Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಿವೃತ್ತಿ ನಂತರ ಸಿಗುವ ಹಣಕ್ಕೆ ತೆರಿಗೆ ಇದೆಯೇ? ಇದ್ದರೆ ಎಷ್ಟು?

ಇತ್ತೀಚೆಗೆ ಜನರು ಬಹಳವಾಗಿ ಕೇಳುವ ಒಂದು ಪ್ರಶ್ನೆ ನಿವೃತ್ತಿ ಸಮಯದ ಪಾವತಿ ಮತ್ತದರ ಮೇಲಿನ ತೆರಿಗೆ ವಿನಾಯಿತಿಗೆ ಸಂಬಂಧಪಟ್ಟದ್ದು. ಹೌದು. ವರ್ಷಗಟ್ಟಲೆ ದುಡಿದು ಕೊನೆಗೊಮ್ಮೆ ನಿವೃತ್ತಿಯ ಹಂತ ತಲುಪಿದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್‌ ಚಾ ಮತ್ತೆರಡು ಬಿಸ್ಕೆಟ್‌ಗಳಲ್ಲದೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳ ಬಗ್ಗೆ ಮತ್ತು ಅವುಗಳ ಮೇಲಿರುವ ತೆರಿಗೆ ಕಾನೂನಿನ ಬಗ್ಗೆ ಈ ವಾರ ಚರ್ಚೆ ಮಾಡೋಣ:

ನಿವೃತ್ತಿ ಪಾವತಿಗಳು

1. ಪ್ರಾವಿಡೆಂಟ್‌ ಫ‌ಂಡ್‌, 2. ಪೆನ್ಶನ್‌ ಮೊತ್ತ,

3. ಗ್ರಾಚೂÂಟಿ ಮೊತ್ತ, 4. ರಜೆಯ ನಗದು ಮೊತ್ತ.

1. ಪ್ರಾವಿಡೆಂಟ್‌ ಫ‌ಂಡ್‌

ಉದ್ಯೋಗದ ಅವಧಿಯಲ್ಲಿ ಮಾಸಿಕ ಸಂಬಳದಿಂದ 12% ದರದಲ್ಲಿ ಕಡಿತಗೊಂಡ ಪ್ರಾವಿಡೆಂಟ್‌ ಫ‌ಂಡ್‌ ನಿಮ್ಮ ಹೆಸರಿನಲ್ಲಿಯೇ ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿರುತ್ತದೆ. ಈ ಮೊತ್ತ ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈಸೇರುತ್ತದೆ.

ನಿವೃತ್ತಿಯ ಸಂದರ್ಭದಲ್ಲಿ ಕೈಸೇರಿದ ಪ್ರಾವಿಡೆಂಟ್‌ ಫ‌ಂಡ್‌ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಯಾವುದೇ ಮಿತಿಯಿಲ್ಲದೆ ಇದು ತೆರಿಗೆ ಮುಕ್ತವಾಗಿರುವುದು ಉದ್ಯೋಗಿಗಳಿಗೆ ಒಂದು ವರದಾನವೇ ಸರಿ. ಏಕಗಂಟಿನಲ್ಲಿ ಸಿಗುವ ಈ ಮೊತ್ತವನ್ನು ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ ಅಥವಾ ಅನ್ಯೂಟಿ, ಮಂಥಿÉ ಇಂಕಮ್‌ ಸ್ಕೀಂ, ಡೆಟ್‌ ಫ‌ಂಡ್‌, ಫಿಕ್ಸ್‌$x ಡೆಪಾಸಿಟ್‌ ಇನ್ನಿತರ ಯೋಜನೆಯಲ್ಲಿ ತೊಡಗಿಸಿಕೊಂಡರೆ ನಿವೃತ್ತಿ ಜೀವನಕ್ಕೆ ಆಧಾರವಾದೀತು. ಈ ಪ್ರತಿಯೊಂದು ಹೂಡಿಕೆಗೂ ತನ್ನದೇ ಆದ ಪ್ರತಿಫ‌ಲ ಹಾಗೂ ಆದಾಯ ತೆರಿಗೆ ಇರುವ ಕಾರಣ ಕೂಲಂಕಷ ಅಧ್ಯಯನ ಅಗತ್ಯ.

