Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರತ್ನನ್‌ ಪರ್‌ಪಂಚದಲ್ಲಿ ನಮಗೆ ಗೆಲುವೋ, ಸೋಲೋ..?

ಜೀವನದ ಸಂದರ್ಭ ಅನೇಕಾನೇಕ ವೈಚಿತ್ರ್ಯಗಳನ್ನು ಎದುರಿಸುತ್ತಿರುತ್ತದೆ. ಪ್ರಕೃತಿ ಮತ್ತು ಪುರುಷ ಸಂಬಂಧಗಳು ನಿಗೂಢವೂ ಅಲ್ಲ. ಹಾಗಂತ ಎಲ್ಲವೂ ಇದೇ ಎಂಬ ನಿರ್ದಿಷ್ಟ ವಿಚಾರ, ಪ್ರಕೃತಿಯ, ಪುರುಷನ ಸಂದರ್ಭದಲ್ಲಿ ಪೂರ್ತಿ ತೆರೆದುಕೊಂಡೂ ಇಲ್ಲ. ನಮ್ಮ ಭಾರತೀಯ ಪರಂಪರೆಯಲ್ಲಿ ನಮ್ಮ ಪೂರ್ವಿಕರು ಕಿರಿಯರಿಗೆ, ಮಕ್ಕಳಿಗೆ, ಶಿಷ್ಯ, ಶಿಷ್ಯೆಯಂದಿರಿಗೆ ಶ್ರದ್ಧೆ, ಮೇಧಾಶಕ್ತಿ, ಯಶ, ಪ್ರಜ್ಞಾ ಶಕ್ತಿ, ವಿದ್ಯಾ, ಬುದ್ಧಿ, ಆಯುರಾರೋಗ್ಯ, ಸಂಪತ್ತು, ತೇಜಸ್ಸು ಎಲ್ಲ ಕೂಡಿ ಬರಲಿ ಎಂದು ಆಶೀರ್ವಾದಿಸುತ್ತಿದ್ದರು. ಸಂಪತ್ತು ಎಂಬಲ್ಲಿ ಧನ, ಧಾನ್ಯ, ಪುತ್ರ, ಗೋವು ( ಆದಿಯಲ್ಲಿ ಗೋವುಗಳ ಸಂಪತ್ತಿನ ನಿಧಿಯಾಗಿದ್ದವು) ಮನೆ, ಬಟ್ಟೆ ಎಂಬಿತ್ಯಾದಿಗಳೆಲ್ಲಾ ಒಟ್ಟಿಗೆ ಸಮಾವೇಶಗೊಳ್ಳುವ ಸಂಪನ್ನತೆ ಎಂಬುದಾಗಿ ನಾವು ಅರ್ಥ ಮಾಡಿಕೊಳ್ಳಬೇಕು.

