Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊಸ ಕಂಪನಿ ತೆರೆಯೋಕೆ ಇಲ್ಲಿವೆ 10 ಐಡಿಯಾಗಳು!

ಮಂದಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳಿಂದ ವಿಭಿನ್ನ ರೀತಿಯ ಸಮಸ್ಯೆಗಳಿಗೆ ಪರಿಹಾರ. ಇಂದಿನ ದಿನಗಳಲ್ಲಿ ಮನೆಯಲ್ಲೇ ಕುಳಿತು ಬೇಕಾದ ವಸ್ತುಗಳನ್ನು ಇಂಟರ್‌ನೆಟ್‌ ಮೂಲಕ ಆರ್ಡರ್‌ ಮಾಡುವ ಸೌಲಭ್ಯಗಳನ್ನು ಸ್ಟಾರ್ಟ್‌ಅಪ್‌ ಕಂಪನಿಗಳು ಒದಗಿಸಿಕೊಟ್ಟಿವೆ. ಹಸಿವಾದರೆ ಫ‌ುಡ್‌ಪಂಡಾ, ಮನೆ ಹುಡುಕಬೇಕಾದರೆ ಹೌಸಿಂಗ್‌ ಡಾಟ್‌ ಕಾಮ್‌, ಪಾರ್ಟಿಗೆ ಹೋಗಲು ಬಟ್ಟೆ ಬೇಕಾದರೆ ಮಿಂಟ್ರಾ ಹೀಗೆ ಹಲವಾರು ವೆಬ್‌ಸೈಟ್‌ಗಳ ಮೊರೆಹೋಗುತ್ತೇವೆ. ಇಷ್ಟೇ ಅಲ್ಲ ಈ ರೀತಿಯ ನೂತನ ಐಡಿಯಾಗಳನ್ನು ಇಟ್ಟುಕೊಂಡು ಹೊಸ ಹೊಸ ಸ್ಟಾರ್ಟ್‌ಅಪ್‌ ಕಂಪನಿಗಳ ಉಗಮವಾಗುತ್ತಿವೆ. ಮುಂದಿನ ದಿನಗಳಲ್ಲಿ ತಲೆ ಎತ್ತಬಹುದಾದ ಸ್ಟಾರ್ಟ್‌ಅಪ್‌ ಕಂಪನಿಗಳು ಹೇಗಿರಲಿವೆ? ಅವುಗಳಿಂದ ಯಾವೆಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ? ಈ ಕುರಿತಾದ 15 ಐಡಿಯಾಗಳು ಇಲ್ಲಿವೆ.

1. ಕಸದ ತೊಟ್ಟಿಯಿಂದ ಸಿಗುತ್ತೆ ಉಚಿತ ವೈಫೈ

ಸಾಮಾನ್ಯವಾಗಿ ನಾವೆಲ್ಲಾ ಮನೆಯಲ್ಲಿನ ಕಸವನ್ನು ಸಂಗ್ರಹಿಸಿ ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ, ಇದರಿಂದಲೂ ಇಚಿತ ವೈಫೈ ಸೌಲಭ್ಯಗಳನ್ನು ಪಡೆಯಬುದು. ಪಾಟಕ್‌ ಅಗರ್ವಾಲ್‌ ಮತ್ತು ರಾಜ್‌ ದೇಸಾಯ್‌ ಎನ್ನುವವರು ಯುರೋಪ್‌ನಲ್ಲೇಲ್ಲಾ ಸುತ್ತಾಡಿ ಗಾಬೇìಜ್‌ ಬಿನ್‌ ಎಂಬ ಎಂಬ ಐಡಿಯಾವನ್ನು ಹುಟ್ಟುಹಾಕಿದ್ದಾರೆ. ಕಸದ ತೊಟ್ಟಿಗಳು ವೈಫೈ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತವೆ. ಥಿಂಕ್‌ ಸ್ಕ್ರೀನ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿಯನ್ನು ಹುಟ್ಟುಹಾಕಿದ್ದು, ನೂತನ ವಿಧಾನದ ಮೂಲಕ ವೈಫೈ ಸೌಲಭ್ಯ ಒದಗಿಸುತ್ತಿದ್ದಾರೆ.

