Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗ್ರಹಗತಿಗಳು ಮನಸ್ಸುಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಗೊತ್ತಾ?

ವರ್ತಮಾನದಲ್ಲಿನ ಯಾವ ಕಷ್ಟಕಾರ್ಪಣ್ಯವೇ ಆಗಲಿ ಒಬ್ಬನನ್ನು ಸುತಾರಾಂ ಸುಳ್ಳು ಭ್ರಷ್ಟತನ, ಇತರರನ್ನು ಹಾಳುಮಾಡಿ ತಾನೇ ಗೆಲ್ಲುವ ಸ್ಥಿತಿಗೆತಳ್ಳದಿರಲು ಶಕ್ತಿ ನೀಡುತ್ತದೆ. ಆದರೆ ಅದೇ ಕಷ್ಟಕಾರ್ಪಣ್ಯಗಳು ಹಲವರಿಗೆ ಕೆಟ್ಟತನಕ್ಕಿಳಿಯಲು ಪ್ರೇರೇಪಿಸಿ ದುಷ್ಟತನವನ್ನು ಗಂಟಿಕ್ಕಿಸುತ್ತದೆ. ಇನ್ನು ಕೆಲವರು ಜನ್ಮಾತ್‌ ದುಬುìದ್ಧಿ ಹಾಗೂ ಕುಹಕಗಳಿಂದಲೇ ಜೀವನದ ಸಂದರ್ಭಗಳಲ್ಲಿ ಹೆಜ್ಜೆಗಳನ್ನಿರಿಸಿ ಅಧಃಪತನವನ್ನು ಸಾಬೀತು ಪಡಿಸುತ್ತಿರುತ್ತಲೇ ಇರುತ್ತಾರೆ. ಇದು ಯಾಕೆ ಹೀಗೆ ಎಂಬುದಕ್ಕಿಂತ ಹೆಚ್ಚು ಮಾನಸಿಕ ಸ್ಥಿತಿಗತಿಗಳ ಕುರಿತಾದ ಆಂತರಿಕ ಪ್ರಚೋದನೆಗಳಿಗೆ ನೆರವಾಗುವ ಸಾಧಕ ಬಾಧಕ ತೋರಿಸಿ ನಿಯಂತ್ರಿಸುವ, ತೋರಿಯೂ ನಿಯಂತ್ರಿಸಲಾಗದ ಪರಿಸ್ಥಿತಿಯನ್ನು ಹಲವು ಕೆಟ್ಟ ಗ್ರಹಗಳು ಮನೋಮಂಡಲದ ಮೇಲೆ ಎರಚುತ್ತವೆ. ತಮ್ಮ ದುರ್ಗಮ ಸಂವೇದನೆಗಳಿಂದ ಈ ಗ್ರಹಗಳು ಒಬ್ಬ ವ್ಯಕ್ತಿ ಅನುಪಮವಾದದ್ದನ್ನು ನಡೆಸಲಾಗದಂತೆ ತಡೆಯುತ್ತದೆ. ಇದು ಆತಂಕಕಾರಿಯಾಗಿದೆ.