ಒಬ್ಬ ವ್ಯಕ್ತಿಯ ಜಾತಕದಲ್ಲಿ ಸಮಸ್ತವೂ ತುಂಬಿ ತುಳುಕದು
ಕರ್ಮ ಬಂಧನಗಳಿಂದಾಗಿ ನಮ್ಮ ಸುಖ ಹಾಗೂ ದುಃಖಗಳೆಲ್ಲ ಏನೇನು ಎಂಬುದು ಭಾರತೀಯ ನಂಬಿಗೆಯ ಪ್ರಕಾರ ಪೂರ್ವ ನಿಗದಿತ. ಲೋಕೋ ಸಮಸ್ತ ಸುಖೀನೋ ಭವಂತು ಎಂಬುದು ನಮ್ಮ ಪರಂಪರೆಯ ಮಂಗಳ ಶ್ಲೋಕದಲ್ಲಿ ಆಶಯ ರೂಪದಲ್ಲಿ ಉಲ್ಲೇಖಿಸಲ್ಪಡುತ್ತದೆ. ಆದರೆ ಅನಾರೋಗ್ಯ, ಅಲ್ಪಾಯಸ್ಸು, ವೈರಿಗಳು, ಬಡತನ, ನಿರ್ಗತಿಕತನ, ವಿದ್ಯಾನಾಶ, ದುರಂತ, ಜೈಲು, ಆರೋಪ, ಕಲಹ, ಅಪವಾದ ಶಿಕ್ಷೆ, ಬವಣೆ, ಕುರೂಪ, ಬೆಂಕಿ, ಭಯ, ಜಿಪುಣತನ, ಇದ್ದೂ ಸುಖಪಡಲಾಗದ ಅತಂತ್ರತೆ, ಇತ್ಯಾದಿ ಇತ್ಯಾದಿ ತುಂಬಿಕೊಂಡೆ ತೀರುತ್ತದೆ. ಹಾಗಂತ ಇದು ಎಲ್ಲರಿಗೂ ಇದು ಪೂರ್ತಿಯಾಗಿ ಎಲ್ಲಾ ರಗಳೆಗಳು ಗಂಟು ಬೀಳುತ್ತವೆ ಎಂದಲ್ಲ. ಒಂದೇ ಕೊರತೆ ಇದ್ದೂ ಇನ್ನು ಏನೆಲ್ಲಾ ಇದ್ದರೂ ಬದುಕು ಹಾಳಾಗಿ ಹೋಗುತ್ತದೆ. ಜೀವನ ಪೂರ್ತಾ ವ್ಯಕ್ತಿಯೊಬ್ಬ ಸುಖೀಯಾಗಿರುತ್ತಾನೆ ಎಂಬುದೇನೂ ನಿಯಮವಲ್ಲ. ಹಾಗೇ ಜೀವನಪೂರ್ತಾ ಅಸುಖೀಯಾಗಿಯೇ ಇರುತ್ತಾನೆ ಎಂಬುದೂ ನಿಯಮವಲ್ಲ. ಜೀವನ ಪೂರ್ತಾ ತೊಳಲಾಟ ಇದ್ದದ್ದೇ. ಏನೋ ಒಂದು ಕೊರತೆ, ಯಾರದೋ ಮಸಲತ್ತು, ಇನ್ನೊಬ್ಬನನ್ನು ನಾಶ ಮಾಡಲು ಸಾಕಾಗುತ್ತದೆ. ದೈವಬಲ, ಅದೃಷ್ಟ ಇದ್ದರೆ ಕೊರಡು, ಬರಡು ಕಾಷ್ಠವೂ ಚಿಗುರುತ್ತದೆ. ಒಬ್ಬ ವ್ಯಕ್ತಿ ಅವನ /ಅವಳ ದಾರಿಯಲ್ಲಿ ಹೆಂಡ ಮಾರಾಟ ಮಾಡಿ ಧನಗಳಿಸಿದರೆಂದು ಎಲ್ಲರೂ ಹಾಗೆ ಮಾಡಿ ಧನ ಗಳಿಸಲಾರರು. ಹಾಗಾದರೆ ಮುಖ್ಯವಾಗಿ ಏನು ಬೇಕು? ಪ್ರಾಪ್ತಿ ಇರಬೇಕು.