2. ನಾಯಿಗಳಿಗೆ ತರಬೇತಿ ಕೊಟ್ಟು ಪಿಕ್‌ನಿಕ್‌ ಮಾಡಿಸ್ತಾರೆ

ಮನೆಯಲ್ಲಿ ಮುದ್ದಿನಿಂದ ನಾಯಿಗಳಿಗೆ ತರಬೇತಿ ನೀಡಿ ಅವುಗಳನ್ನು ಪಿಕ್‌ನಿಕ್‌ಗೆ ಕರೆದೊಯ್ಯುವುದಕ್ಕಾಗಿಯೇ ಮುಂಬೈ ಮೂಲದ ಪ್ರಣೀತಾ ಬಲಾರ್‌ ಎನ್ನುವವರು ಬಾರ್ಕನ್‌ಬಾಂಡ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿಯನ್ನು ತರೆದಿದ್ದಾರೆ. ಇಲ್ಲಿ ನಾಯಿಗಳಿಗೆ ತರಬೇತಿ ನೀಡುವುದರ ಜತೆ, ಶಿಬಿರಗಳನ್ನು ಆಯೋಜಿಸಲಾಗುತ್ತದೆ.

3. ಮದುವೆ ಸಮಾರಂಭಕ್ಕೆ ಉಡುಪು ಬಾಡಿಗೆ ಕೊಡ್ತಾರೆ

ಮದುವೆಯಂತಹ ಸಮಾರಂಭಗಳಿಗೆ ಆಕರ್ಷಕ ಬಟ್ಟೆಗಳನ್ನು ತೊಟ್ಟುಕೊಳ್ಳಬೇಕು. ಆದರೆ, ಅದನ್ನು ಖರೀದಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇಲ್ಲೊಂದು ಅಡ್ಡ ಮಾರ್ಗ ಇದೆ. ಬೆಂಗಳೂರು ಮೂಲದ "ದ ಡ್ರೆಸ್‌ ಬ್ಯಾಂಕ್‌' ಎಂಬ ಕಂಪನಿಯಿಂದ ಸಮಾರಂಭಗಳಿಗೆ ಉಡುಪುಗಳನ್ನು ಬಾಡಿಗೆ ಪಡೆಯಬಹುದು. ಸಮಾರಂಭ ಮುಗಿದ ಬಳಿಕ ಉಡುಪುಗಳನ್ನು ಹಿಂತಿರುಗಿಸಿದರೆ ಆಯಿತು. ಉಡುಪಿನ ಮಾರಾಟ ಬೆಲೆಯ ಶೇ. 10ರಷ್ಟನ್ನು ಪಾವತಿಸಿದರೆ ಒಂದೆರಡು ದಿನದ ಮಟ್ಟಿಗೆ ದುಬಾರಿ ಉಡುಪು ನಿಮ್ಮದಾಗಲಿದೆ.

4. ಬೀರುವಿನಲ್ಲಿ ಇಟ್ಟಿದ್ದ ಬಟ್ಟೆಗಳ ಖರೀದಿ ಮಾಡ್ತಾರೆ

ಮನೆಯ ಬೀರುವಿನ ತುಂಬೆಲ್ಲಾ ಹಳೆಯ ಬಟ್ಟೆಗಳೇ ತುಂಬಿದೆಯಲ್ಲಾ ಅದನ್ನೆಲ್ಲಾ ಏನು ಮಾಡುವುದು ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಅವುಗಳನ್ನು ಮನೆಯಲ್ಲೇ ಕುಳಿತು ಹಳೆ ಉಡುಪುಗಳನ್ನು ಮಾರಬಹುದು. "ಇಲಾನಿಕ್‌' ಎಂಬ ಕಂಪನಿ ಜನರಿಂದ ಬಟ್ಟೆಗಳನ್ನು ಖರೀದಿಸಿ ಅವುಗಳನ್ನು ತೊಳೆದು ಶುಭ್ರಗೊಳಿಸಿ, ಮತ್ತೆ ಜನರಿಗೇ ಮಾರಾಟ ಮಾಡುತ್ತಿದೆ.