ಕರ್ಮಾನುಸಾರವಾಗಿ ಮಾನಸಿಕ ಸ್ಥಿತಿಗತಿ
ಈಗ ಎರಡು ವಾರಗಳ ಹಿಂದೆ ಎರಡು ಅಂಕಣದಲ್ಲಿ ಪೂರ್ವಪುಣ್ಯಸ್ಥಾನದ ಕುರುತಾಗಿ ಹಲವಾರು ವರಗಳನ್ನು ವಿಶ್ಲೇಶಿಸಿದ್ದೆವು. ಈ ಸ್ಥಾನಕ್ಕೂ ಜಾತಕದ ಧರ್ಮಸ್ಥಾನಕ್ಕೂ ಸೂಕ್ಷ್ಮಭಾವ ಸಂಬಂಧದ್ದು ಈ ಸ್ಥಾನಗಳ ಅಧಿಪತಿಗಳು ಒಬ್ಬ ವ್ಯಕ್ತಿಯ ಈ ಜೀವಮಾನದ ಸುಖ ಹಾಗೂ ದುಖಃಗಳ ವಿಚಾರದಲ್ಲಿ ಕರ್ಮಫ‌ಲಕ್ಕೆ ಅನುಸಾರವಾಗಿ ಬೆಂಬಲಕ್ಕೆ ಬರುತ್ತದೆ. ಆತ್ಮದ ವಿಚಾರದಲ್ಲಿ ಒಬ್ಬನ ಸ್ಥೈರ್ಯಧೈರ್ಯ ಅಧೈರ್ಯ ಹಾಗೂ ಕುಸಿತ ವಿಚಾರಗಳಲ್ಲಿ ಕರ್ಮಾನುಸಾರವಾಗಿ ಎತ್ತುವ, ಇಳಿಸುವ ಕೆಲಸ ನಡೆಸುತ್ತದೆ. ಕರ್ಮಬಲದ ಮೇಲಿಂದಲೇ ಈ ಗ್ರಹಗಳ ಶಕ್ತಿ ಹಾಗೂ ಮಿತಿಗಳಿದ್ದು ಚಂದ್ರನ ಆದೇಶದ ಮೇರೆಗೆ ಮನೋಮಂಡಲವನ್ನು ಒಬ್ಬ ವ್ಯಕ್ತಿಯ ಸಂಬಂಧವಾಗಿ ಹಿಡಿತಕ್ಕೆ ವಾಸ್ತವತೆಗೆ ತೆರೆಯುತ್ತದೆ. ಮರಣಸ್ಥಾನದ ಅಧಿಪತಿಯ ಬಲಾಬಲದ ಮೇಲಿಂದ ಜೀವನದ ನರಳಾಟಗಳ ಒಟ್ಟೂ ಮೊತ್ತವೇನೆಂಬುದನ್ನು ನಿರ್ಧರಿಸುತ್ತೇವೆ.

ಒಟ್ಟಿನಲ್ಲಿ ಮಾನವನ ಮೆದುಳೆಂಬ ಪ್ರತ್ಯೇಕವಾದ ಅದೇ ಒಂದು ಜಗತ್ತು. ನವಗ್ರಹಗಳ ಪ್ರಭಾವದಿಂದಲೇ ಕರ್ಮಫ‌ಲದ ಸಂಬಂಧವಾಗಿ ಒದಗಿದ ಬ್ಯಾಂಕ್‌ ಬ್ಯಾಲೆನ್ಸ್‌ ಮೇಲೆ ತನ್ನ ಓಡಾಟ ನಡೆಸುತ್ತಿರುತ್ತದೆ. ಮಹಾತ್ಮರುಗಳು ತಮ್ಮ ಮೆದುಳಿನ ಮೇಲೆ ಯುಕ್ತವಾದ ನಿಯಂತ್ರಣ ಸಾಧಿಸಬಲ್ಲರು. ಈ ಯುಕ್ತವಾದ ನಿಯಂತ್ರಣವನ್ನು ನಮ್ಮ ನಮ್ಮ ಧ್ಯಾನ ಸ್ತುತಿ, ಪ್ರಾರ್ಥನೆ, ಅರ್ಚನೆಗಳ ಮೇಲಿಂದಲೇ ಸಾಧಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಯೋಗ್ಯವಾದ ಸಾತ್ವಿಕ ಸಂಸ್ಕಾರಪೂರ್ಣ ವಿಜಾnನಿಗಳ ಮಾರ್ಗದರ್ಶನದ ಮೂಲಕ ಸಾಧಿಸಬಹುದು. ಭಾರತೀಯ ಸಂಸ್ಕೃತಿಯಲ್ಲಿ ಗುರುಗೆ ಮಹತ್ವದ ಸ್ಥಾನವಿದೆ. ಆದರೆ ಅಯೋಗ್ಯ ಗುರುಗಳು ಶಿಷ್ಯನನ್ನು ಶೋಷಿಸುವುದೂ ಇದೆ. ದುಷ್ಟತನಕ್ಕೆ ಇವರೇ ತಳ್ಳುವುದೂ ಇದೆ. ನಮ್ಮ ಮಾನಸಿಕ ಸ್ಥಿತಿಗತಿಗಳ ಸಂಬಂಧವಾಗಿ ನವಗ್ರಹಗಳು ವಹಿಸುವ ಪಾತ್ರ ಪ್ರಧಾನವಾಗಿದೆ. ಹೀಗಾಗಿ ನಾವು ನವಗ್ರಹಗಳ ಕುರಿತು ಅವು ಇನ್ನು ಮುಂದ ಎಷ್ಟೋ ದೂರದಲ್ಲಿರುವ ಮೃಣ್ಮಯವಾದ ದ್ರವ್ಯರಾಶಿಯ ಗಟ್ಟಿಮುದ್ದೆ ಅಂತಲೇ ನಾವು ತಿಳಿಯುವುದು ಯುಕ್ತವಲ್ಲ. ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭೃಶ್ಚ ರಾಹುವೇ ಕೇತುವೇ ನಮಃ ಎಂದು ನಮ್ಮ ಹಿರಿಯರು ಗ್ರಹಗಳನ್ನು ಆದರ ಗೌರವ ಭಕ್ತಿಪೂರ್ವಕವಾಗಿ ನಮಿಸಿದ್ದು ಈ ಎಲ್ಲಾ ಗ್ರಹಗಳೂ ನಮ್ಮ ಮೇಲೆ ಅನುಮಾನಕ್ಕೆ ಆಸ್ಪದವೇ ಇರದಂತೆ ತಮ್ಮ ಪ್ರಭಾವವನ್ನು ಬೀರಬಲ್ಲುದು ಎಂಬುದನ್ನು ತಿಳಿದೇ ಇದ್ದೇವೆ.