2. ಪೆನ್ಶನ್‌ ಮೊತ್ತ

ಇಪಿಎಸ್‌ ರೀತಿಯ ಪೆನ್ಶನ್‌ ಇರಲಿ ಅಥವಾ ಸರಕಾರಿ ಪೆನ್ಶನ್‌ ಇರಲಿ, ನಿವೃತ್ತಿಯ ಸಮಯದಲ್ಲಿ ನಿಮ್ಮ ಪೆನ್ಶನ್‌ ಖಾತೆಯಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಒಂದು ಪೆನ್ಶನ್‌ ಮೊತ್ತ ಸಂಚಯವಾಗಿರುತ್ತದೆ. ಈ ಮೊತ್ತವನ್ನು ಎರಡು ರೀತಿಯಲ್ಲಿ ಪಡಕೊಳ್ಳಬಹುದು.

ನಿವೃತ್ತಿಯ ಸಮಯದಲ್ಲಿ ಪೆನ್ಶನ್‌ ಫ‌ಂಡಿನ ಒಂದು ಭಾಗವನ್ನು ಏಕಗಂಟಿನಲ್ಲಿ ಕಮ್ಯೂಟೆಡ್‌ ಪೆನ್ಶನ್‌ ರೂಪದಲ್ಲಿ ಆಯ್ದುಕೊಂಡು ಉಳಿದ ಭಾಗವನ್ನು ಮಾಸಿಕ ಪೆನ್ಶನ್‌ ಪಾವತಿಯಾಗಿ ಪಡಕೊಳ್ಳುವ ಪದ್ಧತಿ ಬಹುತೇಕ ಚಾಲ್ತಿಯಲ್ಲಿದೆ.

ಮಾಸಿಕವಾಗಿ ಕೈಸೇರುವ ಪೆನ್ಶನ್‌ ಸಂಬಳದ ಆದಾಯದಂತೆಯೇ ಕರಾರ್ಹವಾಗಿರುತ್ತದೆ. ಇದು ಸರಕಾರಿ ಹಾಗೂ ಖಾಸಗಿ ನೌತೆರಿಗೆರಿಗೆ ಸಮಾನವಾಗಿ ಅನ್ವಯವಾಗುವ ಕಾನೂನು. ಆದರೆ ಉದ್ಯೋಗಿಯ ಮೃತ್ಯುವಿನ ಬಳಿಕ ಬರುವ ಫ್ಯಾಮಿಲಿ ಪೆನ್ಶನ್‌ಗೆ ವಾರ್ಷಿಕ ರೂ. 15,000 ಅಥವಾ 1/3 ನೇ ಭಾಗಕ್ಕೆ ತೆರಿಗೆ ವಿನಾಯಿತಿ ಇದೆ.

ಕಮ್ಯೂಟೆಡ್‌ ಭಾಗವು ನೌತೆರಿಗೆರಿಗಾದರೆ ಅದು ಸಂಪೂರ್ಣವಾಗಿ ತೆರಿಗೆವಿನಾಯಿತಿಯನ್ನು ಹೊಂದಿರುತ್ತದೆ. ಇಲ್ಲಿ ಸರಕಾರಿ ಅಂದರೆ ಕೇಂದ್ರ/ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು, ಸರಕಾರಿ ಕಾರ್ಪೊàರೇಶನ್‌, ಹಾಗೂ ಪಿಎಸ್‌ಯುಗಳು. ಆದರೆ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಎರಡು ರೀತಿಯ ಕಾನೂನು ಇವೆ. ಗ್ರಾಚೂÂಟಿ ಪಡೆಯುವ ನೌತೆರಿಗೆರಿಗೆ ಒಟ್ಟು ಮೊತ್ತದ 1/3 ಕಮ್ಯೂಟೆಡ್‌ ಭಾಗ ಮಾತ್ರ ತೆರಿಗೆವಿನಾಯಿತಿಗೆ ಅರ್ಹವಾಗಿರುತ್ತದೆ. ಗ್ರಾಚೂÂಟಿ ಪಡೆಯದ ನೌತೆರಿಗೆರಿಗೆ 1/2 ಭಾಗದಷ್ಟು ತೆರಿಗೆವಿನಾಯಿತಿಯೊಂದಿಗೆ ಕಮ್ಯೂಟ್‌ ಮಾಡಲು ಅವಕಾಶವಿದೆ.

