Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗಿಣಿಮರಿ ಕೇಸ್‌

ಪಕ್ಕ ಅವನು ಕುಳಿತುಕೊಂಡ, ಮಾತಾಡಿಸಿದ, ಎಲ್ಲಾ ವಿಚಾರಿಸಿದ. ಹೊರಟು ಹೋಗುವಾಗಕೈಗಿತ್ತಿದ್ದೇನು? ಅವನ ವಯಸ್ಸಾದರೂ ಎಷ್ಟು?

ಅವಳು ಮುಗ್ಧ ಶಿಖಾಮಣಿ. ಅವಳ ತಾಯಿ ಚಿಕ್ಕಂದಿನಿಂದಲೂ  ಗುಬ್ಬಚ್ಚಿಯಂತೆ ಅವಳನ್ನು ಸಾಕಿದ್ದಾಳೆ. ಮುದ್ದು ಮುಖ, ವಯಸ್ಸು ಹದಿನಾರಾದರೂ ಮುಖದಲ್ಲಿ ಮಗುವಿನ ಕಳೆ. ತಾಯಿ ಕಾಳಜಿಗೋ, ಅಥವಾ ಬೆಳೆದು ಬಂದ ಸಮಾಜದ ರೀತಿಗೋ ಅವಳು ಮೌನಿಯಾಗಿದ್ದಳು. ಮೌನದ ಕೂಗು ಅದೆಷ್ಟು ಅಗಾಧವಾಗಿತ್ತೆಂದರೆ ಮನಸ್ಸಿನ ಅಂತರಾಳದಲ್ಲಿ ಚಂಡಮಾರುತ ಬೀಸಿದರು ಹೆತ್ತ ತಾಯಿಗೆ ಬಿಟ್ಟು ಮತ್ತಾರಿಗೂ ಕೇಳಿಸುತ್ತಿರಲಿಲ್ಲ. ಅದೇನೇ ಕಷ್ಟ ಬರಲಿ, ಶಾಲೆಯಲ್ಲಿ ಯಾರೇ ಕಿಚಾಯಿಸಲಿ ಒಂದು ಮಾತು ತುಟಿಕ್‌-ಪಿಟಿಕ್‌ ಎನ್ನುತ್ತಿರಲಿಲ್ಲ. ಆದರೆ ಅವಳೀಗ ಕಾಲೇಜು ಮೆಟ್ಟಿಲೇರುತ್ತಿದ್ದಾಳೆ. ಮನಸ್ಸಿನಲ್ಲಿ ಒಂದು ತೆರನಾದ ದುಗುಡ. ಆದರೆ ಕಾಲೇಜಿಗೆ ಹೋಗುವುದು ಅನಿವಾರ್ಯ.

  ಮೊನ್ನೆ, ಮೊನ್ನೆ ತಾನೇ ಎಲ್ಲರ ಜೊತೆ ಆಡುತ್ತಿದ್ದ ಹುಡುಗಿ ಈಗ ನೋಡ ನೋಡುತ್ತಿದ್ದಂತೆಯೇ ಕಾಲೇಜು ಮೆಟ್ಟಿಲೇರಿದ್ದಾಳೆ. ಮುಗªತೆಯು ಜೊತೆಗೆ ನಾಚಿಕೆ ಸಹ ಬೆರೆಯುವ ಸಮಯ. ಇವಳದು ಹಳ್ಳಿ, ಕಾಲೇಜಿಗೆ ಹೋಗಲು ನಗರಕ್ಕೆ ಹೋಗುವುದು ಅನಿವಾರ್ಯ. ದಿನ ನಿತ್ಯ ಬಸ್‌ಗೆ ಹೋಗಿ ಬರಬೇಕು, ಮನೆಯಿಂದ ಬಸ್‌ಸ್ಟಾಪ್‌ಗೆ ಎರಡು ಕಿ.ಮೀ. ನಡೆಯಬೇಕು ಎಂದರೆ ಅದೇನು ಹುಡುಗಾಟಿಕೆಯ ಮಾತಲ್ಲ. ನಗರದಲ್ಲಿಯೇ ಒಂದು ವಸತಿ ಹುಡುಕಿ ಬಿಡೋಣವೆಂದರೆ ತಾಯಿ ಮತ್ತು ಮಗಳ ಇಬ್ಬರ ಮನಸ್ಸೂ ಇದಕ್ಕೆ ಒಪ್ಪದು. ತನ್ನ ಸರ್ವಸ್ವವನ್ನು ಧಾರೆ ಎರೆದು ಬೆಳೆಸಿದ ತಾಯಿಗೆ ಕಂದಮ್ಮ ಬಣ್ಣದ ನಗರಿಯ ಮೋಡಿಗೆ ಸಿಕ್ಕಿ ಕೊಚ್ಚಿ ಹೋಗಿ ಬಿಟ್ಟರೆ ಎಂಬ ಭಯ. ಅಂತೂ ದಿನ ನಿತ್ಯ ಹೋಗಿ ಬರುವ ಪ್ರಕ್ರಿಯೆ ಪ್ರಾರಂಭವಾಯಿತು.