ಪ್ರತಿನಿತ್ಯ ಈ ಮಂತ್ರದ ಪಠಣ ಮಾಡುವುದು ಮನಸ್ಸಿಗೆ ದೇಹಕ್ಕೆ ಶಕ್ತಿಗೆ ಪ್ರಾರಬ್ಧ ನಿವಾರಣೆಗೆ ಸಂಜೀನಿಯೇ ಆಗಿದೆ. ರಾಹು ಹಾಗೂ ಕೇತುಗಳು ಛಾಯಾಗ್ರಹಗಳಾದರೂ ವಾಸ್ತವದಲ್ಲಿ ಈ ಛಾಯಾಗ್ರಹಗಳ ಉಪಸ್ಥಿತಿಯ
ಕತ್ತಲುಮಯ ಪರಿಸ್ಥಿತಿಗೆ ಅದರದ್ದೇ ಆದ ತೂಕವಿದೆ. ಲೋಕೋತ್ತರ ಪ್ರಸಿದ್ಧ ಕತೆಗಾರನಿಗೆ ಮನಸ್ಸು ದುರ್ಬಲವೇ ಆದರೆ ಇದೇ ರಾಹು ಅಂಥ ಪ್ರಸಿದ್ಧ ಕತೆಗಾರನಿಗೆ ಆತ್ಮಹತ್ಯೆಯ ಪ್ರೇರಣೆ ನೀಡಿದ. ಕೇವಲ 55 ವಯಸ್ಸಿಗೇ ನೋಬಲ್‌ ಪುರಸ್ಕಾರ ಸಂಪತ್ತು ಸಿಕ್ಕಿದರೂ ಕೇವಲ ತನ್ನ ಮನಸ್ಸಿನ ದುರ್ಬಲತೆಯಿಂದಲೇ ತನ್ನ ತಲೆಗೆ ತಾನೇ ಪಿಸ್ತೂಲಿನ ಟ್ರಿಗರನ್ನು ಒತ್ತಿಕೊಂಡು ಸಾವಿಗೆ ಶರಣಾದ. ಪೂರ್ವಪುಣ್ಯಸ್ಥಾನದಲ್ಲಿದ್ದ ಚಂದ್ರನನ್ನು ರಾಹು ಸಂಪನ್ನವಲ್ಲದ ಕಕ್ಷೆಯಲ್ಲಿ ತೊಳಲಾಡಿಸಿ ಆತ್ಮಹತ್ಯೆಯ ನಿರ್ಧಾರಕ್ಕೆ ತಳ್ಳಿದ್ದ. ಇದೇ ರಾಹು ಪೂರ್ವಪುಣ್ಯ ಸ್ಥಾನದ ಕೇತು ಅದರ ಅಧಿಪತಿ ಮಂಗಳನ ದಿಕºಲದ ಮೂಲಕ ಲೋಕೋತ್ತರ ವಿಜಾnನಿಯನ್ನಾಗಿಸಿ ಶಂಕರಾಚಾರ್ಯರನ್ನು ಚಂದ್ರನ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಮರಣದ ಅಧಿಪತಿ ಶನಿರಾಜ ಕೇವಲ 32ನೇ ವಯಸ್ಸಿಗೇ ಸಾವಿನ ಮನೆಗೆ ತಳ್ಳಿದ.

