Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಹಿಳೆಯರಿಗಾಗಿ ಮೊಬೈಲ್‌ ಅಪ್ಲಿಕೇಶನ್‌

ಮುಂಬಯಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ, ಲೋಕಸಭೆಯಲ್ಲಿ ವಿಪಕ್ಷ ಉಪನಾಯಕರಾಗಿರುವ ಗೋಪಿನಾಥ ಮುಂಢೆ ಅವರ ಪುತ್ರಿ ಪಂಕಜಾ ಮುಂಢೆ-ಪಾಳ್ವೆ ಅವರು ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಆಯಂಡ್ರಾಯ್ಡ ಅಪ್ಲಿಕೇಶನ್‌ ''''''ರಕ್ಷಾ''ವನ್ನು ಉದ್ಘಾಟಿಸಿದರು.

ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿರವ ಹಿನ್ನೆಲೆಯಲ್ಲಿ ಅಪ್ಲಿಕೇಶನ್‌ ರಕ್ಷಾವನ್ನು ಆರಂಭಿಸಲಾಗಿದೆ. ಮಹಿಳೆಯರು ಮತ್ತು ಹಿರಿಯ ಪೌರರಿಗೆ ಇದು ನಿಕಟ ಸಂಪರ್ಕಗಳ ಐದು ಸಂಖ್ಯೆಗಳನ್ನು ಸೇವ್‌ ಮಾಡಿಕೊಳ್ಳಲು ನೆರವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.

ಬಳಿಕ ಪಂಕಜಾ ಅವರು ಕುರ್ಲಾದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಸರಕಾರದ ವಿರುದ್ಧ ರ್ಯಾಲಿ ನಡೆಸಿದರು. ಈ ರ್ಯಾಲಿ ಯುವ ಧ್ವನಿಗೆ ಶಕ್ತಿ ನೀಡುವ ಮತ್ತು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೇ ಆರಂಭಿಸಿರುವ ಯುವತಿ ರಾಷ್ಟ್ರವಾದಿ ಕಾಂಗ್ರೆಸ್‌ಗೆ ಪ್ರತಿ ಹೋರಾಟ ನೀಡುವ ಉದ್ದೇಶವನ್ನು ಹೊಂದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸರಣಿ ರ್ಯಾಲಿಗಳು ನಡೆಯುತ್ತಿವೆ.

ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ದುರ್ಬಲ ನಾಯಕತ್ವವಿರುವುದರಿಂದ ಯುವ ಜನತೆ ರಾಜಕೀಯದ ಬಗ್ಗೆ ಭ್ರಮ ನಿರಸನ ಹೊಂದಿರುವರು. ಮೋರ್ಚಾ ಏಳು ಜಿಲ್ಲೆಗಳಲ್ಲಿ ನಡೆಸಿದ ಏಳು ರ್ಯಾಲಿಗಳ ಸಂದರ್ಭದಲ್ಲಿ 5 ಲಕ್ಷಕ್ಕೂ ಅಧಿಕ ಯುವ ಜನತೆ ಪಕ್ಷದೊಂದಿಗೆ ಸಂಪರ್ಕ ಪಡೆದಿರುವರೆಂದು ಪಂಕಜಾ ಪ್ರತಿಪಾದಿಸಿದರು.

ಬಿಜೆಪಿಯನ್ನು ಮತ್ತು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಅವರು ಯುವ ಜನತೆಗೆ ಕರೆ ನೀಡಿದರು. 1995ರಿಂದ 1999ರ ಅವಧಿಯಲ್ಲಿ ನಮ್ಮ ಸರಕಾರ ಮಾಡಿದ ಕೆಲಸವನ್ನು ಜನತೆ ಈಗಲೂ ಸ್ಮರಿಸಿಕೊಳ್ಳುತ್ತಿರುವರೆಂದು ಅವರು ಹೇಳಿದರು.

 

Trending videos

 
ಓದುಗರ ಅಭಿಪ್ರಾಯ
Back to Top