್ರಮ ಅಲ್ವಾ? ಅದೇ ಖುಷಿ ಕಿವಿಗೆ ಜುಮ್ಕಿ ಹಾಕ್ಕೊಂಡಾಗ್ಲೂ ಆಗತ್ತೆ. ಜುಮ್ಕಿ ಗಲಗಲ ಅಂತ ಗಾಳಿಯಲ್ಲಿ ಬುಗುರಿ ತಿರುಗಿದ ಹಾಗೆ ತಿರುಗುತ್ತಾ ಇದ್ರೆ ಅದೊಂದು ಚೆಂದ. ನಂಗೆ ಜುಮ್ಕಿ ಅಂದ್ರೆ ಬಹಳ ಇಷ್ಟ. ಸಾಮಾನ್ಯವಾಗಿ ನಂಗೆ ಅಕ್ಸೆಸರೀಸ್‌ ತದೊRಡೋದು ನನ್ನ ಸಿಸ್ಟರ್‌. ನಂಗೆ ಚೆಂದ ಚೆಂದ ಡ್ರೆಸ್ಸೂ ತಂದೊಡ್ತಾಳೆ. ಆಕೆ ಒಂಥರ ನನ್ನ ಕಾಸ್ಟೂéಮ್‌ ಡಿಸೈನರ್‌ ಇದ್ದಹಾಗೆ.  ಆಕೆ ದುಬೈ, ಮುಂಬೈ ಅಂತೆಲ್ಲ ಸುತ್ತಾಡ್ತಾ ಇರ್ತಾಳೆ. ಅಲ್ಲಿಂದ ಬರುವಾಗ ಅಕ್ಸೆಸರೀಸ್‌ ತಗೊಂಡು ಬರ್ತಾಳೆ. ಬೆಂಗಳೂರಲ್ಲಿ ಆಕೆ ಅಡ್ಡಾಡೋ ಸುಮಾರು ಅಕ್ಸೆಸರೀಸ್‌ ಶಾಪ್‌ಗ್ಳಿವೆ. ಆಕೆ ತರೋ ಆಕ್ಸೆಸರೀಸ್‌ ನನ್ನ ಡ್ರೆಸ್‌ಗಳಿಗೆಲ್ಲ ಒಂದಲ್ಲ ಒಂದು ರೀತಿ ಸೂಟ್‌ ಆಗತ್ತೆ' ಅಂತಾರೆ ನೇಹಾ ಪಾಟೀಲ್‌. ಇಲ್ಲಿ ಆಕೆ ಹಾಕಿಕೊಂಡಿರುವ ಕಪ್ಪು-ಬಂಗಾರ ಮಿಕ್ಸ್‌ ಇರೋ ಜುಮ್ಕಿ ಮಾತ್ರ ನೇಹಾ ಅವರಿಗೆ ಅಮ್ಮ ಕೊಟ್ಟಿದಂತೆ. 

 ಕನ್ನಡಲ್ಲಿ ಮಾತಾಡಿÕದ್ರೂ ಪಟಪಟನೆ ಇಂಗ್ಲೀಷ್‌ನಲ್ಲಿ ಉತ್ತರ ಕೊಡ್ತಾರೆ ನೇಹಾ. "ಕನ್ನಡದವರೇನಾ?' ಅಂತ ಡೌಟಲ್ಲಿ ಕೇಳಿದ್ರೆ, "ಯೆಸ್‌. ಪಕ್ಕಾ ಲೋಕಲ್‌' ಅಂತ ಉತ್ರ ಬರತ್ತೆ.  ನೇಹಾ ಡ್ರೆಸ್‌ ವಿಷ್ಯದಲ್ಲಿ ಬಹಳ ಚೂÂಸಿ. ಮನೆಯಲ್ಲಿದ್ರೆ ಕಂಫ‌ಟೇìಬಲ್‌ ಶಾರ್ಟ್ಸ್ ಹಾಕ್ಕೊಂಡಿರ್ತಾರೆ. ಪಾರ್ಟಿಗೆ ಹೋಗುವಾಗ ಸಿಂಗಲ್‌ ಪೀಸ್‌ ಡ್ರೆಸ್‌ ಹಾಕ್ಕೊಂಡು ಹೋಗಲಿಕ್ಕೆ ಇಷ್ಟ. ಮದುವೆ, ಸಾಂಪ್ರದಾಯಿಕ ಫ‌ಂಕ್ಷನ್‌ಗಳಲ್ಲೆಲ್ಲ ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕ್ತಾರೆ. ತನ್ನಿಷ್ಟದ ಡ್ರೆಸ್‌ ಬೇರೆಯವ್ರಿಗೂ ಇಷ್ಟವಾಗ್ಬೇಕು ಅನ್ನೋ ಧೋರಣೆಯನ್ನ ಸಾರಾಸಗಟಾಗಿ ತಿರಸ್ಕರಿಸೋ ನೇಹಾ, ನಮ್ಮ ಮನಸ್ಸಿಗೆ ನೇರಕ್ಕೆ ನಡೆಯೋದನ್ನ ಮೊದಲು ಕಲೀಬೇಕು ಅನ್ತಾರೆ. 

ಸಣ್ಣ ಇದ್ರೆ ಡ್ರೆಸ್‌ ಚೆನ್ನಾಗಿರತ್ತೆ. ದಪ್ಪ ಇರೋರು ಇಂಥ ಡ್ರೆಸ್‌ ಹಾಕ್ಕೋಬಾರ್ದು ಅನ್ನೋ ಥರದ ಸಿದ್ಧಾಂತಗಳನ್ನ ನಾನು ವಿರೋಧಿಸ್ತೀನಿ. ನಮಗಿರೋದು ಒಂದೇ ಲೈಫ‌ು. ಖುಷಿ ಖುಷಿಯಾಗಿ, ಪ್ರತಿಯೊಂದು ಕ್ಷಣವನ್ನೂ ಎನ್‌ಜಾಯ್‌ ಮಾಡ್ತಾ ಕಳೆಯಬೇಕು. ಸಣ್ಣ ಇರೋರು ನಿಮಗಿಷ್ಟದ ಡ್ರೆಸ್‌ ಹಾಕ್ಕೊಳ್ಳಿ. ಬೇರೆ ವಿನ್ಯಾಸದಲ್ಲಿ ಸೆಟ್‌ ಮಾಡಿ. ನಿಮಗದು ಸೂಟ್‌ ಆಗಲ್ಲ ಅನ್ನೋರೂ ನಿಮ್ಮ ಉಡುಗೆಯ ಹೊಸ ವಿನ್ಯಾಸದ ಬಗ್ಗೆ ಉತ್ಸಾಹದಿಂದ ಮಾತಾಡ್ತಾರೆ. 
- ನೇಹಾ ಪಾಟೀಲ್‌, ನಟಿ

 

Trending videos

 
ಓದುಗರ ಅಭಿಪ್ರಾಯ
Back to Top