Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಜ್‌ ದುರಂತಗಳು ಇದೇ ಮೊದಲಲ್ಲ!

ಮುಸಲ್ಮಾನ ಧರ್ಮೀಯರ ಪಾಲಿಗೆ ಮೆಕ್ಕಾ ಅತ್ಯಂತ ಪವಿತ್ರ ಸ್ಥಳ. ಜೀವನದಲ್ಲಿ ಒಂದು ಬಾರಿಯಾದರೂ ಹಜ್‌ ಯಾತ್ರೆಯ ಭಾಗವಾಗಿ ಮೆಕ್ಕಾ ಸಂದರ್ಶಿಸಿ ಕೃತಾರ್ಥರಾಗಬೇಕೆನ್ನುವ ಮಹದಾಸೆ ಹೊಂದಿರುತ್ತಾರೆ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಜ್‌ ಯಾತ್ರಿಗಳಿಗೆ ಮೆಕ್ಕಾ ದರ್ಶನಕ್ಕೆ ಸೌದಿ ಅರೇಬಿಯಾ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾದರೂ, ಇಲ್ಲಿ ಅವಘಡಗಳು ತಪ್ಪಿಲ್ಲ. ಈ ಬಾರಿ ಕ್ರೇನ್‌ ಕುಸಿದು ಸಾಕಷ್ಟು ಜೀವ ಹಾನಿಯಾಗಿದೆ. ಇತಿಹಾಸ ಪುಟಗಳಲ್ಲಿ ಇಂತಹ ಅನೇಕ ಘಟನೆಗಳಿವೆ. 90ರ ದಶಕದಿಂದೀಚೆಗೆ ಸಂಭವಿಸಿದ ಅವಘಡಗಳು, ಮೊನ್ನೆಯ ಅವಘಡಗಳ ಚಿತ್ರ ಮಾಹಿತಿ ವಿವರಗಳು ಇಲ್ಲಿವೆ.

ಪವಿತ್ರ ಹಜ್‌ ಯಾತ್ರೆ

ಇಸ್ಲಾಂ ಪ್ರಕಾರ, ಹಜ್‌(ಹಜ್‌ ಯಾತ್ರೆ), ಜಕಾತ್‌(ದಾನ), ನಮಾಜ್‌(ಪ್ರಾರ್ಥನೆ), ಕಲಿಮಾ(ಐದು ಶ್ಲೋಕಗಳು), ರೋಜಾ(ಉಪವಾಸ) ಇಸ್ಲಾಂ ಧರ್ಮದ ಐದು ಪ್ರಮುಖ ಆಧಾರ ಸ್ತಂಭಗಳು. ಮುಸಲ್ಮಾನ ಧರ್ಮೀಯರಿಗೆ ಹಜ್‌ ಯಾತ್ರೆ ಮಾಡುವುದು ಕರ್ತವ್ಯ. ಜೀವಮಾನದಲ್ಲಿ ಒಂದು ಬಾರಿಯಾದರೂ ಸಂದರ್ಶಿಸಬೇಕೆಂದಿದೆ. ಆದ್ದರಿಂದ ಇಲ್ಲಿಗೆ ಅರಬ್‌ ರಾಷ್ಟ್ರಗಳೂ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಹಜ್‌ ಯಾತ್ರೆ ಇಸ್ಲಾಂ ಕ್ಯಾಲೆಂಡರ್‌ ಪ್ರಕಾರ ಆರಂಭಗೊಳ್ಳುತ್ತದೆ. ಈ ವರ್ಷ ಸೆ.10ರಿಂದ ಹಜ್‌ ಯಾತ್ರೆ ಆರಂಭಗೊಂಡಿದ್ದು, ಭಕ್ತರ ದಟ್ಟಣೆ ವಿಪರೀತವಾಗುತ್ತಿದೆ. ಹಜ್‌ ಯಾತ್ರೆಯ ಭಾಗವಾಗಿ ಮೆಕ್ಕಾ ಭೇಟಿ, ಪವಿತ್ರ ಕಾಬಾ ಶಿಲೆಯ ಸಂದರ್ಶನವನ್ನು ಇಸ್ಲಾಂ ಧರ್ಮೀಯರು ಮಾಡುತ್ತಾರೆ.