ರಾಮಕೃಷ್ಣನ ಅಪ್ಪ ಕರಿಬಸವ ಸ್ವಾಮಿ ಹಾಗೂ ಹಳದಿ ಹರಳು
ರಾಮಕೃಷ್ಣಪ್ಪನಿಗೆ ಹಳದಿ ಹರಳು, ಕನಕಪುಷ್ಯರಾಗವನ್ನು ಧರಿಸಲು ಅವನ ಜಾತಕ ನೋಡಿ ಯಾರೋ ಹೇಳಿದ್ದರು. ಅವರ ಆದೇಶದ ಪ್ರಕಾರ ಹರಳನ್ನು ಧರಿಸಲು ಮುಂದಾದ. ಅದೆಂತೋ ಏನೋ ಧರಿಸುವ ದಿನ ಹಳದಿ ಹರಳು ಕೈ ತಪ್ಪಿ ಉಂಗುರದ ಸಹಿತ ಹಾಲು ಕಾಯಿಸಿ ಗ್ಯಾಸ್‌ ಸ್ಟೋವ್‌ ಮೇಲಿಂದ ಇಳಿಸುವಾಗ ಒಲೆಯ ಬೆಂಕಿಯಲ್ಲಿ ಜಾರಿ ಬಿತ್ತು. ಆದರೆ ಸರ್ರನೆ ಬೆಂಕಿಯಿಂದ ಹೊರತೆಗೆದು ಮತ್ತೆ ಧರಿಸಿಕೊಂಡ. ದುರ್ದೈವವೋ ಎಂಬಂತೆ ನಾಲ್ಕೇ ದಿನಗಳ ಅಂತರದಲ್ಲಿ ರಾಮಕೃಷ್ಣನ ಅಪ್ಪ ಕರಿಬವಸ್ವಾಮಿ ನೀರಿಗೆ ಜಾರಿ ಮರಣಹೊಂದಿದ. ರಾಮಕೃಷ್ಣನ ಎದೆ ಹೊಯ್ದಾಡಿತು. ಕನಕ ಪುಷ್ಯರಾಗ ಎಸೆದುಬಿಡುವ ಮನಸ್ಸಾಗಿತ್ತು. ಹರಳನ್ನು ಧರಿಸು ಎಂದು ಸಲಹೆ ನೀಡಿದವರ ಬಳಿ ಏಕೆ ಇಂಥ ಕೆಟ್ಟ ಹರಳನ್ನು ಧರಿಸಲು ಸಲಹೆ ನೀಡಿದಿರಿ ಎಂದು ಕೇಳಿಯೇ ಎಸೆದರಾಯ್ತು ಎಂದು ಸೂತಕ ಕ್ರಿಯಾಕರ್ಮ ಮುಗಿದ ಮೇಲೆ, ಸಂಬಂಧಿಸಿದ ಹಿರಿಯರನ್ನು ಸಂಧಿಸಿ ಕೇಳಿದ. ಬೆಂಕಿಯಲ್ಲಿ ಬಿತ್ತೇ ಇದು ಎಂದು ಹಿರಿಯರು ಕೇಳಿದರು, ಹೌದು ಹೇಗೆ ತಿಳಿದಿರಿ ನೀವಿದನ್ನೂ? ಎಂದು ರಾಮಕೃಷ್ಣ ಮರು ಪ್ರಶ್ನಿಸಿದ್ದ. ನಿನ್ನ ಹಿರಿಯರ ಆಯಸ್ಸು ಮುಗಿದಿತ್ತು, ಅವರ ಆಶೀರ್ವಾದ ನಿನಗಿನ್ನು ದಕ್ಕುತ್ತದೆ. ಅಸಹಜ ಸಾವಾದ್ದರಿಂದ ಅರಳಿಮರದ ಎಲೆಯನ್ನು ಉಪಯೋಗಿಸಿ ಒಂದು ಜಪವನ್ನು ದಿನಕ್ಕಿಷ್ಟು ಬಾರಿ ಮಾಡು ನಿನಗೂ ಅವರಿಗೂ ಶ್ರೇಯಸ್ಸಾಗುತ್ತದೆ ಎಂದರು. ಕರಿಬಸವ ಸ್ವಾಮಿಗೆ 82 ವರ್ಷ ವಯಸ್ಸಾಗಿತ್ತು. ಬೆಳಗ್ಗೆ ತೋಟದಲ್ಲಿ ಹೂ ಕೀಳುತ್ತಿದ್ದಾಗ ನೀರಿನಲ್ಲಿ ಅವರಿಗೆ ಮರಣ ಕಾದಿತ್ತು. ಈಗ ರಾಮಕೃಷ್ಣ ದೊಡ್ಡ ಶಹರಿನಲ್ಲಿ ನಾಲ್ಕು ಅಪಾರ್‌rಮೆಂಟ್‌ ಕಟ್ಟಿಸಿ ಅಗಾಧ ಲಾಭ ಗಳಿಸಿದ್ದಾರೆ.

