Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸ್ಮೈಲ್‌ ಮಾಡಿದ ರಮ್ಮಿ!

ಈಗಂತೂ ಹೊಸಬರೆಲ್ಲಾ ಸೇರಿ ಕಿರುಚಿತ್ರ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಅಂತೆಯೇ ನಿರ್ದೇಶಕ ಸ್ಮೈಲ್‌ ಶ್ರೀನು ಅವರು ಇಲ್ಲೊಂದು ಟೀಮ್‌ ಕಟ್ಟಿಕೊಂಡು ಒಂದೂವರೆ ತಾಸಿನ ಕಿರುಚಿತ್ರವೊಂದನ್ನು ಮಾಡಿದ್ದಾರೆ. "ತೂಫಾನ್‌' ಚಿತ್ರ ನಿರ್ದೇಶಿಸಿದ ಬಳಿಕ ಶ್ರೀನು ಗಾಂಧಿನಗರದಲ್ಲಿ ಕಾಣಿಸಿಕೊಳ್ಳಲಿಲ್ಲ. ಹಾಗಂತ ಅವರು ಎಲ್ಲೋ ಹೋಗಿಬಿಟ್ಟರು ಅಂದುಕೊಳ್ಳುವಂತೆಯೂ ಇಲ್ಲ. ಈ ಗ್ಯಾಪ್‌ನಲ್ಲಿ ಶ್ರೀನು ಬಳ್ಳಾರಿಯಲ್ಲಿ ತಮ್ಮದೊಂದು ಅಕಾಡೆಮಿ ಸ್ಥಾಪಿಸಿ, ಆ ಮೂಲಕ ಹೊಸ ಪ್ರತಿಭೆಗಳಿಗೆ ತರಬೇತಿ ನೀಡುವ ಕೆಲಸದಲ್ಲಿ ನಿರತರಾಗಿದ್ದರು. ತಮ್ಮ ಅಕಾಡೆಮಿ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಯುವ ಪ್ರತಿಭೆಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಶ್ರೀನು, ಸದ್ದಿಲ್ಲದೆಯೇ ಕೆಲಸ ಶುರುವಿಟ್ಟುಕೊಂಡಿದ್ದರು. ಈಗ ತಮ್ಮ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು "ರಮ್ಮಿ' ಎಂಬ ಕಿರುಚಿತ್ರ ತಯಾರಿಸಿದ್ದಾರೆ.

ತಮ್ಮ ಸೆ¾„ಲ್‌ ಸಿಲ್ವರ್‌ ಸ್ಕ್ರೀನ್‌ ಅಕಾಡೆಮಿ ಬ್ಯಾನರ್‌ನಡಿ ತಯಾರಾಗಿರುವ "ರಮ್ಮಿ' ಕಿರುಚಿತ್ರ ಪ್ರದರ್ಶನ ಇತ್ತೀಚೆಗೆ ನಡೆಯಿತು. ಮೊದಲ ಸಲ ತೆರೆಯ ಮೇಲೆ ಕಾಣಿಸಿಕೊಂಡಿರುವ ಯುವ ಪ್ರತಿಭೆಗಳು ಹಾಗು ತಮ್ಮ ಕುಟುಂಬವರ್ಗದವರು, ಗೆಳೆಯರನ್ನೆಲ್ಲಾ ಆ ಪ್ರದರ್ಶನಕ್ಕೆ ಆಹ್ವಾನಿಸಿದ್ದರಿಂದ ಅಂದು ಪ್ರದರ್ಶನದ ಚಿತ್ರಮಂದಿರ ತುಂಬಿ ತುಳುಕುತ್ತಿತ್ತು. ಇದೇ ಸಂದರ್ಭದಲ್ಲಿ ತಮ್ಮ ಚಿತ್ರಕ್ಕೆ ಸಹಕರಿಸಿದ, ಬೆಂಬಲವಾಗಿ ನಿಂತವರನ್ನು ಶ್ರೀನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು. ಅಕಾಡೆಮಿಯಲ್ಲಿ ನಟನೆ ಕಲಿತ ಸುಮಾರು 15 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನೂ ವಿತರಿಸಲಾಯಿತು.

ಅಂದು ಚಿತ್ರರಂಗದ ಅನೇಕರು ಆಗಮಿಸಿದ್ದರು. ಶ್ರೀನು, ನಿರ್ದೇಶಕ ಇಂದ್ರಬಾಬು, ಸುನಿ ಮತ್ತಿತರರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಸುನಿ, ಶ್ರೀನು ಅವರ ಕೆಲಸವನ್ನು ಮೆಚ್ಚಿಕೊಂಡರು. "ಎಲ್ಲರ ಲೈಫ್ನಲ್ಲೂ ರಮ್ಮಿ ಬೀಳಲಿ' ಅಂತ ಶುಭ ಹಾರೈಸಿದರು ಸುನಿ. ಇಂದ್ರಬಾಬು, ಚಿತ್ರದಲ್ಲಿ ಕಾಣಿಸಿಕೊಂಡಿರುವ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ ಎಂದು ಹರಸಿದರು. ಶ್ರೀನು ಸಿನಿಮಾವನ್ನು ಪ್ರೀತಿಸುತ್ತಾರೆ ಅನ್ನುವುದಕ್ಕೆ ಹೊಸಬರಿಗಾಗಿ ಖರ್ಚು ಮಾಡಿ ಸಿನಿಮಾ ಮಾಡಿರುವುದೇ ಕಣ್ಣ ಮುಂದಿರುವ ಸಾಕ್ಷಿ' ಎಂದರು. ಅಂದು ಅಕಾಡೆಮಿ ವಿದ್ಯಾರ್ಥಿಗಳು ಪ್ರೀತಿಯಿಂದಲೇ ಶ್ರೀನು ಅವರನ್ನು ಸನ್ಮಾನಿಸಿದರು.

 

Trending videos

 
ಓದುಗರ ಅಭಿಪ್ರಾಯ
Back to Top