3. ಗ್ರಾಚೂÂಟಿ ಮೊತ್ತ

5 ವರ್ಷ ಮೀರಿ ಕೆಲಸ ಮಾಡಿದ ಉದ್ಯೋಗಿಗಳಿಗೆ ನಿವೃತ್ತಿ/ವಿಆರ್‌ಎಸ್‌/ರಾಜೀನಾಮೆಯ ಸಂದರ್ಭಗಳಲ್ಲಿ ಅಥವಾ ಅವರು ಮೃತ್ಯು ಹೊಂದಿದರೆ ಕುಟುಂಬದವರ ಕೈಗೆ ಸಿಗುವ ಗ್ರಾಚೂÂಟಿ ಮೊತ್ತ ಒಟ್ಟು ಸರ್ವಿಸ್‌ ಅವಧಿಯನ್ನು ಅನುಸರಿಸಿ ನೀಡಲಾಗುತ್ತದೆ.

ಇಂತಹ ಗ್ರಾಚೂÂಟಿ ಸರಕಾರಿ ನೌತೆರಿಗೆರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ತೆರಿಗೆಮುಕ್ತವಾಗಿರುತ್ತದೆ.

ಆದರೆ ಖಾಸಗಿ ವಲಯದಲ್ಲಿ ತೆರಿಗೆವಿನಾಯಿತಿಗೆ ಮಿತಿ ಇದೆ. ಪೇಮೆಂಟ್‌ ಆಫ್ ಗ್ರಾಚೂÂಟಿ ಆಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ.

1. ಪ್ರತಿ ವರ್ಷದ ಸೇವೆಗೆ 15 ದಿನಗಳ ಲೆಕ್ಕದಲ್ಲಿ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ 26 ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ 6 ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್‌ ಮತ್ತು ಡಿಎ ಎಂದು ತಿಳಿಯಬೇಕು).

2. ನಿಜವಾಗಿಯೂ ಪಾವತಿಗೊಂಡ ಗ್ರಾಚೂÂಟಿ ಮೊತ್ತ

3. ರೂ. 10 ಲಕ್ಷ.

ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ತೆರಿಗೆ ಮುಕ್ತವಾಗಿರುತ್ತದೆ. ಅದಕ್ಕೂ ಮೀರಿ ಗ್ರಾಚೂÂಟಿ ಸಿಕ್ಕಿದರೆ ಅದರ ಮೇಲೆ ಆ ವರ್ಷದ ಸ್ಲಾಬ್‌ ಅನುಸರಿಸಿ ತೆರಿಗೆಕಟ್ಟಬೇಕು. ಕೆಲ ಖಾಸಗಿ ಕಂಪೆನಿಗಳು ರೂ. 10 ಲಕ್ಷಕ್ಕೂ ಮೀರಿ ಗ್ರಾಚೂÂಟಿ ಕೊಡುವುದುಂಟು. ಅಂತಹ ಸಂದರ್ಭದಲ್ಲಿ ಆ ಹೆಚ್ಚುವರಿ ಮೊತ್ತದ ಮೇಲೆ ತೆರಿಗೆ ನೀಡಬೇಕಾಗುತ್ತದೆ.

4. ರಜೆಯ ನಗದು ಮೊತ್ತ

ಲೀವ್‌ ಎನ್‌ಕ್ಯಾಶ್‌ಮೆಂಟ್‌ ಎಂದು ಕರೆಯಲ್ಪಡುವ ಈ ಪಾವತಿ "ಅರ್ನ್ಡ್ ಲೀವ್‌'ಗೆ ಮಾತ್ರ ಅನ್ವಯಿಸುತ್ತದೆ. ಒಬ್ಟಾತ ತನ್ನ ಕ್ಯಾಶುವಲ್‌ ಲೀವ್‌, ಸಿಕ್‌ ಲೀವ್‌ ಇತ್ಯಾದಿಗಳನ್ನು ನಗದೀಕರಿಸುವಂತಿಲ್ಲ. ಸಂಸ್ಥೆಗಳಲ್ಲಿ ಎಷ್ಟು ರಜೆಯನ್ನು ಯಾವ ರೀತಿಯಲ್ಲಿ ನಗದೀಕರಿಸಬಹುದು ಎನ್ನುವ ಬಗ್ಗೆ ಪ್ರತ್ಯೇಕ ನಿಯಮಾವಳಿಗಳು ಇರುತ್ತವೆ. ಬಹುತೇಕ, ಖಾಸಗಿ ನೌತೆರಿಗೆರಿಗೆ ಒಂದು ವರ್ಷಕ್ಕೆ 1 ತಿಂಗಳಿಂದ ಮಿಗಿಲಾಗಿ ಅರ್ನ್ಡ್ ಲೀವ್‌ ಇರುವುದಿಲ್ಲ.

