Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಖುಷಿ ಖುಷಿಯಾಗಿ

ದಿವ್ಯಾ ಉರುಡುಗ ತೀರ್ಥಹಳ್ಳಿಯ ಹುಡುಗಿ. "ಚಿಟ್ಟೆ ಹೆಜ್ಜೆ' ಯಿಂದ ಶುರುವಾಯ್ತು ಸೀರಿಯಲ್‌ ಜರ್ನಿ. ಮುಂದೆ "ಅಂಬಾರಿ', "ಸಪ್ತಪದಿ' ಸೀರಿಯಲ್‌ಗ‌ಳಲ್ಲಿ ನಟನೆ. ಈಗ ಸುವರ್ಣ ಚಾನೆಲ್‌ನ " ಖುಷಿ' ಧಾರಾವಾಹಿಯ ನಾಯಕಿ. ಟ್ರಾವೆಲ್‌ ಮಾಡೋದಂದ್ರೆ ಇಷ್ಟ. ಅಕ್ಕಪಕ್ಕದ ಮಂದಿಯನ್ನ ಅವರಿಗೆ ಗೊತ್ತಾಗದ ಹಾಗೆ ಅಬ್ಸರ್ವ್‌ ಮಾಡ್ತಾರೆ. ಹೊರಗೆ ಮಳೆ ಸುರೀತಿದ್ರೆ ಊರಿಂದೇ ನೆನಪು. ಅಪ್ಪ ಮಂಜುನಾಥ್‌, ಅಮ್ಮ ಕುಸುಮಾ, ಇಬ್ಬರು ತಮ್ಮಂದಿರು ದೀಪಕ್‌, ದರ್ಶನ್‌. ಚಟಪಟ ಅರಳು ಹುರಿದಹಾಗೆ ಮಾತಾಡೋ ಈ ಹುಡುಗಿ ತಿಂಡಿಪೋತಿಯೂ ಹೌದಂತೆ. ಮಗುವಿನ ದನಿಯಲ್ಲಿ ಮುಗ್ಧವಾಗಿ ಆಡಿದ ಮಾತುಗಳು ಇಲ್ಲಿವೆ. 
*
ಓಡೋ ಕೋಳಿಗೆ ದಿವ್ಯಾನ್ಯಾಕೆ ತೋರೊÕàದು?
ನಾನು ದಿವ್ಯಾ. ಮನೆಯಲ್ಲೆಲ್ಲ ಕರೆಯೋದು ಕವನ ಅಂತ. ಅಪ್ಪಾಜಿ "ಪುಟ್ಟಿಮಗ' ಅಂತ ಕರೀತಾರೆ. ಫ್ರೆಂಡ್ಸೆಲ್ಲ ಚಿನ್ನು ಅಂತಾರೆ. ಇದಲೆªà ಸೆಟ್‌ನಲ್ಲಿ ತಿಂಡಿಪೋತಿ ಅಂತೆಲ್ಲ ಹೆಸ್ರಿಟ್ಟಿದ್ದಾರೆ. ಹೌದು ನಂಗೆ, ತಿನ್ನೋದು ಅಂದ್ರಾಯ್ತು. ಊಟ ಮಾಡಿದ ಇನ್ನೊಂದು ಕ್ಷಣಕ್ಕೇ ಹಸಿವಾಗತ್ತೆ. ಚಿಕನ್‌ ನನ್‌ ಫೇವರೆಟ್‌. ಸೆಟ್‌ನಲ್ಲೆಲ್ಲಾದ್ರೂ ಒಂದು ಕೋಳಿ ಕಾಣಿಸ್ಕೊಂಡ್ರೆ ಸಾಕು, "ಹೋಗು ಹೋಗೋಗು. ದಿವ್ಯಾ ಅಲ್ಲಿದ್ದಾಳೆ' ಅಂತಾರೆ.
ಊರಿಗೇನಾದ್ರೂ ಹೊರಟ್ರೆ ಅಮ್ಮ ಚಿಕನ್‌ ಮಾಡೇ ಮಾಡ್ತಾರೆ. ಅಮ್ಮನ ಕೈಯಡುಗೆ ಏನ್‌ ರುಚಿ ಗೊತ್ತಾ? ಅಂದೊRಂಡಾಗಲೆಲ್ಲ ಊರಿಗೆ ಹೋಗಕ್ಕಾಗಲ್ಲ ಅಲ್ವಾ, ಆಗ ಕೆಎಫ್ಸಿಗೆ ಹೋಗೋದು. 

