Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಕ್ಟೋಬರ್‌ ಒಂದರಂದೇ ಐರಾವತ

ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ. ಇಂತಹ ಸುದ್ದಿಗಳಿಂದಾಗಿ ಹೊಸ ಸಿನಿಮಾಗಳ ನಿರ್ಮಾಪಕರು ಗೊಂದಲಕ್ಕೆ ಒಳಗಾಗಿದ್ದು ಮಾತ್ರ ಸುಳ್ಳಲ್ಲ. ಈಗ ಸ್ವತಃ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್‌ "ಐರಾವತ' ಚಿತ್ರ ಅಕ್ಟೋಬರ್‌ 1 ರಂದು ತೆರೆಕಾಣುವುದು ಖಚಿತ ಎನ್ನುವ ಮೂಲಕ ಗೊಂದಲಕ್ಕೆ ತೆರೆಎಳೆದಿದ್ದಾರೆ.

"ಐರಾವತ' ಚಿತ್ರದ ಬಿಡುಗಡೆಯನ್ನು ನೋಡಿಕೊಂಡು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಾಕಷ್ಟು ಸಿನಿಮಾಗಳು ಸಾಲಿನಲ್ಲಿ ನಿಂತಿವೆ. ಆದರೆ, ಚಿತ್ರ ಯಾವಾಗ ಬಿಡುಗಡೆಯಾಗುತ್ತದೆಂಬುದು ಪಕ್ಕಾ ಆಗಿರದ ಕಾರಣ ಡೇಟ್‌ ಅನೌನ್ಸ್‌ ಮಾಡಿರಲಿಲ್ಲ. ದೊಡ್ಡ ಸಿನಿಮಾದ ಮುಂದೆ ಬರುವ ರಿಸ್ಕ್ ಬೇಡ ಎಂಬ ಕಾರಣಕ್ಕೆ "ಐರಾವತ'ವನ್ನು ಎದುರು ನೋಡುತ್ತಿದ್ದರು ಹೊಸ ಚಿತ್ರಗಳ ನಿರ್ಮಾಪಕರು. ಈಗ "ಐರಾವತ' ಚಿತ್ರ ಅಕ್ಟೋಬರ್‌ 1ರಂದು ತೆರೆಕಾಣುವುದು ಖಚಿತವಾಗಿದೆ. ಅಲ್ಲಿಗೆ ಬಿಡುಗಡೆಯ ಗೊಂದಲಕ್ಕೆ ತೆರೆಬಿದ್ದಂತಾಗಿದೆ. "ಐರಾವತ' ಬಿಡುಗಡೆಯಾಗುತ್ತಿದ್ದಂತೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರಲ್ಲಿ ಬಹುತೇಕ ಹೊಸಬರ ಚಿತ್ರಗಳಿವೆ ಎಂಬುದು ಗಮನಾರ್ಹ. ಇನ್ನು, "ಐರಾವತ' ಬಿಡುಗಡೆಗೆ ಮುನ್ನ ಸಿಗುವ ಎರಡು ವಾರಗಳಲ್ಲಿ ಸುಮಾರು ಏಳೆಂಟು ಸಿನಿಮಾಗಳು ಬಿಡುಗಡೆಯಾಗಲಿವೆ. ಆ ನಂತರ ಅಕ್ಟೋಬರ್‌ 9ರಿಂದ ಸತತವಾಗಿ ಹೊಸಬರ ಚಿತ್ರಗಳು ತೆರೆಕಾಣಲಿವೆ. "ಅಂಬರೀಶ' ಚಿತ್ರದ ನಂತರ ಬರುತ್ತಿರುವ ದರ್ಶನ್‌ ಚಿತ್ರ ಇದಾಗಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಕೂಡಾ ಇದೆ. ಚಿತ್ರದಲ್ಲಿ ದರ್ಶನ್‌, ಊರ್ವಶಿ ರೌತೆಲ್ಲಾ, ಪ್ರಕಾಶ್‌ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ.

 

Trending videos

 
ಓದುಗರ ಅಭಿಪ್ರಾಯ
Back to Top