Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗಣೇಶ ಚತುರ್ಥಿ ಪ್ರಯುಕ್ತ ರಾಜ್ಯದಲ್ಲೂ ಮಾಂಸ ನಿಷೇಧ: ಬಿಬಿಎಂಪಿ ಆದೇಶ

ಬೆಂಗಳೂರು: ಹಬ್ಬ- ಹರಿದಿನಗಳಂದು ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ದೇಶಾದ್ಯಂತ ವಿವಾದ ಉಂಟಾಗಿರುವ ಹಂತದಲ್ಲೇ ರಾಜ್ಯದಲ್ಲೂ ಗಣೇಶ ಚತುರ್ಥಿ ಪ್ರಯುಕ್ತ ಸೆ.17ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಪಶುಪಾಲನೆ ವಿಭಾಗ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ನಿಷೇಧ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದುಬಂದಿದೆ. ಅದೇ ರೀತಿ ಈ ಬಾರಿಯೂ ಮಾಂಸ ನಿಷೇಧ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 9 (ಮಹಾವೀರ ಜಯಂತಿ, ಬುದ್ದ ಪೂರ್ಣಿಮಾ, ಗಾಂಧಿ ಜಯಂತಿ, ಕೃಷ್ಣಾ ಜನ್ಮಾಷ್ಟಮಿ, ರಾಮನವಮಿ, ಗಣೇಶ ಚತುರ್ಥಿ, ಶಿವರಾತ್ರಿ, ಸರ್ವೋದಯ ದಿನ, ಅಂಬೇಡ್ಕರ್‌ ಜಯಂತಿ)ರಾಷ್ಟ್ರೀಯ ಹಾಗೂ ಹಬ್ಬದ ದಿನ ಮಾಂಸ ನಿಷೇಧ ಜಾರಿಯಲ್ಲಿದೆ.

ಮಾಂಸ ನಿಷೇಧ ವಾಪಸ್‌ ಬಗ್ಗೆ ಚಿಂತನೆ

ಹಿಂದಿನ ಸಂಪ್ರದಾಯದಂತೆ ಗಣೇಶ ಚತುರ್ಥಿಯಂದು ಮಾಂಸ ಮಾರಾಟ ನಿಷೇಧ ವಿಧಿಸಲಾಗಿದೆ. ಆದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿಲ್ಲ. ಮುಂದಿನ ಹಬ್ಬಗಳಿಗೆ ಈ ನಿಷೇಧ ವಾಪಸ್‌ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯಲಿದೆ.

ದಿನೇಶ್‌ ಗುಂಡೂರಾವ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
 

 

Trending videos

 
ಓದುಗರ ಅಭಿಪ್ರಾಯ
Back to Top