  ಮೊದ ಮೊದಲು ಕಾಲೇಜಿನಲ್ಲಿ ಇಂಗ್ಲೀಷ್‌ ಮೀಡಿಯಂನಲ್ಲಿ ಹೇಳಿ ಕೊಡುವ ಪಾಠಗಳು ತಲೆಯ ಆಳಕ್ಕೆ ಹೋಗದೇ ಅವಳು ಒದ್ದಾಡುತ್ತಿದ್ದಳು. ಮನೆಗೆ ಬಂದು ತಾಯಿ ಹತ್ತಿರ 'ಅಮ್ಮಾ ಲೆಕ್ಚರರ್‌ಗಳು ಇಂಗ್ಲೀಷ್‌ನಲ್ಲಿ ಮಣ ಮಣಿಸುತ್ತಾರೆ, ನನಗೆ ಒಂದೂ ಅರ್ಥವಾಗದು' ಎಂದು ದಿನ ನಿತ್ಯ ಬಂದು ಅಳುತ್ತಿದ್ದಳು. ಇವಳದು ಪ್ರೌಢಶಾಲೆಯವರೆಗ ಕನ್ನಡ ಮಾಧ್ಯಮ, ಈಗ ಒಂದೇಸಲ ಇಂಗ್ಲೀಷ್‌ ಅರ್ಥವಾಗಬೇಕು ಎಂದರೆ ಹೇಗೆ ತಾನೇ ಅರ್ಥವಾದೀತು? ನಿಧನವಾಗಿ ಅರ್ಥವಾಗುತ್ತದೆ ಎಂದು ತಾಯಿ ಅಂಜಿಕೆಯಿಂದಲೇ ಸಮಾಧಾನ ಮಾಡಿದರೂ ಮಗಳು ಯಾವುದನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವಳಿಗೆ ಅದೆಲ್ಲವೂ ಭಟ್ಟರು ಪಠಿಸುವ ಮಂತ್ರದಂತೆ ಕೇಳುತಿತ್ತು. ಅವಳ ಅಳು ದಿನನಿತ್ಯ ಸುರಿಯುಸುತ್ತಿದ್ದ ಸೋನೆಮಳೆಗೆ ಪೈಪೋಟಿ ನಿಡುವಂತೆ ಕಾಣುತಿತ್ತು. ರಭಸವಾಗಿ ಮಳೆ ಸುರಿದರೆ ಮೈ ಒದ್ದೆಯಾಗಿ ಕ್ಲಾಸಿನಲ್ಲಿ ಕುಳಿತುಕೊಳ್ಳುವುದೇ ಒಂದು ತೆರನಾದ ಅಲವರಿಕೆ ಇದರ ಜೊತೆ ಒದ್ದೆ ಕೊಡೆಯನ್ನು ಎಲ್ಲಿ ಇಟ್ಟುಕೊಳ್ಳಬೇಕೆಂಬ ತಲೆಬಿಸಿ. ಮೇಲಿಂದ ಶಿಕ್ಷಕರು ಹೇಳಿಕೊಡುವ ಇಂಗ್ಲೀಷ್‌ ಮಂತ್ರ. ಒಟ್ಟಿನಲ್ಲಿ ಕಾಲೇಜು ಜೀವನ ಅವಳಿಗೆ ಬಿಲ್‌ಖುಲ್‌ ಇಷ್ಟವಿರಲಿಲ್ಲ.

