Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೆಂಗಳೂರಲ್ಲಿ ವಿದ್ಯುತ್‌ ಕಡಿತ ಇಲ್ಲ: ಗಣೇಶನ ಹಬ್ಬಕ್ಕೆ ಸಿಹಿಸುದ್ದಿ

ಬೆಂಗಳೂರು: ವಿದ್ಯುತ್‌ ಉತ್ಪಾದನೆಯಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ತನ್ನ ವ್ಯಾಪ್ತಿಯಲ್ಲಿ ಜಾರಿಯಾಗಿದ್ದ ಲೋಡ್‌ಶೆಡ್ಡಿಂಗ್‌ ಅನ್ನು ಬೆಸ್ಕಾಂ ವಾಪಸ್‌ ಪಡೆದಿದೆ. ಇದರಿಂದಾಗಿ ಸೆ.16ರ ಬುಧ ವಾರದಿಂದ ನಗರದಲ್ಲಿ ಯಾವುದೇ ರೀತಿಯ ವಿದ್ಯುತ್‌ ಕಡಿತ ಉಂಟಾಗುವುದಿಲ್ಲ.

ದುರಸ್ತಿಗೊಂಡ ಉಡುಪಿ ಉಷ್ಣ ವಿದ್ಯುತ್‌ ಸ್ಥಾವರದ ಒಂದು ಘಟಕ ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದ ಮತ್ತೂಂದು ಘಟಕದಿಂದ ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ ಮತ್ತು ಪವನ ವಿದ್ಯುತ್‌ ಪ್ರಮಾಣ ಕೂಡ ಗಣನೀಯ ವಾಗಿ ಏರಿಕೆಯಾಗಿದೆ. ಈ ಮೊದಲು ಬೆಸ್ಕಾಂಗೆ 20 ಮೆ.ವ್ಯಾ. ಬರುತ್ತಿದ್ದ ಪವನ ವಿದ್ಯುತ್‌ ಈಗ 300 ಮೆ.ವ್ಯಾ. ತಲುಪಿದೆ. ಇದರಿಂದ ಹೊರೆ ಕಡಿಮೆಯಾಗಿದ್ದು, ಲೋಡ್‌ಶೆಡ್ಡಿಂಗ್‌ ಇರುವುದಿಲ್ಲ. ಅಷ್ಟೇ ಅಲ್ಲ, ಬೆಸ್ಕಾಂ ವ್ಯಾಪ್ತಿಯ ನಗರ, ಪಟ್ಟಣ ಹಾಗೂ ನಿರಂತರ ಜ್ಯೋತಿ ಅಡಿ ಹಳ್ಳಿಗಳಿಗೆ ಪೂರೈಸುವ ವಿದ್ಯುತ್‌ನಲ್ಲಿ ಕೂಡ ವ್ಯತ್ಯಯ ಆಗುವುದಿಲ್ಲ. ಆದರೆ, ಕೃಷಿ ಚಟುವಟಿಕೆಗಳಿಗೆ ಲೋಡ್‌ಶೆಡ್ಡಿಂಗ್‌ ಎಂದಿನಂತೆ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Trending videos

 
ಓದುಗರ ಅಭಿಪ್ರಾಯ
Back to Top