ಸೇವೆಯ ಅವಧಿಯಲ್ಲಿ ರಜೆಯನ್ನು ನಗದೀಕರಿಸಿದರೆ ಅದರ ಮೇಲೆ ಪೂರ್ತಿ ಆದಾಯ ತೆರಿಗೆ ಬೀಳುತ್ತದೆ. ಆದರೆ ನಿವೃತ್ತಿ/ವಿಆರ್‌ಎಸ್‌/ರಾಜೀನಾಮೆಯ ಸಂದರ್ಭದಲ್ಲಿ ನಗದೀಕರಿಸಿದರೆ ಅದರ ಮೇಲೆ ತೆರಿಗೆ ವಿನಾಯಿತಿ ಇದೆ.

ಸರಕಾರಿ ನೌತೆರಿ ಗೆರಿಗೆ (ಕೇಂದ್ರ ಹಾಗೂ ರಾಜ್ಯ ಸರಕಾರ) ನಿವೃತ್ತಿ ಸಂದರ್ಭದಲ್ಲಿ ಅರ್ನ್ಡ್ ಲೀವ್‌ ಅನ್ನು ನಗದೀಕರಿಸಲು ಯಾವುದೇ ಮಿತಿ ಇಲ್ಲದೆ ತೆರಿಗೆ ವಿನಾಯಿತಿ ಸಿಗುತ್ತದೆ. ಖಾಸಗಿ ನೌಕರಿಯಲ್ಲಿ ನಿವೃತ್ತಿ ಪಡೆದಾಗ ಅರ್ನ್ಡ್ ಲೀವ್‌ ನಗದೀಕರಿಸುವಲ್ಲಿ ಈ ಕೆಳಗಿನ ರೀತ್ಯಾ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

1. ಕಳೆದ 10 ತಿಂಗಳುಗಳ ಸರಾಸರಿ ಸಂಬಳ ಲೆಕ್ಕದಲ್ಲಿ ಗರಿಷ್ಟ 10 ತಿಂಗಳ ಸಂಬಳ (ಇಲ್ಲಿ ಬೇಸಿಕ್‌,ಡಿಎ, ಡಿಯರ್‌ನೆಸ್‌ ಪೇ, ಶೇಕಡಾವಾರು ಕಮಿಶನ್‌) ಮೊತ್ತವನ್ನು ಸಂಬಳವೆಂದು ಪರಿಗಣಿಸಬೇಕು)

2. ನೈಜವಾಗಿ ಅರ್ನ್ಡ್ ಲೀವ್‌ ನಗದೀತೆರಿಗೆಣದ ಮೊತ್ತ.

3. ವರ್ಷಕ್ಕೆ 30 ದಿನಗಳಂತೆ ಪ್ರತಿ ಸೇವಾ ವರ್ಷಕ್ಕೆ ಲೆಕ್ಕ ಹಾಕಿದ ಬಾಕಿ ರಜೆಯ ಒಟ್ಟು ಮೊತ್ತ.

4. ರೂ. 3 ಲಕ್ಷ.

ಇವುಗಳಲ್ಲಿ ಯಾವುದು ಕನಿಷ್ಠವೋ ಅದು ತೆರಿಗೆವಿನಾಯಿತಿಯನ್ನು ಹೊಂದುತ್ತದೆ. ಆದರೆ ಮೃತ್ಯು ಸಂಭವಿಸಿದಲ್ಲಿ ನೌತೆರಿಗೆನ ಮನೆಯವರಿಗೆ ನೀಡುವ ರಜೆಯ ಮೊತ್ತಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುವುದು.

