Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಮಾಜಮುಖೀ ಸೇವೆಯಿಂದ ಯಶಸ್ಸು: ಶ್ರೀನಿವಾಸ ಪ್ರಭು

ಉಡುಪಿ: ಉಡುಪಿ ಜಿಲ್ಲಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಲ್ಪೆಯ ಕೊರೋನೆಟ್‌ ಟೈಲ್‌ ಫ್ಯಾಕ್ಟರಿ ಆವರಣದಲ್ಲಿ ರವಿವಾರ "ಮಲ್ಪೆ ವಲಯ ಮಟ್ಟದ ಬೃಹತ್‌ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶ'ದ ಸಮಾರೋಪ ಸಮಾರಂಭ ನಡೆಯಿತು.

ಹೊಸದಿಲ್ಲಿಯ ಶ್ರೀ ಹರಿಗುರು ಸೇವಾ ಪ್ರತಿಷ್ಠಾನದ ಟ್ರಸ್ಟಿ ಕೆ. ಶ್ರೀನಿವಾಸ ಪ್ರಭು ಮಾತನಾಡಿ, ದೇವರ, ಗುರು ಹಿರಿಯರ ಮೇಲೆ ಶ್ರದ್ಧಾ ಭಕ್ತಿ ಮತ್ತು ವಿಶ್ವಾಸವಿಟ್ಟು ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡಲ್ಪಡುವ ಸರ್ವರ ಹಿತರಕ್ಷಣೆಯ ಸಮಾಜಧಿಮುಖೀ ಸೇವೆಯು ಯಶಸ್ಸಿನಡೆಗೆ ಸಾಗುವುದರಲ್ಲಿ ನಿಸ್ಸಂಶಯ. ಈ ನಿಟ್ಟಿನಲ್ಲಿ ವೇದಿಕೆಯು ಇನ್ನಷ್ಟು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.

ಮಕ್ಕಳಿಗೆ ಆತ್ಮವಿಶ್ವಾಸದ ಮಾರ್ಗದರ್ಶನ

ಕಾರ್ಪೊರೇಶನ್‌ ಬ್ಯಾಂಕಿನ ನಿವೃತ್ತ ಜಿಎಂ ಎಂ. ವಿಜಯನಾಥ ಭಟ್‌ ಮೈಸೂರು ಮಾತನಾಡಿ, ಯಾವುದೇ ಸಮಾಜವು ಉತ್ತಮ ಕಾರ್ಯವನ್ನು ಎಸಗುವಲ್ಲಿ ಧ್ಯೇಯವನ್ನಿರಿಸಿಕೊಂಡು ಸಾಗಿದರೆ ಶ್ರೀದೇವರ ಅನುಗ್ರಹ ಸದಾ ಇರುತ್ತದೆ. ಈ ನೆಲೆಯಲ್ಲಿ ಜಿಎಸ್‌ಬಿ ಸಮಾಜವು ಮುಂದುವರಿದರೆ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.

ಯುವಜನತೆಗೆ ಸಾಧನೆಯ ಹಾದಿಯಲ್ಲಿ ಸೋಲು ಕಂಡು ಬಂದರೆ ಎದೆಗುಂದದೆ ಪರಿಸ್ಥಿತಿಯನ್ನು ನಿಭಾಯಿಸುವ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಹಿರಿಯರ ಪರಿಶ್ರಮ, ಕಷ್ಟ ಸಹಿಷ್ಣುತೆಯ ಬಾಳ್ವೆ ನಮಗೆಲ್ಲಾ ದರ್ಶಪ್ರಾಯವಾಗಬೇಕು. ಈ ನಿಟ್ಟಿನಲ್ಲಿ ಹಿರಿಯರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಸೂಕ್ತ ಮಾರ್ಗದರ್ಶನ ನೀಡಿ ನಿರ್ದಿಷ್ಟ ಗುರಿ ಸಾಧನೆಗೆ ಮುಂದುವರಿಯುವಂತೆ ಸಹಕರಿಸಬೇಕಾಗಿದೆ ಎಂದರು. 

ಸಮಾಜಾಭಿವೃದ್ಧಿಗೆ ವೇದಿಕೆ ಆದ್ಯತೆ

ಅಧ್ಯಕ್ಷತೆ ವಹಿಸಿದ್ದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಮಾತನಾಡಿ, ಜಿಎಸ್‌ಬಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವೇದಿಕೆಯು ಸದಾ ಜಾಗೃತಗೊಂಡು ಕಾರ್ಯನಿರ್ವಹಿಸಲು ಬದ್ಧವಾಗಿದೆ. ಈಗಾಗಲೇ ಆರಂಭಿಸಿರುವ 8 ಸಮಾಜಮುಖೀ ಯೋಜನೆಗಳ ಜತೆಗೆ ಯುವಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಉದ್ಯೋಗ ಸೃಜನಾ ಮತ್ತು ಕೌಶಲಾಭಿವೃದ್ಧಿ ಮೇಳಗಳನ್ನು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದರು.