ಸೀರಿಯಲ್‌ ಶೂಟಿಂಗ್‌ ನಡುವೆ ಬ್ರೇಕ್‌ ಇದ್ರೆ ದಬ್ಟಾಕ್ಕೊಂಡ್‌ಬಿಡ್ತೀನಿ. ಪ್ರಂಡ್ಸೆಲ್ಲ ಕಾಲ್‌ ಮಾಡ್ತಾ ಇರ್ತಾರೆ. ನಂಗೆ ನಿದ್ದೆ..ನಿದ್ದೆ..ನಿದ್ದೆ. ಇಡೀ ದಿನ ಏಳ್ಳೋದೇ ಬೇಡ. ಹಂಗೇ ಮಲಕ್ಕೊಂಡಿರಾಣ ಅನ್ನಿಸತ್ತೆ. ಕೊನೆಗೂ ಮನಸ್ಸಿಲ್ಲದ ಮನಸ್ಸಿಂದ ಏಳ್ತೀನಿ. ನನ್ನ ಪಾತ್ರಕ್ಕೆ ಬೇಕಾದ ಬ್ಲೌಸ್‌ ಸ್ಟಿಚ್‌ ಮಾಡೋದು, ಅದು ಇದೂ ಅಂತ ಕೆಲ್ಸ ಇರತ್ತೆ. ಏಳಲೇ ಬೇಕಲ್ವಾ? ಆದ್ರೆ ಎಷ್ಟು ಲೇಟಾಗಿ ಸಾಧ್ಯನೋ ಅಷ್ಟು ಲೇಟಾಗಿ ಏಳ್ತೀನಿ. 

 ಮೊದ್ಲಿಂದೂÉ ನಂಗೆ ನಿದ್ದೆ ಜಾಸ್ತಿ. ಸ್ಕೂಲ್‌ಗೆ ಹೋಗೋವಾಗ ನನ್ನ ಎಬೊÕàದೇ ನಮ್ಮನೆಯಲ್ಲಿ ಅಮ್ಮ ಅಪ್ಪಂಗೆ ದೊಡ್ಡ ತಲೆನೋವು. ಅಮ್ಮ, ಇವ್ಳು ಬೇಗ ಏಳಿÉ ಅಂತ ಹೊಡ್ಕೊಂಡಿರೋ ಬೆಡ್‌ಶೀಟ್‌ ಎಸೆದು ಹೋದ್ರೆ ಅಪ್ಪ, ಪಾಪ ಇನ್ನೂ ಸ್ವಲ್ಪ ಹೊತ್ತು ಮಲಕ್ಕೊಂಡಿರಲಿ ಅಂತ ಮತ್ತೆ ಹೊದೆಸಿ ಹೋಗ್ತಾರೆ. ನನ್ನ ಮಾರ್ನಿಂಗ್‌ ಇನ್ನಷ್ಟು ಲೇಟಾಗಿ ಶುರುವಾಗತ್ತೆ. ಅಂಥವಳು ಇಲ್ಲಿ ಶೂಟಿಂಗ್‌ ಅಂತ ಐದು ಗಂಟೆಗೆಲ್ಲ ಹೇಗ್‌ ಏಳ್ತಾಳೆ ಅನ್ನೋದೇ ಅಮ್ಮನ ಡೌಟು. 