ವೆಂಕಟರಾಜು ಹೇಳಿದ ಕತೆ ಕೇಳಿ...
ವೆಂಕಟರಾಜು ಯಾರು ಎಂದು ಕೇಳಬೇಡಿ, ಯಾವೂರು ಎಂದೂ ಕೇಳಬೇಡಿ. ಒಂದೂರಿನ ವೆಂಕಟರಾಜು ಎನ್ನುವ ವ್ಯಕ್ತಿ ಡೇವಿಡ್‌ ಕ್ಯಾರಿ ಎನ್ನುವ ಡೆನ್ಮಾರ್ಕಿನ ಮನುಷ್ಯನನ್ನು ರೈಲಿನಲ್ಲಿ ಭೇಟಿಯಾದ. ಕ್ಯಾರಿ ಸುಮಾರು ಐವತ್ತು ವರ್ಷದ ನರೆತ ಕೂದಲಿನ ಹೊಳಪು ನೀಲಿ ಕಣ್ಣುಗಳ ಸದೃಢ ಮಧ್ಯವಯಸ್ಕ. ವೆಂಕಟರಾಜುವಿಗೆ ಅವನ ಕಣ್ಣುಗಳಲ್ಲಿ ಏನೋ ಒಂದು ಹೊಳಪಿನ ನೀಲಾಂಜನ ಹತ್ತಿಕೊಂಡಂತೆ ಕಾಣಿಸುತ್ತಿತ್ತು. ವೆಂಕಟರಾಜುವಿಗೆ ಜೀವನ ಬರಡಾಗಿತ್ತು. ಇದ್ದಿದ್ದರಲ್ಲಿ ಪೂರ್ತಿ ಓದಲೂ ಆಗದೆ ಹೊಟ್ಟೆ ತುಂಬುವಷ್ಟು ಲಾಭವೂ ಇಲ್ಲದೆ ಬಡತನದಲ್ಲೇ ನರಳಾಡತೊಡಗಿದ್ದ ಘೋರ ಬದುಕು.

ಹೇಗೋ ಕಷ್ಟ ಪಟ್ಟು ವೆಂಕಟರಾಜುವಿನ ಅಪ್ಪ ನರಹರಿರಾಯ ಮಗಳ ಮದುವೆ ಮಾಡಿಸಿದ್ದ. ತಂಗಿಯ ಮದುವೆಯ ಭಾರ ರಾಜುವಿನ ಮೇಲೆ ಬೀಳಲಿಲ್ಲ. ಆದರೆ ತಂಗಿಯ ಮದುವೆ ಆಗುತ್ತಿದ್ದಂತೆ ಅಪ್ಪ ಅಮ್ಮ ಸತ್ತಿದ್ದರು. ವೆಂಕಟರಾಜು ಯಾರನ್ನೋ ನಂಬಿ ಕೆಲಸ ಅರಸಿ ದಿಲ್ಲಿಗೆ ಹೋಗಿ ಬಿಟ್ಟಿದ್ದ. ದಿಲ್ಲಿಯಲ್ಲೂ ಏನೂ ಗಿಟ್ಟಲಿಲ್ಲ, ಊರೇ ವಾಸಿ ಎಂದೆನಿಸಿಕೊಂಡು  ಹೊರಟಿದ್ದು ನಾಲ್ಕು ಊರ ಮಂದಿಯನ್ನು ಅಕ್ಷರಶಃ ಬೇಡಿ ಕೂಡಿಸಿಕೊಂಡ ಹಣದಲ್ಲಿ. ಡೇವಿಡ್‌ ಕ್ಯಾರಿ ಎಂಬ ಡೇನಿಶ್‌ ಮನುಷ್ಯ ಭೇಟಿಯಾದದ್ದು ಇದೇ ಮರುಪ್ರಯಾಣದಲ್ಲಿ. ವೆಂಕಟರಾಜುಗೆ ಏನನ್ನಿಸಿತೋ ಏನೋ ಟ್ರೈನಿನಲ್ಲಿ ಬಂದ ವಡಾ ಮತ್ತು ಚಾಯ್‌ ಪ್ಲೇಟ್‌ ಒಂದನ್ನು ತಾನೂ ಖರೀದಿಸಿ,
ಕ್ಯಾರಿಗೂ ಕೊಡಿಸಿದ.