ಎಎಸ್‌-ಸಂಶೋಧನಾ ಕ್ಷೇತ್ರದತ್ತ ಯುವಜನತೆ 

ಮಣಿಪಾಲ ಆ್ಯಡ್‌ ಸಿಂಡಿಕೇಟ್‌ನ ಸಿಇಒ ಯು. ದ್ವಿಜೇಂದ್ರ ಆಚಾರ್ಯ ಮಾತನಾಡಿ, ಜಿಎಸ್‌ಬಿ ಸಮಾಜವು ಎಲ್ಲ ಕ್ಷೇತ್ರಗಳಲ್ಲಿಯೂ ಈಗಾಗಲೇ ಸಾಕಷ್ಟು ಮುಂದುವರಿದಿದೆ. ಆದರೆ ಐಎಎಸ್‌ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದರಿಂದ ಯುವಜನತೆಯನ್ನು ಆ ದಾರಿಯತ್ತ ಸಾಗುವಂತೆ ಮಾರ್ಗದರ್ಶನವಿತ್ತರೆ ಸಮಾಜವು ಇನ್ನಷ್ಟು ಬಲಗೊಳ್ಳಲಿದೆ ಎಂದರು.

ಮರ್ತಪ್ಪ ಪೈ ಮಲ್ಪೆ, ಸಂಚಾಲಕ ವಿವೇಕಾನಂದ ಶೆಣೈ, ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌, ಸಮ್ಮೇಳನದ ಪ್ರ. ಕಾರ್ಯದರ್ಶಿ ಕೆ. ಗೋಕುಲದಾಸ ಪೈ, ವ್ಯವಸ್ಥಾ ಪ್ರಮುಖ ಮೋಹನದಾಸ ಪೈ, ಸ್ವಾಗತ ಸಮಿತಿ ಅಧ್ಯಕ್ಷ ಹನುಮಾಂತ ಕಾಮತ್‌, ಸಂಯೋಜಕ ಟಿ. ನಾರಾಯಣ ಕಿಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂದುಬೆಟ್ಟು ಅನಂತರಾಯ ಕಾಮತ್‌ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಎಂ. ಉಪೇಂದ್ರ ಪೈ ಮಲ್ಪೆ ಸ್ವಾಗತಿಸಿದರು. ಹರಿಪ್ರಸಾದ್‌ ಭಂಡಾರ್ಕರ್‌ ಮತ್ತು ಶರತ್‌ ದತ್ತಾಧಿನಂದ ಭಟ್‌ ಕಾರ್ಯಕ್ರಮ ನಿರೂಪಿಸಿದರು. 

ಸಮಾವೇಶದ ಪ್ರಮುಖ ನಿರ್ಣಯಗಳು 

ಭಾರತದ ಸಂವಿಧಾನದ ಅನುಚ್ಛೇದ 29 ಮತ್ತು 30ರಲ್ಲಿ ಸ್ಪಷ್ಟಪಡಿಧಿಸಿರುವಂಥ ಭಾಷಾ ಅಲ್ಪಸಂಖ್ಯಾಕ ಸಾಂವಿಧಾನಿಕ ಹಕ್ಕನ್ನು ಪಡೆಯಲು ಸಮರ್ಥ ಜಿಎಸ್‌ಬಿ ಸಮಾಜ ಒಂದಾಗಿ ಹಕ್ಕೊತ್ತಾಯ ಆಂದೋಲನ ಆರಂಭಿಸುವ ಬಗ್ಗೆ ವಿಚಾರವನ್ನು ಸಮಾವೇಶದಲ್ಲಿ ಮಂಡಿಸಲಾಯಿತು. ಸಮಾವೇಶದಲ್ಲಿದ್ದ ಜನಸ್ತೋಮ ಸರ್ವಾನುಮತದಿಂದ ಚಪ್ಪಾಳೆಯ ಮೂಲಕ ಸಮಾವೇಶದ ನಿರ್ಣಯಕ್ಕೆ ಸಮ್ಮತಿ ಸೂಚಿಸಿತು.

ಇದೇ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲೆಗೆ ಎನ್‌ಐಟಿಕೆ, ಬಂದರು ಮತ್ತು ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಮುತ್ಸದ್ಧಿ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಯು. ಶ್ರೀನಿವಾಸ ಮಲ್ಯ ವಿಮಾನ ನಿಲ್ದಾಣ' ಎಂದು ಹೆಸರಿಡುವ ನಿರ್ಣಯಕ್ಕೆ ಸಭಾಸದರು ಹರ್ಷೋದ್ಗಾರ ವ್ಯಕ್ತಪಡಿಸಿದರು.

 

Trending videos

 
ಓದುಗರ ಅಭಿಪ್ರಾಯ
Back to Top