Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೈಸೂರಿನ ಕಿಕ್ ಬಾಕ್ಸರ್'ಗೆ ಪವರ್ ಸ್ಟಾರ್ ಪುನೀತ್ ನೆರವಿನ ಹಸ್ತ

ಮೈಸೂರು : ಏಷ್ಯನ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟ ಮೈಸೂರಿನ ಕಿಕ್ ಬಾಕ್ಸರ್ ಪಟು ಹರ್ಷರವರಿಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹಾಯ ಮಾಡಲು ಮುಂದಾಗಿದ್ದಾರೆ.

ಮೈಸೂರಿನ ವಿನಾಯಕನಗರದ ನಿವಾಸಿಯಾಗಿರುವ ಹರ್ಷ ಏಷ್ಯನ್ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್'ಶಿಪ್'ಗೆ ತೆರಳಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಈ ಚಾಂಪಿಯನ್ ಶಿಪ್'ನ್ನು ನವೆಂಬರ್ 21ರಿಂದ 30ರವರೆಗೆ ಐರ್ಲೆಂಡ್ ದೇಶದಲ್ಲಿ ಆಯೋಜಿಸಲಾಗಿದೆ. ಆದರೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಾಕ್ಸರ್ ಹರ್ಷಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು.

ಕೆಲ ದಿನಗಳ ಹಿಂದೆ ಪವರ್ ಸ್ಟಾರ್'ನ್ನು ಭೇಟಿ ಮಾಡಿರುವ ಹರ್ಷ ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆಯೇ ವಿಶ್ವ ಚಾಂಪಿಯನ್ ಶಿಪ್'ನಲ್ಲಿ ಭಾಗವಹಿಸಲು ಎದುರಾಗಿರುವ ಹಣಕಾಸಿನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್'ನಲ್ಲಿ ಭಾಗವಹಿಸಲು ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಹರ್ಷ ಸಂತಸ ವ್ಯಕ್ತಪಡಿಸಿದ್ದಾರೆ.

-ಕಪ್ಪು ಮೂಗುತ್ತಿ

 

Trending videos

 
ಓದುಗರ ಅಭಿಪ್ರಾಯ
Back to Top