   ದಿನ ಕಳೆದಂತೆ ಅವಳು ಸುಧಾರಿಸುತ್ತಾ ಬಂದಳು. ಅಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದಳು. ಕಲಿಸಿದ ಪಾಠ ಸರಿಯಾಗಿ ತಲೆಗೆ ಹತ್ತಲಾರಂಭಿಸಿತು. ಹುಡುಗರ ಮಾತಿಗೆ ಸೊಪ್ಪು$ ಹಾಕದೇ ತನ್ನ ಪಾಡಿಗೆ ತಾನಿದ್ದಳು. ಹೀಗೆ ಎರಡು ತಿಂಗಳು ಕಳೆದು ಹೋದವು. ಅಮ್ಮನೂ ನಿಶ್ಚಿಂತೆಯಿಂದ ಉಸಿರು ಬಿಡುವಂತಾಯಿತು.

  ಒಮ್ಮೆ ಇವಳು ಬಸ್‌ಸ್ಟಾಂಡ್‌ನ‌ಲ್ಲಿ ಬಸ್‌ ಏರಿ ಕುಳಿತಿದ್ದಳು. ಕಿಟಕಿಯಿಂದಾಚೆ ಒಬ್ಬ ಗಡ್ಡದಾರಿ ಆಸಾಮಿ ಏನೋ ಸನ್ನೆ ಮಾಡುತ್ತಿದ್ದ. ಸುರಿಯುವ ವರ್ಷಧಾರೆಯ ನಡುವೆಯೂ ಕಿಟಕಿ ತೆಗೆದು ನೋಡಿದಳು. ಆ ತಕ್ಷಣ ಹೊಳೆದಿತ್ತು, ಅವನು ಅವಳದೇ ಗೆಳತಿಯ ಅಪ್ಪ. "ಏನು' ಎಂದು ಕೇಳಿದಳು. "ನನಗೊಂದು ಸೀಟು ಇದ್ದರೆ ಹಿಡಿಯಮ್ಮ' ಎಂದ. ಅವನ ಕೈಲಿದ್ದ ಬ್ಯಾಗುಗಳನ್ನು ನೋಡಿ ಪಕ್ಕದಲ್ಲಿ ತನ್ನ ಗೆಳತಿಗೆ ಹಿಡಿದಿದ್ದ ಸೀಟನ್ನು ಅವನಿಗೆ ಬಿಟ್ಟು ಕೊಟ್ಟಳು. ಬಂದವನೇ ಕೆಳಗಿಳಿದು ಹೋಗಿ ಚಾಕಲೇಟ್‌, ಬಿಸ್ಕೇಟ್‌ ತಂದು ಇವಳಿಗೆ ಕೊಟ್ಟ. ತೆಗದುಕೊಳ್ಳಲು ದಾಕ್ಷಿಣ್ಯ ಮಾಡಿದರೂ, ಹಸಿದ ಹೊಟ್ಟೆ ಕೈ ಚಾಚಿ ತೆಗೆದುಕೊಂಡು ಬಿಟ್ಟಿತ್ತು.