ಮನಸ್ಸಿನ ಚೌಕಟ್ಟಿನಲ್ಲಿ ಸೂರ್ಯನ ಪಾತ್ರ
ಆತ್ಮಶುದ್ಧಿಗೆ ಪ್ರಧಾನ ಶಕ್ತಿಯೇ ಸೂರ್ಯನಾಗಿದ್ದಾನೆ. ಸೂರ್ಯನ ಬಲ ಉಪಾಸನೆಗಳಿಂದ ಆತ್ಮಶುದ್ಧಿಯನ್ನು ಗಟ್ಟಿಗೊಳಿಸಿಕೊಳ್ಳಬಹುದು. ಜಾnನದ ಸಾûಾತ್ಕಾರಕ್ಕೆ ಸೂರ್ಯನು ಮೆದುಳನ್ನು ಸಂವೇದಿಸಬಲ್ಲ ಪ್ರಚಂಡ ಶಕ್ತಿಯಾಗಿದ್ದಾನೆ. ಇವನ ಶಕ್ತಿಗೆ ಕುಂದುಕೊರತೆಗಳು ಬಂದೊದಗಿದಲ್ಲಿ ಅಹಂಕಾರ, ಮದ ನಿಂದನೆಯ ಮಾತಿಗೆ ಪ್ರೇರಣೆಗಳೆಲ್ಲ ಒದಗಿ ವ್ಯಕ್ತಿಯ ವರ್ಚಸ್ಸಿಗೆ ಧಕ್ಕೆ ಒದಗುತ್ತದೆ. ಮಾನವನ ದೊಡ್ಡ ಶಕ್ತಿ ಅಂಧಕಾರವನ್ನು ದೂರತಳ್ಳಿಕೋರೈಸುವ ಬೆಳಕನ್ನು ತನ್ನ ಹಾಗೂ ಎಲ್ಲರ ಓಳಿತಿಗಾಗಿ ಸ್ನಿಗ್ಧಗೊಳಿಸಲು ಪೂರಕವಾಗಿರಬೇಕು. ಇದಕ್ಕಾಗಿನ ಆತ್ಮಕ್ಕೆ ಅವಶ್ಯವಾದ ಬುದ್ಧಿಗೆ ಚೈತನ್ಯಪೂರ್ಣವಾದ ಬೆಳಕನ್ನು ಸೂರ್ಯ ಒದಗಿಸುತ್ತಾನೆ. ಅಂತರ್ಗತ ಬೌದ್ಧಿಕ ಮನದ ಪಾರದರ್ಶಕ ಬೆಳಕು ಸೂರ್ಯೋಪಾಸನೆಯಿಂದಸೂರ್ಯನ ಅನುಗ್ರಹದಿಂದಲೇ ನಮಗೆ ಸಾಧ್ಯ. ಹಾಗಾಗದೇ ಉಳಿದಲ್ಲಿ ಕತ್ತಲ ಕೂಪವೇ ಆಗುತ್ತದೆ.