ವಿಶ್ವದಲ್ಲೇ ಅತಿ ಹೆಚ್ಚು ಜನ ಭೇಟಿ

ವಿಶ್ವದಲ್ಲೇ ಅತಿ ಹೆಚ್ಚು ಜನ ಭೇಟಿ ನೀಡುವ ಶ್ರದ್ಧಾ ಕೇಂದ್ರವಾಗಿ ಮೆಕ್ಕಾ ಪ್ರಸಿದ್ಧಿ ಪಡೆದಿದೆ. ಹಜ್‌ ಯಾತ್ರೆಯ ಸಂದರ್ಭ ಇಲ್ಲಿಗೆ ಲಕ್ಷಗಟ್ಟಲೆ ಮಂದಿ ಭೇಟಿ ನೀಡುತ್ತಾರೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಂದಿ ಭೇಟಿ ನೀಡಿದ ಹಿರಿಮೆಯೂ ಮೆಕ್ಕಾದ್ದು. ಮೆಕ್ಕಾ ಭೇಟಿ ಹಜ್‌ ಯಾತ್ರೆಯಲ್ಲಿ 2ನೇ ಹಂತದ್ದು. ಹಜ್‌ ಯಾತ್ರೆಯ ಸಂದರ್ಭ ಮೆಕ್ಕಾ ನಗರಿ ಜನರಿಂದ ಗಿಜಿಗುಡುತ್ತಿರುತ್ತದೆ. 1950ರ ವೇಳೆಗೆ ಹಜ್‌ ಯಾತ್ರೆ ಮಾಡಿದ ಭಕ್ತರ ಸಂಖ್ಯೆ ಲಕ್ಷದೊಳಗಿದ್ದರೆ, 2014ರಲ್ಲಿ ಈ ಸಂಖ್ಯೆ ಒಟ್ಟು 20 ಲಕ್ಷ ದಾಟಿದೆ. ಈ ಸಂದರ್ಭ ಕೆಲವೊಂದು ಅವಘಡಗಳು ಸಂಭವಿಸಿವೆ. ಇದರಿಂದ ಸಾವಿರಾರು ಪ್ರಾಣ ಹಾನಿಯಾದ ಉದಾಹರಣೆಗಳೂ ಇವೆ. ಜನದಟ್ಟಣೆ ನಿಭಾಯಿಸಲು ಸೌದಿ ಅರೇಬಿಯಾ ಸರ್ಕಾರ ವಿಶ್ವದಲ್ಲೇ ಅಪರೂಪ ಮತ್ತು ಅತ್ಯಂತ ಅಚ್ಚುಕಟ್ಟಿನ ವ್ಯವಸ್ಥೆಗಳನ್ನು ಮಾಡುತ್ತಿದ್ದರೂ, ಇಲ್ಲಿ ದುರಂತಗಳಿಗೇನೂ ಕಡಿಮೆಯಿಲ್ಲ.

ಹಜ್‌ ದುರಂತಗಳು (1990ರ ಈಚೆಗೆ)

1990 ಜು.2 : ಮೆಕ್ಕಾದಿಂದ ಮಿನಾ- ಅರಾಫ‌ತ್‌ ಬೆಟ್ಟದತ್ತ ತೆರಳು ಪಾದಚಾರಿ ಮಾರ್ಗ ಅಲ್‌ ಮೈಯಾಸಿಮ್‌ನಲ್ಲಿ ಕಾಲು¤ಳಿತ. ಇದರಿಂದ 1426 ಮಂದಿ ಸಾವು. ಇದರಲ್ಲಿ ಮಲೇಷ್ಯಾ, ಇಂಡೋನೇಷ್ಯಾ, ಪಾಕಿಸ್ತಾನೀಯ ಹಜ್‌ ಯಾತ್ರಿಗಳೇ ಹೆಚ್ಚು.

1994 ಮೇ.23: ಸೈತಾನನಿಗೆ ಕಲ್ಲು ಹೊಡೆಯುವ ಸಂಪ್ರದಾಯ ವೇಳೆ ಕಾಲು¤ಳಿತ 270 ಮಂದಿ ಸಾವು.

1998 ಏ.9: ಜಮಾರತ್‌ ಪಾದಚಾರಿ ಮಾರ್ಗದಲ್ಲಿ ಕಾಲು¤ಳಿತ. ಕನಿಷ್ಠ 118 ಮಂದಿ ಹಜ್‌ ಯಾತ್ರಿಗಳ ಸಾವು. 180 ಮಂದಿಗೆ ತೀವ್ರ ಗಾಯ

2001 ಮಾ.5: ಸೈತಾನನಿಗೆ ಕಲ್ಲು ಹೊಡೆವ ಕಾರ್ಯಕ್ರಮ ವೇಳೆ ಕಾಲು¤ಳಿತ. 35 ಮಂದಿ ಸಾವು

2003 ಫೆ.11: ಸೈತಾನನಿಗೆ ಕಲ್ಲು ಹೊಡೆವ ಕಾರ್ಯಕ್ರಮದ ವೇಳೆ ಕಾಲು¤ಳಿತ. 14 ಮಂದಿ ಸಾವು.

2004 ಫೆ.1: ಸೈತಾನನಿಗೆ ಕಲ್ಲು ಹೊಡೆವ ಕಾರ್ಯಕ್ರಮದ ವೇಳೆ ಕಾಲು¤ಳಿತ. 251 ಮಂದಿ ಸಾವು. 200ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ.

2006 ಜ.12: ಜಮಾರತ್‌ ಪಾದಚಾರಿ ಮಾರ್ಗದಲ್ಲಿ ಕಾಲು¤ಳಿತ. ಹಜ್‌ ಯಾತ್ರೆಯ ಕೊನೆಯ ದಿನದಂದು ದುರ್ಘ‌ಟನೆ. ಕನಿಷ್ಠ 346 ಮಂದಿ ಸಾವು. 300ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ.

ಇತರ ಘಟನೆಗಳು
ಇಸವಿ ಕಾರಣ ಸಾವು
1975 ಸಿಲಿಂಡರ್‌ ಸ್ಫೋಟ 200
1987 ಪ್ರತಿಭಟನೆ 400
1997 ಬೆಂಕಿ 346

 

 

Trending videos

 
ಓದುಗರ ಅಭಿಪ್ರಾಯ
Back to Top