Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸನ್ಮಾನಿಸುವ ಸೌಜನ್ಯ ಸರ್ಕಾರಕ್ಕಿಲ್ಲವೇ?

ಕನ್ನಡದ ನಟನೊಬ್ಬನಿಗೆ ಕನ್ನಡ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದರೆ ಎಲ್ಲರೂ ಖುಷಿ ಪಡುತ್ತಾರೆ. ಯಾಕೆಂದರೆ ಅದು ಕನ್ನಡದ ಹೆಮ್ಮೆ. ಈ ವರ್ಷ ಆ ಹೆಮ್ಮೆಗೆ ಕಾರಣರಾಗಿದ್ದು ನಟ ಸಂಚಾರಿ ವಿಜಯ್‌. "ನಾನು ಅವನಲ್ಲ ಅವಳು' ಚಿತ್ರದ ನಟನೆಗಾಗಿ ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಮಾರು ವರ್ಷಗಳ ನಂತರ ಕನ್ನಡದ ನಟನಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದರಿಂದ ಅನೇಕರು ಸಂಭ್ರಮಿಸಿದರು. ಆದರೆ, ನಮ್ಮ ಸರ್ಕಾರಕ್ಕೆ ಒಬ್ಬ ರಾಷ್ಟ್ರಪ್ರಶಸ್ತಿ ವಿಜೇತನನ್ನು ಸನ್ಮಾನಿಸುವಂತಹ ಸೌಜನ್ಯ ಇಲ್ಲವೇ ಅಥವಾ ರಾಷ್ಟ್ರಪ್ರಶಸ್ತಿ ಬಂದಿರೋದೇ ಸರ್ಕಾರಕ್ಕೆ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಬಂದು ಇಷ್ಟು ದಿನವಾದರೂ ಸರ್ಕಾರದಿಂದ ಒಂದು ಅಧಿಕೃತ ಸನ್ಮಾನ ನಡೆಯದಿರುವುದು. ಇದು "ನಾನು ಅವಳಲ್ಲ, ಅವನು' ಚಿತ್ರದ ನಿರ್ಮಾಪಕ ರವಿ ಗರಣಿಗೆ ಬೇಸರ ತಂದಿದೆ.

"ಘಟಾನುಘಟಿ ನಾಯಕ ನಟರಿದ್ದರೂ ಅವರೆಲ್ಲರನ್ನು ಹಿಂದಿಕ್ಕಿ ಸಂಚಾರಿ ವಿಜಯ್‌ ತನ್ನ ನಟನೆಯ ಮೂಲಕ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದಿದ್ದಾನೆ. ಇದು ಹೆಮ್ಮೆಯ ವಿಷಯ. ಎಷ್ಟೋ ವರ್ಷಗಳ ನಂತರ ಈ ಪ್ರಶಸ್ತಿ ಕನ್ನಡದ ಪಾಲಾಗಿದೆ. ಪ್ರಕಾಶ್‌ ರೈ ಸೇರಿದಂತೆ ಅನೇಕರು ವಿಜಯ್‌ನನ್ನು ಸನ್ಮಾನಿಸಿದರು. ಆದರೆ ನಮ್ಮ ಸರ್ಕಾರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತನನ್ನು ಗೌರವಿಸುವ ಸೌಜನ್ಯ ಕೂಡಾ ಇಲ್ಲ. ಅದೇ ಮಲಯಾಳಂನಲ್ಲಿ ಅಲ್ಲಿನ ನಟನಿಗೆ ಪ್ರಶಸ್ತಿ ಬಂದರೆ ಇಡೀ ರಾಜ್ಯವೇ ಸಂಭ್ರಮಿಸುತ್ತದೆ. ನಮ್ಮ ಸಂಚಾರಿ ವಿಜಯ್‌ಗೆ ಪ್ರಶಸ್ತಿ ಬಂದಾಗ ಸನ್ಮಾನಿಸುವ ಗೋಜಿಗೆ ಸರ್ಕಾರ ಹೋಗಿಲ್ಲ. ಈ ಹಿಂದೆ ಕನ್ನಡದ ಕೆಲವರಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಬ್ಯಾಂಕ್ವೇಟ್‌ ಹಾಲ್‌, ಅಶೋಕ್‌ ಹೋಟೆಲ್‌ನಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.

ಆದರೆ, ರಂಗಭೂಮಿಯಿಂದ ಬಂದು ತನ್ನ ಪ್ರತಿಭೆಯ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ಸಂಚಾರಿ ವಿಜಯ್‌ಗೆ ಆ ಭಾಗ್ಯವಿಲ್ಲ. ಬಹುಶಃ ರಾಷ್ಟ್ರಪ್ರಶಸ್ತಿ ಬಂದಿರೋದು ಗೊತ್ತಿದೆಯೋ ಇಲ್ಲವೋ. ವಿಜಯ್‌ ತನ್ನ ಪರಿಚಯ ಮಾಡಿಕೊಂಡಾಗ ಒಂದು ಹಾರ ಹಾಕಿ ಕಳುಹಿಸೋದು ಶೋಭೆಯಲ್ಲ' ಎಂಬುದು ನಿರ್ಮಾಪಕ ರವಿ ಗರಣಿ ಪ್ರಶ್ನೆ.

 

Trending videos

 
ಓದುಗರ ಅಭಿಪ್ರಾಯ
Back to Top