ಮನಸ್ಸು ಮತ್ತು ಚಂದ್ರ
ನಮ್ಮ ಮನೋಮಂಡಲವನ್ನು ಹಿಗ್ಗುವ ಬಲೂನಿನಂತೆ ವಿಸ್ತಾರವಾದ ಜಾnನ ಅಡಕಗೊಳ್ಳುವ ಶಕ್ತಿಯನ್ನು ಹಿಗ್ಗಿಸಬಲ್ಲವನಾಗಿದ್ದಾನೆ. ಪರಿಶುದ್ಧವಾದದ್ದು ದುರ್ಗಂಧಮಯವಾದದ್ದು ಇತ್ಯಾದಿ ನಮ್ಮ ಕರ್ಮಫ‌ಲಬದ್ಧವಾಗಿ ಚಂದ್ರನ ಕೈಂಕರ್ಯಕ್ಕೆ ಬದ್ಧಗೊಂಡಿದೆ. ನಮ್ಮ ಮನಸ್ಸೆಂಬ ಬಲೂನು ಚಿಕ್ಕದಿದ್ದರೆ ಏನು ತಾನೇ ತುಂಬಿಕೊಳ್ಳಲು ಸಾಧ್ಯ? ಆದರೂ ಚಂದ್ರ ಒಂದು ಹಂತದಲ್ಲಿ ಇದ್ದ ಪರಿಧಿಯೊಳಗೇ ಶಾಂತಪೂರ್ಣ ಜೀವನಶೈಲಿಯಲ್ಲಿ ನಡೆಸಿ ಕರಿಕತ್ತಲ ಗರ್ಭಸೀಳಿ ಮುಂದಾಗಲು ಬೆಳಕು ಒದಗಿಸಬಲ್ಲ. ಚಂದ್ರನ ಸ್ವಂತ ಬೆಳಕೇ ಎರವಲು ಬೆಳಕು. ಆದರೂ ಕಾಂತಿಮಯ ಬೆಳಕು. ನಮ್ಮನ್ನು ಸಚ್ಚಾರಿತ್ರದಲ್ಲಿ ಕಟ್ಟಿಡಬಹುದಾ¨ ಸಂಪನ್ನ ಶಾಂತಿ ಕಿರಣ ಜ್ವಲಿತ ಬುದ್ಧಿಯ ರೇಕುಗಳನ್ನು ಚಂದ್ರ ಅರ್ಥಪೂರ್ಣವಾಗಿಸಬಲ್ಲ.

ಮನಸ್ಸು ಮತ್ತು ಮಂಗಳ
ಸಂಪನ್ನನಾಗಿ ಮಂಗಳ ಅನುಗ್ರಹಿಸಿದರೆ ನಮ್ಮ ಎಂಥದ್ದೇ ಕರ್ಮದೋಷಗಳನ್ನು ತೊಳೆದು ಧನದ ಮಹಾನ್‌ ಕೋಶವನ್ನೇ ಒದಗಿಸಿ ಜೀವನದ ಸುಖಸಮೃದ್ಧಿಯನ್ನು ಹಿಗ್ಗಿಸುವ ಮಂಗಳಾತ್ಮಕ ಜೀವ ಸಂಜೀನಿಯಾಗಿದ್ದಾನೆ. ಮಂಗಳನಿಗೆ ದೃಢವಾದ ದಿಕºಲ ಕರ್ಮಸ್ಥಾನದಲ್ಲಿ ಮಂಗಳನಿಗೆ ದೊರಕಿತಾದರೆ ಸಚ್ಛಾರಿತ್ರ್ಯದಲ್ಲಿ ನಮ್ಮನ್ನು ನಡೆಸುವ ಮುಂದಿನ ಜನ್ಮಕ್ಕೂ ಸಫ‌ಲವಾದ ಸ್ಥಾನಮಾನ ಸಿಗುವಂತೆ ನಮ್ಮನ್ನು ಅನುಗ್ರಹಿಸಬಲ್ಲ. ಉತ್ತಮವಾದ ಚಂದ್ರನ ಜೊತೆ ದೊರಕಿದರೆ ಭೂಮಿ ಪುತ್ರನಾದ ಮಂಗಳನು ಸರ್ವವಿಧವಾದ ಅರಿಷ್ಟ, ಋಣ ಯಾತನೆಗಳನ್ನು ಪರಿಹರಿಸಬಲ್ಲ. ಯುಕ್ತನಾಗಿರದೇ ಹೋದಲ್ಲಿ ದುಬುìದ್ಧಿ, ಸಮಾಜ ಘಾತುಕ ಶಕ್ತಿ ವಿಕೃತ
ಕಾಮವಾಂಛೆ, ಮದ್ಯಪಾನ ದುಷ್ಟಕೂಟಗಳನ್ನು ಹೊಕ್ಕು ಕೆಟ್ಟ ಹುಳುನಂತೆ ಕ್ರೂರ ಮೃಗದಂತೆ ಸಂಚರಿಸುವ ಬುದ್ಧಿಯ ಅವಿವೇಕತೆಯನ್ನು ನೀಡಿ ಕುತ್ಸಿತನನ್ನಾಗಿಸುತ್ತದೆ. ಒಟ್ಟಿನಲ್ಲಿ ಚಂದ್ರ ಸೂರ್ಯರೂ ಕೂಡಾ ಸಂಪನ್ನತೆ
ಒದಗಿಸಿದಾಗ ಮಂಗಳನ ತೂಕವೂ ಚಿನ್ನಕ್ಕೆ ಸಮಾನ.