5. ಮನೆಯವರಿಗೆ ಸಪ್ರೈಸ್‌ ನೀಡಬೇಕೆ? ಇಲ್ಲಿದೆ ಐಡಿಯಾ

ಕೆಲಸದ ಒತ್ತಡದಲ್ಲಿ ಕುಟುಂಬದ ಸದಸ್ಯರಿಗೆ ಸಪ್ರೈಸ್‌ (ಅಚ್ಚರಿ)ಗಳನ್ನು ನೀಡಲು ಸಮಯವೇ ಸಿಗುವುದಿಲ್ಲ. ಒಂದು ವೇಳೆ ಅಚ್ಚರಿಗಳನ್ನು ನೀಡಬೇಕು ಎಂದು ಅಂದುಕೊಂಡರೂ ಒಳ್ಳೆಯ ಐಡಿಯಾಗಳೇ ಹೊಳೆಯುವುದಿಲ್ಲ. ಇನ್ನು ಇದರ ಚಿಂತೆ ಬೇಡ ಹೈದರಾಬಾದ್‌ ಮೂಲದ "ಓಹ್ಯಾಪ್‌' ಎಂಬ ಸ್ಟಾರ್ಟ್‌ಅಪ್‌ ಕಂಪನಿ ನಿಮ್ಮ ಸಂಬಂಧಿಕರ ಅಚ್ಚರಿ ಪಾರ್ಟಿಗಳನ್ನು ಆಯೋಜಿಸುವ ಮತ್ತು ಗಿಫ್ಟ್ಗಳನ್ನು ನೀಡುವುದು ಹೀಗೆ ಹಲವಾರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ.

6. ಆನ್‌ಲೈನ್‌ನಲ್ಲೇ ಪ್ರಸಾದ ಆರ್ಡರ್‌ ಮಾಡಿ

ಹಬ್ಬ ಮತ್ತು ವಿಶೇಷ ದಿನಗಳಲ್ಲಿ ದೇವಾಲಗಳಿಗೆ ತೆರಳಿ ಪ್ರಸಾದ ಸ್ವೀಕರಿಸಲು ಆಗಲಿಲ್ಲವೇ? ಹಾಗಿದ್ದರೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೆ ದೇವರ ಪ್ರಸಾದ ಮನೆ ಬಾಗಿಲಿಗೇ ಲಭ್ಯವಾಗಲಿದೆ. ಆನ್‌ಲೈನ್‌ ಪ್ರಸಾದ್‌ ಎಂಬ ಕಂಪನಿ ದೇಶದ 100ಕ್ಕೂ ಹೆಚ್ಚು ದೇವಾಲಯಗಳಿಂದ ಪ್ರಸಾದಗಳನ್ನು ಸಂಗ್ರಹಿಸಿ ಮನೆ ಬಾಗಿಲಿಗೇ ತಂದು ಮುಟ್ಟಿಸಲಿದೆ.

7 ತರಕಾರಿ ವೇಸ್ಟ್‌ ಮಾಡಬೇಡಿ ಅದನ್ನೂ ಖರಿದಿಸ್ತಾರೆ

ಮನೆಯಲ್ಲಿ ಅಥವಾ ಹೋಟೆಲ್‌ಗ‌ಳಲ್ಲಿ ತರಕಾರಿಗಳು ಕೆಲವೊಮ್ಮೆ ವೇಸ್ಟ್‌ ಆಗಿಬಿಸುತ್ತವೆ. ಹಾಗೆಂದು ಅವುಗಳನ್ನು ಬೀಸಾಡ ಬೇಡಿ. "ಫೀಡ್‌ ಇಂಡಿಯಾ' ಎಂಬ ಕಂಪನಿ ಜನರಿಂದ, ಹೋಟೆಲ್‌, ರೆಸ್ಟಾರೆಂಟ್‌ಗಳಿಂದ ಹೆಚ್ಚಾದ ತರಕಾರಿಗಳನ್ನು ಖರೀದಿಸಿ ಅಗತ್ಯ ಉಳ್ಳವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ.