ಪ್ರಯಾಣದ ಕೊನೆಯಲ್ಲಿ ಡೇವಿಡ್‌ ನಟರಾಜುನ ಕೈಗೆ ತನ್ನ ಶರ್ಟ್‌ ಕಿಸೆಯನ್ನು ತಡಕಾಡಿ ಒಂದು ನೀಲಿ ಹರಳನ್ನು ಇದು ನಿನಗೆ ಎಂದು ವೆಂಕಟರಾಜುಗೆ ಕೊಟ್ಟ. ಇದು ನನಗೆ ದಕ್ಕುವ ಹರಳಲ್ಲ, ನಿನಗೆ ಹೇಳಿ ಮಾಡಿಸಿದಂತಿದೆ ಎಂದು ಅವನಿಗೆ ಬಂದಷ್ಟು ಇಂಗ್ಲೀಷಿನಲ್ಲಿ ಹೇಳಿ ಕೊಟ್ಟಿದ್ದ. ನಂಬಿದರೆ ನಂಬಿ ಬಿಟ್ಟರೆ ಬಿಡಿ ವೆಂಕಟರಾಜು ಈಗ ಈ 38 ವರ್ಷಗಳಲ್ಲಿ ಸುಮಾರು ಮುನ್ನೂರು ಕೋಟಿ ರುಪಾಯಿ ಆಸ್ತಿಯ ಒಡೆಯ. ಅವನ ತಾಯಿಯ ದೊಡ್ಡಕ್ಕನ ಮಗಳ ಗಂಡ ವೆಂಕಟರಾಜುವನ್ನು ಹೈದರಾಬಾದಿಗೆ ಕರೆತಂದು ತನ್ನ ಪುಟ್ಟ ಹೋಟೆಲ್‌ನಲ್ಲಿ ಕ್ಯಾಷಿಯರ್‌ ಆಗಿ ಕೂಡಿಸಿದ. ಅಲ್ಲಿಂದ ಇಲ್ಲಿಯ ತನಕ ಕತೆ ದೊಡ್ಡದೇ ಇದೆ. ವೆಂಕಟರಾಜು ಗೆ ಈಗ ವಯಸ್ಸು 58. ನೀಲಿ ಹರಳನ್ನು ಅವನು ಈಗಲೂ ಧರಿಸಿದ್ದಾನೆ. ಡ್ಯಾನಿಶ್‌ನ ಕ್ಯಾರಿಯನ್ನು, ಹಾಗೂ ಅವನ ನೀಲಿ ಕಣ್ಣುಗಳನ್ನು ಅ Ê ‌ ® ೆ ಂ ¨ ‌ ೂ ಮರೆಯುವುದಿಲ್ಲ.

ಮನಬಂದಂತೆ ಹರಳಧಾರಣೆ ಬೇಡ
ಕೆಲವು ಜನ ಮನಸ್ಸಿಗೆ ಬಂದಂತೆ ಹರಳನ್ನು ಧರಿಸುತ್ತಾರೆ, ಆದರೆ ಅದಕ್ಕೆ ನಿಯಮಗಳುಂಟು. ಚಂದಕ್ಕಾಗಿ ಹರಳಿನ ಧಾರಣೆ ಸೂಕ್ತವಲ್ಲ. ಒಗ್ಗದ ಹರಳುಗಳ ಸಲುವಾಗಿ ಸೂಕ್ತವಾದ ಅನುಷ್ಟಾನ ಜಪ ಮಂತ್ರಗಳು ಪಠಣ ಮಾಡಲ್ಪಡಬೇಕು. ಧರಿಸಿದವರ ಜವಾಬ್ದಾರಿ ತುಂಬಾ ಇದೆ.