ಸದ್ದಾಂ ಹುಸೇನ್‌ ಗೊತ್ತಲ್ಲಾ? ಕುವೈತನ್ನು ಆಕ್ರಮಿಸುವ ಮೂಲಕ ಅಮೆರಿಕಾವನ್ನು ಕೆರಳಿಸಿದ. ಕಾಲಾನುಕ್ರಮದಲ್ಲಿ ಅಮೇರಿಕಾವೇ ಸದ್ದಾಂ ಕುತ್ತಿಗೆಯ ನೇಣಿಗೆ ಕಾರಣವಾಯಿತು. ಸೂರ್ಯನ ದಿವ್ಯತೆ ಇತ್ತಾದರೂ
ಪಾಪ ಕರ್ತರೀ ಯೋಗದ ಕಾರಣ ಸೂರ್ಯನ ಉತ್ತಮ ಮಟ್ಟಕ್ಕೆ ಭಂಗ ಬಂತು. ಚಂದ್ರ ಛಿದ್ರಸ್ಥಾನದಲ್ಲಿ ನೀಚನಾಗಿದ್ದ. ವಿರೋಧಿಗಳನ್ನು ನಿರ್ದಯನಾಗಿ ಮುಗಿಸಿ ರಕ್ತ ರಂಜಿತ ಅಧ್ಯಾಯಗಳನ್ನು ಚಂದ್ರನ ವೈಪರೀತ್ಯಕರ ಪ್ರಚೋದನೆಗೆ ಹಾಗೂ ರಾಹುವಿನ ಪ್ರಚೋದನೆಗೆ ಒಳಗಾಗಿ ಸದ್ದಾಂ ನಿರ್ಮಿಸುತ್ತಲೇ ಹೋದ. ಪರಿಣಾಮವಾಗಿ ಕುಜನು ರಕ್ತಕ್ರಾಂತಿ ರಕ್ತರಂಜಿತ ಶಾಸನಗಳಿಂದಲೇ ಸದ್ದಾಂನ ಉನ್ಮಾದಕ್ಕೆ ರಣಕಹಳೆ ಮೊಳಗಿಸಿ ಸರ್ವಾಧಿಕಾರ ತಂದನಾದರೂ ದುರಂತದೊಂದಿಗೆ ಬದುಕಿನ ವ್ಯಾಪಾರ ಮುಗಿಸಿದ.

ಅನಂತ ಶಾಸ್ತ್ರಿ ಮೊ: 8147824707

 

Trending videos

 
ಓದುಗರ ಅಭಿಪ್ರಾಯ
Back to Top