ಆದ್ರೆ ನಾನು ಕೆಲ್ಸದ ವಿಷ್ಯದಲ್ಲಿ ಸೋಮಾರಿ ಅಲ್ಲ, ಮೆಲಿಟ್ರಿ ಶಿಸ್ತು ರೂಢಿಸಿಕೊಂಡಿದ್ದೀನಿ. ನಮ್‌ ಕ್ಯಾಬ್‌ ಡ್ರೈವರ್‌ನ ಒಂದ್ನಿಮಿಷಾನೂ ಕಾಯ್ಸಲ್ಲ ಗೊತ್ತಾ? 
*
ಕಾಡಿನ ದಿನಗಳು ..
ಕಟ್‌ ಮಾಡಿದ್ರೆ ನನ್‌ ಮನೆಯೇ ನೆನಪಾಗೋದು. ನಿಧಾನಕ್ಕೆ ಸ್ಕೂಲ್‌, ಫ್ರೆಂಡ್ಸ್‌ ಎಲ್ಲ ನೆನಪಾಗ್ತಾರೆ. ನಮುª ಮಲೆನಾಡು. ಮಳೆಯೂ ಜೋರು. ಹಂಗೆ ಮಳೆ ಬರಿ¤ದ್ದ ಒಂದಿವ್ಸ ನಂಗೆ ಮ್ಯಾಥ್ಸ್ ಟೆಸ್ಟ್‌ ಇತ್ತು. ಮ್ಯಾತ್ಸ್ಗೂ ನಂಗೂ ಎಣ್ಣೆ ಸೀಗೇಕಾಯಿ. ಲೆಕ್ಕ ಅನ್ನೋ ಸಬೆjಕ್ಟ್ ಯಾಕಾದ್ರೂ ಸೃಷ್ಟಿಮಾಡಿದೊ°à ದೇವ್ರು ಅಂತ ಬೈಕೊಳ್ತಿದ್ದೆ. ಆಗ ಅಮ್ಮ ಸ್ಕೂಲ್‌ ಬಸ್‌ನಲ್ಲಿ ರಶ್‌ ಜಾಸ್ತಿ ಇರತ್ತೆ ಅಂತ ಸಹಕಾರಿ ಸಾರಿಗೆ ಬಸ್‌ನಲ್ಲಿ ಕಳಿಸ್ತಿದ್ರು. ಆ ದಿವ್ಸ ಮ್ಯಾತ್ಸ್ ಟೆಸ್ಟ್‌. ಒಂಚೂರೂ ಏನೂ ಗೊತ್ತಿಲ್ಲ. 

ನಾನು ನನ್‌ ತಮ್ಮ ದೀಪು ಫ್ರೆಂಡ್ಸ್‌ ಥರ. ನಾನು ಅವನತ್ರ ಹೇಳಿದೆ."ಇವತ್ತು ಮ್ಯಾತ್ಸ್ ಟೆಸ್ಟ್‌ ಇದೆ. ನಾನೇನು ರೆಡಿಯಾಗಿಲ್ಲ ಕಣೋ. ಇವತ್ತೂಂದು ದಿನ ಸ್ಕೂಲ್‌ಗೆ ಹೋಗೋದು ಬೇಡ. ನಾಳೆ ಹೋಗೋಣ' ಅಂದೆ. ಅವ್ನು "ನಂಗೂ ಏನೋ ಇದೆ. ನಾನೂ ನಿನ್‌ ಜೊತೆಗೆ ಇರತೀನಿ' ಅಂದ. ಸರಿ, ಇಬ್ಬರೂ ಬಸ್‌ ಕಡೆ ಹೋಗೋ ದಾರಿ ಬಿಟ್ಟು ಕಾಡಿನ ಕಡೆ ಹೊರಟ್ವಿ. 