ಕೋಹಿನೂರು ವಜ್ರ ಮತ್ತು ಇಂಗ್ಲೆಂಡ್‌
ಕೋಹಿನೂರು ವಜ್ರದ ತವರು ಭಾರತವೇ. ಆದರೂ ಅದು ಹೇಗೆಲ್ಲಾ ಯಾರ್ಯಾರದೋ ಕೈದಾಟಿ ಈಗ ಇಗ್ಲೆಂಡ್‌ ದೇಶದ ಸುಪರ್ದಿನಲ್ಲಿದೆ. ಕೈಯಿಂದ ಕೈದಾಟಿ ಹೋದ ಇತಿಹಾಸದುದ್ದಕ್ಕೂ ಕೋಹಿನೂರ್‌ ವಜ್ರ ಸಂಕಷ್ಟಗಳ ಕಗ್ಗಂಟನ್ನು ಸಂಬಂಧಿಸಿದ ಶ್ರೇಷ್ಠರಿಗೆ ಒದಗಿಸುತ್ತಲೇ ಹೋಗಿದೆ. ಕೋಹಿನೂರ್‌ ವಜ್ರ ಇಂಗ್ಲೆಂಡಿಗೆ ಬರುತ್ತಿದ್ದಂತೆ ಎಂದಲ್ಲದಿದ್ದರೂ, ಸೂರ್ಯ ಮುಳುಗದ ಸಾಮ್ರಾಜ್ಯ ಸವೆಯತೊಡಗಿತ್ತು. ಬಸವಳಿದು ಉಬ್ಬಸ ಬಿಡುತ್ತಾ ಜಾಗತಿಕ ಸಮರದ ಸಂಖ್ಯೆ ಮೂರರಲ್ಲಿ ಪೇಚಾಡಿದ ರೀತಿ ಅಂತಿತದ್ದಲ್ಲ. ಮಿತ್ರ ಪಕ್ಷಗಳಿಗೆ ಆಖೈರಿನ ಗೆಲುವು ದಕ್ಕಿದರೂ ಇಂಗ್ಲೆಂಡ್‌ ಕುಸಿದಿತ್ತು. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸ್ವಾತಂತ್ರ ನೀಡಲೇ ಬೇಕಾಯ್ತು. ಇಂಗ್ಲೆಂಡ್‌ ಉಬ್ಬಸ ಬಿಡುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆರ್ಥಿಕವಾಗಿ ಬಲಶಾಲಿಯಲ್ಲ ಅದೀಗ. ಇಂಗ್ಲೆಂಡಿನ ರಾಜಮನೆತನ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಕೋಹಿನೂರ್‌ ವಜ್ರ ಭಾರತಕ್ಕೆ ಹಿಂತಿರುಗಿದ್ದಾದರೆ ಅದು ಭಾರತದ ಸಮೃದ್ಧಿಗೆ ದಾರಿಯಾದೀತು. ಭಾರತದ ಭಾಗ್ಯಕ್ಕೆ ಆಸರೆಯಾಗಿರುವ ಏಕೈಕ ಗ್ರಹವೆಂದರೆ ಅದು ಶುಕ್ರಗ್ರಹ. ಶುಕ್ರಗ್ರಹದ ಪಟ್ಟಿಗೆ ಬೇರೆಬೇರೆ ಕಾರಣಗಳಿಗಾಗಿ ವಜ್ರ ಸೂಕ್ತ.

*ಅನಂತ ಶಾಸ್ತ್ರಿ ಮೊ: 8147824707

 

Trending videos

 
ಓದುಗರ ಅಭಿಪ್ರಾಯ
Back to Top