ವಿ.ಸೂ: ತೆರಿಗೆ ವಿಚಾರಗಳನ್ನು ಆದಷ್ಟು ಸರಳ ರೂಪದಲ್ಲಿ ಜನಸಾಮಾನ್ಯರ ಮಾಹಿತಿಗಾಗಿ ತಿಳಿಸುವುದು ಮಾತ್ರ ಇಲ್ಲಿನ ಉದ್ದೇಶ. ಆದಾಯ ತೆರಿಗೆ ಒಂದು ಕ್ಲಿಷ್ಟವಾದ ಗೋಜಲಿನ ವಿಚಾರವಾಗಿದ್ದು, ಎಷ್ಟೋ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಎಷ್ಟೋ ವಿಚಾರಗಳಲ್ಲಿ ಗೊಂದಲಗಳು ಮೂಲ ಕಾನೂನಿನಲ್ಲಿಯೇ ಇರುತ್ತವೆ. ಅದೆಷ್ಟೋ ವಿಚಾರಗಳು ಟ್ರಿಬ್ಯೂನಲ್‌/ ಕೋರ್ಟ್‌ ನಿರ್ಧಾರಗಳನ್ನು ಅನುಸರಿಸಿ ಅರ್ಥೈಸಲಾಗುತ್ತದೆ. ಇನ್ನೆಷ್ಟೋ ವಿಚಾರಗಳು ತೆರಿಗೆ ಇಲಾಖೆಯ ಒಂದೊಂದು ಕಚೇರಿಯಲ್ಲಿ ಚಾರಿತ್ರಿಕ ಹಿನ್ನೆಲೆಯ ಪ್ರಕಾರ ಅರ್ಥೈಸಲಾಗುತ್ತದೆ. ಇನ್ನು ಕೆಲವು ವಿಚಾರಗಳು ಅನುಷ್ಠಾನದಲ್ಲಿ ಇರುವುದೇ ಇಲ್ಲ. ಪ್ರತಿಯೊಬ್ಬರಿಗೂ ಅವರವರ ಸಂದರ್ಭಾನುಸಾರ ನುರಿತ ಸಿಎಗಳ ಚರ್ಚಿಸಿಯೇ ತೆರಿಗೆ ವಿಚಾರದಲ್ಲಿ ಮುಂದುವರಿಯಬೇಕು.

ಹಳೆ ಮಾತು: ಕಳೆದ ವಾರ ಬರೆದ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಂ (ಎಸ್‌ಸಿಎಸ್‌ಎಸ್‌) ಈಗ ಕೆಲ ಬ್ಯಾಂಕುಗಳಲ್ಲಿಯೂ ಇರುವುದು ಹೌದು. ಈ ಬಗ್ಗೆ ರಿಸರ್ವ್‌ ಬ್ಯಾಂಕಿನ ಹಾಗೂ ಆಯಾ ಬ್ಯಾಂಕುಗಳ ಜಾಲತಾಣದಲ್ಲಿ ಮಾಹಿತಿ ಸಿಗುತ್ತದೆ. ಆದರೆ ಲಭ್ಯವಿರುವ ಬ್ಯಾಂಕುಗಳ ಎಲ್ಲ ಬ್ರಾಂಚುಗಳಲ್ಲೂ ಆ ಸೌಲಭ್ಯ ಇದೆಯೆಂದು ಹೇಳಲು ಬರುವುದಿಲ್ಲ. ಕೆಲವು ಯೋಜನೆಗಳು ಮುಖ್ಯವಾಗಿ ಸರಕಾರಿ ಯೋಜನೆಗಳು ಎಲ್ಲ ಶಾಖೆಗಳ ಮೂಲಕ ಅನುಷ್ಠಾನಕ್ಕೆ ಬಂದಿಲ್ಲ. ಪಿಪಿಎಫ್, ಎನ್‌ಪಿಎಸ್‌, ರಿವರ್ಸ್‌ ಮಾಗೇìಜ್‌, ಗೋಲ್ಡ್‌ ಲೋನ್‌, ಚಿನ್ನದ ನಾಣ್ಯದ ಮಾರಾಟ, ಲಾಕರ್‌ ಸೌಲಭ್ಯ, ಇತ್ಯಾದಿ ಹಲವಾರು ಸೌಲಭ್ಯಗಳು ಕೆಲವು ಆಯ್ದ ಶಾಖೆಗಳಲ್ಲಿ ಮಾತ್ರ ಇರುತ್ತವೆ.

ಜಯದೇವ ಪ್ರಸಾದ ಮೊಳೆಯಾರ

 

Trending videos

 
ಓದುಗರ ಅಭಿಪ್ರಾಯ
Back to Top