ಅಲ್ಲೊಂದು ದೊಡ್ಡ ಮರ ಇತ್ತು. ಬ್ಯಾಗ್‌ ಎಲ್ಲ ಕೆಳಗಿಟ್ಟು, ಮರದ ಮೇಲೆ ಹತ್ತಿ ಕೂತ್ವಿ. ಮಧ್ಯಾಹ್ನ ಮರದಿಂದ ಕೆಳಗೆ ಇಳಿದು ಬಾಕ್ಸ್‌ನಲ್ಲಿದ್ದನ್ನ ಖಾಲಿ ಮಾಡಿದ್ವಿ. ಮತ್ತೆ ಮರಹತ್ತಿ ಕೂತ್ವಿ. ದೂರದಲ್ಲಿ ಸಹಕಾರಿ ಸಾರಿಗೆ ಬರೋದು ಕಾಣಿಸ್ತು. ನೇರ ಮನೆಗೆ ಹೋದ್ವಿ. ಇದಾಗಿದ್ದು ಶನಿವಾರ. ಮರುದಿನ ರಜೆ. ಸೋಮವಾರ ಬೆಳಗಾದಾಗ್ಲೆà ನೆನಪಾಗಿದ್ದು ಶನಿವಾರ ರಜೆ ಮಾಡಿದ್ವಿ ಅಂತ. ಟೆನ್ಶನ್‌ ಶುರುವಾಯ್ತು. ಲಿವ್‌ ನೋಟ್‌ ತರ್ಬೇಕಲ್ಲ, ಎಲ್ಲಿಂದ ತರೋದು? ಸರಿ, ಇವತ್ತೂಂದು ದಿನ ರಜೆ ಮಾಡೋಣ. ನಾಳೆ ಏನಾದ್ರೂ ರೆಡಿ ಮಾಡೋಣ ಅಂತ ವಾಪಾಸ್‌ ಕಾಡಿನ ಕಡೆ ನಡೆದೆವು. ನಮ್ಮ ಗ್ರಹಚಾರಕ್ಕೆ ಅವತ್ತು ತರಗೆಲೆ ತಗೊಂಡು ಹೋಗಕ್ಕೆ ನಮ್ಮ ಪರಿಚಯದ ವನಜಕ್ಕ ಅನ್ನುವವರು ಬಂದ್ರು. ನಮ್ಮ ಬ್ಯಾಗ್‌ ಎಲ್ಲ ಕೆಳಗೇ ಇತ್ತು. ಏನ್ಮಾಡೋದು. ಶ್‌Ï ಅಂತ ತಮ್ಮನಿಗಂದೆ. ಅವ್ನು ಬಾಯಿಗೆ ಬೆಟ್ಟಿಟ್ಕೊಂಡು ಸುಮ್ಮನಿದ್ದ. ಪುಣ್ಯಕ್ಕೆ ಆಕೆ ನಮ್ಮ ಬ್ಯಾಗ್‌ನ° ಪಕ್ಕಕ್ಕಿಟ್ಟು ತರಗೆಲೆ ತಗೊಂಡು ಹೋದುÉ. 

ಮರುದಿನ ರೂಟ್‌ ಚೇಂಜ್‌ ಮಾಡಿದ್ವಿ. ಫಾರ್ಮ್ ಕಡೆ ಹೋಗೋಣ, ಅಲ್ಲಿ ಯಾರೂ ಇರಲ್ಲ, ಅಂತ ಫಾರ್ಮ್ ಕಡೆ ಹೋದ್ವಿ. ಅಲ್ಲಿ ಗಾರ್ಡ್‌ ಇರ್ತಾರೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಆ ಗಾರ್ಡ್‌ ನಮ್ಮನ್ನ ನೋಡಿದ್ದೇ, "ಯಾರೊÅà ನೀವು?' ಅಂದ್ರು. ನಾನು ನನ್ನ ಅಮ್ಮನ ಹೆಸ್ರು ಹೇಳಿದೆ. ಮತ್ತೆ ನೋಡಿದ್ರೆ ಅವ್ರಿಗೆ ನನ್ನ ಅಮ್ಮನೂ ಗೊತ್ತು. "ಕೆಟ¤ಲ್ಲಪ್ಪ ಗ್ರಹಚಾರ' ಅಂದೊRಂಡ್ವಿ. ಆ ಗಾರ್ಡ್‌ ನಮ್ಮ ಜತೆಗೇ ಕೂತು ನಮ್ಮ ಬಾಕ್ಸ್‌ನಲ್ಲಿದ್ದಿದ್ದನ್ನ ಹಂಚೊRಂಡ್ರು. ಮರುದಿನ ಮತ್ತೆ ಕಾಡಿಗೆ ಶಿಫ್ಟ್ ಆದ್ವಿ. 