  ಅವನು ದಾರಿಯುದ್ದಕ್ಕೂ ಅವಳು ಕಾಲೇಜಿಗೆ ಬರುವ ಸಮಯ, ಕಾಲೇಜಿನಿಂದ ವಾಪಸ್‌ ಹೋಗುವ ಸಮಯ ಎಲ್ಲವನ್ನೂ ಒಮ್ಮೆ ವಿಚಾರಿಸಿ ಮುಗಿಸಿದ್ದ. ಒಮ್ಮೆ ಸಣ್ಣಗೆ ಮೊಬೈಲ್‌ ಇದೆಯೋ ಇಲ್ಲವೋ ಎಂಬುದರ ಬಗೆೆಗೂ ಚಾರಿಸಿದ್ದ. ಹೇಗಂದರೂ ತನ್ನ ಗೆಳತಿಯ ತಂದೆ. ಅವನ ಮಗಳು  ಇವಳಿಗಿಂತ ಎರಡು ವರ್ಷ ಕಿರಿಯವಳಷ್ಟೆ. ಹೀಗಿರುವಾಗ ಯಾರು ತಾನೇ ಕೇಳಿದ ಪ್ರಶ್ನೆಗೆ ಉತ್ತರಿಸದೇ ಸುಮ್ಮನೆ ಕುಳಿತಾರು?

 ಬಸ್‌ ಇಳಿದ ತಕ್ಷಣ ಅವನಿಂದ ಇವಳಿಗೊಂದು ಚೀಟಿ ಸಿಕ್ಕಿತ್ತು. ಕಾಲೇಜಿನಲ್ಲಿ ಚೀಟಿಗಳು ಸಿಗುವುದು ಸರ್ವೇ ಸಾಮಾನ್ಯ. ಅವಳಿಗೆ ಕಾಲೇಜಿನ ಆಗು ಹೋಗುಗಳ ಬಗ್ಗೆ ಈಗ ಸಂಪೂರ್ಣ ಜಾnನ ಬಂದಿದೆ. ಆದರೆ ತಂದೆಯ ಸ್ಥಾನದಲ್ಲಿರುವವ ಚೀಟಿ ಕೊಟ್ಟರೆ ಅದನ್ನು ಲವ್‌ ಲೆಟರ್‌ ಎಂದು ಹೇಗೆತಾನೇ ಅಂದುಕೊಳ್ಳಲು ಸಾಧ್ಯ. ಬಸ್‌ ಸ್ಟಾಪ್‌ ಒಳಗೆ ಹೋಗಿ ಚೀಟಿ ತೆಗೆ‌ದು ನೋಡಿದಳು. ಆಕಾಶ ತೂತು ಬಿದ್ದಂತೆ ಮಳೆ ಒಂದೇ ಸಮನೆ ಸುರಿಯುತ್ತಿದ್ದರೂ ಹೊರಗಡೆ ಅವನು ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದ. ಚೀಟಿ ಓದಿದಾಕ್ಷಣ ಕಣ್ಣೀರು ಒತ್ತರಿಸಿ ಬಂದಿತ್ತು. ಕರೆಂಟ್‌ ಶಾಕ್‌ ಹೊಡೆದವಳಂತೆ ನಿಂತೇ ಇದ್ದಳು. ಅವಳ ಊರಿನ ಕಡೆಗೆ ಹೋಗುವ ಗೆಳತಿಯೊಬ್ಬಳು ಅವಳಿಗಾಗಿ ಕಾಯುತ್ತಾ ನಿಂತಿದ್ದವಳು ಇವಳ ಮುಖ ನೋಡಿ  ಬಸ್‌ ಸ್ಟಾಪ್‌ ಒಳಗೆ ಬಂದು ಕೈಲಿದ್ದ ಚೀಟಿಯನ್ನು ಒಮ್ಮೆ  ನೋಡಿದಳು.

ಅದರಲ್ಲಿ ಹೀಗಿತ್ತು. 'ಐ ಲವ್‌ ಯು, ನಿನ್ನ ಒಪ್ಪಿಗೆ ಇದ್ದರೆ ಮಾತ್ರ'! 