8. ತ್ಯಾಜ್ಯದಿಂದ ಬಳಕೆಯೋಗ್ಯ ಉತ್ಪನ್ನಗಳ ತಯಾರಿ

ಗೋಣಿಚೀಲ, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳನ್ನು ಮರು ಬಳಕೆ ಮಾಡಿಕೊಂಡು ಬಳಕೆ ಯೋಗ್ಯ ಉತ್ಪನ್ನಗಳನ್ನು ತಯಾರಿಸಬಹುದು. ಈ ಐಡಿಯಾವನ್ನೇ ಇಟ್ಟುಕೊಂಡು ಹೃತಿಶ್‌ ಲೋಹಿಯಾ ಪ್ರೀತಿ ಇಂಟರ್‌ ನ್ಯಾಷನಲ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿಯನ್ನು ಆರಂಭಿಸಿದ್ದು, ಕೈಚೀಲ, ಟೆಂಟ್‌, ರಫ್ ಪ್ಯಾಂಟ್‌ ಮತ್ತಿತರ ಉಪಯುಕ್ತ ಸಾಮಗ್ರಿಗಳನ್ನು ನಿರ್ಮಿಸಿಕೊಡುತ್ತಿದೆ.

9. ಮೆದುಳನ್ನು ಚುರುಕು ಮಾಡಲು ಇದೆ ವ್ಯಾಯಾಮ

ಮೈಯಲ್ಲಿನ ಬೊಜ್ಜನ್ನು ಕರಗಿಸಲು ಜಿಮ್‌ಗೆ ಹೋಗುತ್ತೇವೆ. ಆದರೆ, ನಿಮ್ಮ ಮೆದುಳನ್ನು ಚುರುಕು ಗೊಳಿಸುವ ಉಪಾಯ ಬಹುತೇಕರಿಗೆ ಗೊತ್ತಿಲ್ಲ. ಆದರೆ, "ಬೆಟರ್‌ ಬ್ರೇನ್ಸ್‌' ಎಂಬ ಕಂಪನಿ ನಂಬರ್‌ಗೆàಮ್‌, ದೈಹಿಕ ವ್ಯಾಯಾಮ ಹೀಗೆ ತರಹೇವಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಮ್ಮ ಮೆದುಳನ್ನು ಚುರುಕಾಗಿಸು ಸಹಾಯ ಮಾಡುತ್ತದೆ.

10 ಅಂತ್ಯಕ್ರಿಯೆಯ ಎಲ್ಲಾ ವ್ಯವಸ್ಥೆಯನ್ನೂ ನೋಡಿಕೊಳ್ತಾರೆ

ಪ್ರೀತಿಸಿದವರನ್ನು ಕಳೆದುಕೊಂಡಾಗ ಆಗುವ ದುಃಖ ಅಷ್ಟಿಷ್ಟಲ್ಲ. ಅದೇ ರೀತಿ ಅವರ, ಅಂತ್ಯ ಸಂಸ್ಕಾರದ ಪ್ರಕ್ರಿಯೆ ನೆರವೇರಿಸುವುದು ಹೇಗೆ ಎಂಬ ಸಂದಿಗ್ಧ ಅನೇಕರನ್ನು ಕಾಡುತ್ತದೆ. ಅದಕ್ಕಂತಲೇ "ಮೋಕ್‌Ò ಶೀಲ' ಎಂಬ ಸ್ಟಾರ್ಟ್‌ಅಪ್‌ ಕಂಪನಿಯನ್ನು ತರೆಯಲಾಗಿದೆ. ಇದನ್ನು ಸಂಪರ್ಕಿಸಿ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ಪಡೆದುಕೊಳ್ಳಬಹುದು.

ಏನಿದು ಸ್ಟಾರ್ಟ್‌ಅಪ್‌ ಕಂಪನಿ?

ಇದುವರೆಗೆ ಯಾರೂ ಮಾಡಿದರ ಹೊಸ ಐಡಿಯಾವನ್ನು ಇಟ್ಟುಕೊಂಡು ಆರಂಭಿಸಲಾದ ಕಂಪನಿಗಳಿವು. ಕಡಿಮೆ ಬಂಡವಾಳದಲ್ಲಿ ಇವುಗಳನ್ನು ಸ್ಥಾಪಿಸಲಾಗಿರುತ್ತದೆ. ನಾವಿನ್ಯತೆಯೇ ಇವುಗಳ ಮೂಲ. ಕಾರ್ಪರೇಟ್‌ ಜಗತ್ತಿಗೆ ಈಗಷ್ಟೇ ತೆರೆದುಕೊಳ್ಳುತ್ತಿರುವ ಕಂಪನಿಗಳಾಗಿವೆ.

 

 

Trending videos

 
ಓದುಗರ ಅಭಿಪ್ರಾಯ
Back to Top