ಬರೋಬ್ಬರಿ 14 ದಿನ ನಾವು ಸ್ಕೂಲ್‌ಗೆ ಚಕ್ಕರ್‌ ಹಾಕಿದ್ದು. ಅವತ್ತು ಸಿಕ್ಕಿಬಿದ್ವಿ. ಅಪ್ಪ ನನ್ನನ್ನೂ ತಮ್ಮನ್ನೂ ಕರೆದರು. ಟ್ರ್ಯಾಕ್ಟರ್‌ನಲ್ಲಿ ಕರೊRಂಡು ಹೋಗ್ತಿàನಿ ಅಂತ ತಮ್ಮನ್ನ ಕರೊRಂಡು ಹೊರಟ್ರಾ. ಸ್ವಲ್ಪ ಹೊತ್ತಿಗೆ ಅವ್ನು ವಾಪಾಸ್‌ ಬಂದ. ನಂಗೆ ಸುಸ್ತಾಯ್ತು, ನೀನು ಹೋಗ್ಬೇಕಂತೆ ಅಂತ. ಸರಿ, ನಾನು ಹೊರಟೆ. ಟ್ರ್ಯಾಕ್ಟರ್‌ ಹೊರಟಿತು, ನೋಡಿದ್ರೆ ನಾವು ಹೋಗ್ತಿದ್ದ ಕಾಡಿನ ದಾರಿಯಲ್ಲೇ ಹೋಗ್ತಿದೆ. ಇದೇನಪ್ಪಾ, ಅಂತ ಭಯ ಶುರುವಾಯ್ತು. ನೇರ ನಾವು ಹತ್ತುತ್ತಿದ್ದ ಮರದ ಕೆಳಗೆ ನಿಂತಿತು. ಅಪ್ಪ ನ್ನನ ಕೈಹಿಡಿದು ಮರಕ್ಕೆ ಕಟ್ಟಿ ಹಾಕಿದ್ರು. ಕೋಲು ತಗೊಂಡು ಹೊಡೀತಾನೇ ಇದ್ದಾರೆ, ನಿಲ್ಲಿಸ್ತಾನೇ ಇಲ್ಲ ..

.. ಅವತ್ತೇ ಲಾಸ್ಟು. ನಾನೀವತ್ತಿನವರೆಗೆ ಮನೆಯಲ್ಲಿ ಸುಳ್ಳು ಹೇಳಿಲ್ಲ. ಅಪ್ಪ ಅವತ್ತೂಂದು ದಿನ ಮಾತ್ರ ಹಂಗಾಡಿದ್ದು. ಇವತ್ತಿನವರೆಗೂ ನನ್ನ ಒಂದು ಮಾತು ಬೈದಿಲ್ಲ, ಹೊಡಿªಲ್ಲ. ನನ್ನನ್ನ ತುಂಬ ತುಂಬ ಇಷ್ಟಪಡ್ತಾರೆ. 
*
ಸೆಟ್‌ನಲ್ಲೂ ತಿಂಡಿಪೋತಿ ..
ಬೆಳ್ಳಂಬೆಳಗ್ಗೆ ಎದ್ದು ಶೂಟಿಂಗ್‌ಗೆ ಹೊರಡೋದು ಅದ್ರಲ್ಲೂ, ಜೋರಾಗಿ ಮಳೆ ಬರಿ¤ದ್ದಾಗ, ಚಳಿ ಇದ್ದಾಗ ಹೋಗೋದು ತುಂಬ ಕಷ್ಟ. ಸೆಟ್‌ಗೆ ಹೋಗಿ ಮೇಕಪ್‌ಮ್ಯಾನ್‌ ಮುಂದೆ ಕೂತ್ರೆ, ಮುಖದ ಮೇಲೆ ಸ್ಪ್ರೆà ಮಾಡ್ತಾರೆ. ಚಳಿ, ಚಳಿ ನೀರು .. ಮೈಯೆಲ್ಲ ನಡುಗತ್ತೆ. ಚಳಿಗೆ ನಡುಗುತ್ತಾ ಕೂರೋದು. ಒಮ್ಮೆ ಕ್ಯಾಮರ ಆನ್‌ ಆಗಿ ಆ್ಯಕ್ಷನ್‌ ಹೇಳಿದ್ರೆ, ಆಗ ನಡುಕ ನಿಲ್ಲತ್ತೆ. 