  "ನಿನಗೇನು ತಲೆ ಕೆಟ್ಟಿದೆಯಾ, ಮೂರು ಕತ್ತೆ ವಯಸ್ಸಾಗಿದೆ, ನಿನ್ನ ಮಗಳು ಸುಮಾರು ನನ್ನ ವಯಸ್ಸಿನವಳೇ, ನಿನಗೆ ಅದೆಷ್ಟೋ ಬಾರಿ ದೊಡ್ಡಪ್ಪಾ ಎಂದು ಕರೆದಿದ್ದೂ ಇದೆ. ಹೀಗಿರುವಾಗ...' ಎಂದೆಲ್ಲಾ ಬಯ್ಯಲಿಲ್ಲ. ಸೀದಾ ಮನೆ ದಾರಿ ಹಿಡಿದಳು. ಅಮ್ಮನಿಗೂ ಹೇಳದೇ ರೂಮ್‌ ಬಾಗಿಲು ಹಾಕಿಕೊಂಡು ಗೊಳ್ಳೆಂದು ಅತ್ತೇ ಬಿಟ್ಟಳು. ತಾಯಿ ಎಷ್ಟು ಕೇಳಿದರೂ ಒಂದು ಮಾತನಾಡಲಿಲ್ಲ. ಇದು ಅವಳ ಮುಗªತೆಗೆ ಬಿದ್ದ ಮೊದಲ ಪೆಟ್ಟಾಗಿತ್ತು. ಅವಳ ಜೊತೆ ಬಂದಿದ್ದ ಗೆಳತಿಯ ಮನೆಗೆ ಫೋನುಹಾಯಿಸಿ ಕೇಳಿದಾಗಲೇ ನಿಜ ಸಂಗತಿ ತಿಳಿದದ್ದು.

 ಅವಳ ಅಪ್ಪಅವರ ಮನೆಗೆ ಹೋಗಿ ಅವನಿಂದ ಕ್ಷಮೆ ಕೇಳಿಸಿದ ಎಂಬುದು ಎರಡನೇ ಮಾತು. ಆದರೆ ಅವಳು ನಿತ್ಯ ಕಾಲೇಜಿಗೆ ಹೊಗುವಾಗ ಭಯದ ನೆರಳಿನಲ್ಲೇ ಹೋಗಬೇಕಲ್ಲ! ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದಕ್ಕೆ ರಿವೇಂಜ್‌ ತೆಗೆದುಕೊಂಡರೆ? 

    ಹೀಗೆ ಜಗತ್ತಿನಲ್ಲಿ ಅದೆಷ್ಟೋ ಕೇಳಿಸದ ಧ್ವನಿಗಳಿವೆ. ಮಾತನಾಡದ ಪದಗಳಿವೆ, ಗೀಚದ ಬರಹಗಳಿವೆ. ರಾತ್ರಿ ಕಂಡ ಕನಸು ಬೆಳಗಾಗುವುದರೊಳಗೆ ಮಾಯವಾವಾಗಿ ಬಿಡುತ್ತದೆ. ಕಂಡಿದ್ದು ಕನಸೋ, ನನಸೋ ಎನ್ನುವುದು ತಿಳಿಯುವುದರೊಳಗೆ ಜೀವನ ಮುಗಿದಿರುತ್ತದೆ.
ಸಮಾಜದ ಮನಸ್ಥತಿ ಬದಲಾಗುವುದಿಲ್ಲ, ಸಮಾಜ ನಿತ್ಯ ಒಂದು ಹೊಸತನವನ್ನು ಹಪಹಪಿಸುತ್ತಿರುತ್ತದೆ.  ಬೇಡದ ಅನ್ಯ ಮಾರ್ಗಗಳು ಎಳೆಯುತ್ತಲೇ ಇರುತ್ತವೆ. ನೀರಿನ ಹರಿವಿನ ವಿರುದ್ಧವಾಗಿ ಈಜುವುದು ಸ್ವಲ್ಪ$ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ. ನೀರಿನ ಸೆಳವಿನ ವಿರುದ್ಧ ಈಜುತ್ತೀರೋ ಅಥವಾ ನೀರಿನಲ್ಲಿ ಕೊಚ್ಚಿಹೋಗುತ್ತೀರೋ ನಿಮಗೆ ಬಿಟ್ಟದ್ದು.

ರಾಜೇಶ್‌ ದುಗ್ಗುಮನೆ

 

Trending videos

 
ಓದುಗರ ಅಭಿಪ್ರಾಯ
Back to Top