ನಮ್‌ ಸೀರಿಯಲ್‌ ಸೆಟ್‌ನಲ್ಲಿ  ಮಾತಾಡ್ತಾನೇ ಇರಿ¤àನಿ. ಅವ್ರಿವ್ರಿಗೆ ಕಿಂಡಲ್‌ ಮಾಡೋದು, ಕಿತಾಪತಿ ಮಾಡೋದು ಇದ್ದಿದ್ದೇ.  ಆ್ಯಕ್ಟ್ ಮಾಡಿದ ಅಷ್ಟೂ ಸೀರಿಯಲ್‌ಗ‌ಳಲ್ಲಿ ನನ್ನ ಮನೆಮಗಳ ಥರ ನೋಡ್ಕೊಂಡಿದ್ದಾರೆ. ಮನೆಯಿಂದ ದೂರ ಇರೋ ಕಾರಣ ನನ್ನ ಟಿಫಿನ್‌, ಊಟ ಎಲ್ಲ ಸೆಟ್‌ನಲ್ಲೇ ಆಗತ್ತೆ. ಇಲ್ಲಿ ಊಟ ತಿಂಡಿ ಅಲೆªà ಎಷ್ಟೋ ಸಲ ನನಗೋಸ್ಕರ ತಿಂಡಿ ತರಿಸಿಕೊಟ್ಟಿದ್ದಾರೆ. 
*
ಮಂಗಳೂರಿನ ದಿನಗಳು ..
ಹತ್ತನೇ ಕ್ಲಾಸ್‌ ಮುಗೀತಿದ್ದ ಹಾಗೆ ಮಂಗಳೂರಲ್ಲಿ ಪಿಯುಸಿಗೆ ಹಾಕಿದ್ರು. ನಮ್ಮ ಹಾಸ್ಟೆಲ್‌ನಲ್ಲಿ ಊಟ, ತಿಂಡಿ ಕೆಟ್ಟದಾಗಿರಿ¤ತ್ತು. ಆಗ ಯಾವಾಗ ನೋಡಿದ್ರೂ ಮನೇದೇ ನೆನಪು. ರಾತ್ರಿ 1 ಗಂಟೆ ಟೈಂನಲ್ಲಿ ಮಾತ್ರ ಪೇರೆಂಟ್ಸ್‌ ಫೋನ್‌ ಮಾಡಿ ಮಾತಾಡºಹುದಿತ್ತು. ಎರಡು ವಾರಕ್ಕೊಮ್ಮೆ ಔಟಿಂಗ್‌. ಅದೂ ಬರೀ 2.30 ಗಂಟೆ. ಬೇರೆ ಸುತ್ತಾಟ, ಓಡಾಟ ಏನೂ ಇರ್ಲಿಲ್ಲ. ಕಾಲೇಜ್‌ ಕಾಂಪೌಂಡ್‌ ಒಳಗೇ ಹಾಸ್ಟೆಲ್‌ ಇದ್ದ ಕಾರಣ ಒಂಥರ ಜೈಲಿನ ಫೀಲ್‌ ಕೊಡ್ತಿತ್ತು. ಅದೇ ಫ‌ಸ್ಟ್‌ ಟೈಂ ನಾನು ಮನೆಬಿಟ್ಟು ಬೇರೆ ಕಡೆ ಇದ್ದದ್ದು. ಒಂದೊಂದು ಹುಡುಗೀನೂ ಒಂದೊಂಥರ. ರೂಂನಲ್ಲಿ ಯಾರೋ ಒಬ್ರು ಮಧ್ಯರಾತ್ರಿ ಲೈಟ್‌ಹಾಕಿ ಓದೋದು, ರಾತ್ರಿಯೆಲ್ಲ ಓದ್ತಾ ಇರೋರು, ಗಲೀಜ್‌ ಮಾಡ್ತಿರೋರು, ಕದಿಯೋರು .. ಅಬ್ಬ ಎಷ್ಟೊಂದು ವೆರೈಟಿಗಳು!

ಆದ್ರೆ ಡಿಗ್ರಿಯಲ್ಲಿ ಮಾತ್ರ ಮಜಾ ಮಾಡಿದ್ದೆ. ಆಗ ಒಂದು ಪಿಜಿಯಲ್ಲಿದ್ದೆ. ಅಲ್ಲಿ ದಿನಾ ನಾನ್‌ವೆಜ್‌ ಮಾಡ್ತಿದ್ರು. ದಿನಾ ಫಿಶ್‌ಫ್ರೈ. ಅಲ್ಲಿ ಸೀಫ‌ುಡ್‌ ಏನ್‌ ಟೇಸ್ಟ್‌ ಇರಿ¤ತ್ತು, ಅಂದ್ರೆ ಈಗ್ಲೂ ನೆನೆಸ್ಕೊಂಡ್ರೆ ಬಾಯಲ್ಲಿ ನೀರು ಬರತ್ತೆ. ಪಬ್ಟಾಸ್‌ನಲ್ಲಿ ಐಸ್‌ಕ್ರೀಂ ತಿನ್ನೋದು, ಬೀಚ್‌ಗೆ ಹೋಗೋದು, ಅಲ್ಲಿ ಕಾರ್ನ್ ಟಿಕ್ಕಾ ತಿನ್ನೋದು ಹೀಗೆ ..
*
ಆಗ ನಾನು ಐದನೇ ಕ್ಲಾಸ್‌ನಲ್ಲಿದ್ದೆ. ಒಂದಿನ ನಮ್ಮೂರಲ್ಲಿ ನಾಟಕ ಇತ್ತು. ಅಮ್ಮ ರೆಡಿಯಾಗ್ತಿದ್ರು. ನಾನು ತುಟಿಗೆ ಫ‌ುಲ್‌ ಲಿಪ್‌ಸ್ಟಿಕ್‌ ಹಾಕ್ಕೊಂಡು ಬಂದು ಖುಷಿಯಲ್ಲಿ, "ಇಲ್ನೋಡಿ ..' ಅಂದೆ. ಅಮ್ಮಂಗೆ ನಾನು ಲಿಪ್‌ಸ್ಟಿಕ್‌ ಹಾಕಿದ್ದು ಕಂಡು ಏಕ್‌ದಂ ಸಿಟ್ಟು ಏರ್‌ಬಿಟು¤. ನಂಗೆ ಏಟು ಕೊಟ್ರಾ. ನಂಗ್ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ಗೊತ್ತಾಗ್ಲಿಲ್ಲ. ಒಂದು ಲಿಪ್‌ಸ್ಟಿಕ್‌ ಹಾಕ್ಕೊಂಡಿದ್ದಕ್ಕೆ ಹೊಡೀಬೇಕಾ ಅಂತ. ಆದ್ರೆ ಅಮ್ಮಂಗೂ ಆಮೇಲೆ ಬೇಜಾರಾಗಿತ್ತು. ಇಷ್ಟು ಸಣ್ಣ ವಿಷ್ಯಕ್ಕೆ ಹೊಡುªಬಿಟ್ನಲ್ಲ ಅಂತ. ಅವ್ರಿಗೆ ನಾಟಕವನ್ನೂ ನೋಡಕ್ಕಾಗ್ಲಿಲ್ಲ. ಅವತ್ತೇ ಲಾಸ್ಟ್‌ . ಆಮೇಲೆ ನಾನು ಪೌಡರ್‌ ಸಹ ಹಚೊRಂಡವಳಲ್ಲ. ಆದ್ರೆ, ಈಗ ಅನಿವಾರ್ಯ, ಬೆಳಗ್ಗೆದ್ದು ಮೇಕಪ್‌ ಮಾಡಿಸ್ಕೊಳ್ಳೇ ಬೇಕು. 
- ದಿವ್ಯಾ ಉರುಡುಗ, ಕಿರುತೆರೆ ನಟಿ

 

Trending videos

 
ಓದುಗರ ಅಭಿಪ್ರಾಯ
Back to Top