Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೀವು ಮನೆ ಕಟ್ಟುವ ಸೈಟು ಹೇಗಿರಬೇಕು ಗೊತ್ತಾ?

ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ ಎಂದರೆ ಒಂದು ಫ್ಲಾಟ್‌ ಸಿಕ್ಕಿದರೆ ಸಾಕು ಎಂಬ ವಿಚಾರದಲ್ಲಿ ಹೆಚ್ಚಿನ ಕಾತುರ ಇರುತ್ತದೆ. ಕಾಲ ಸಕಲವನ್ನೂ ಸಂಪನ್ನತೆಯ ದೃಷ್ಟಿಯಿಂದ ಮುಕ್ಕಿ ತಿಂದಿದೆ. ಕಾಲದ ದುಷ್ಟತನವೆಲ್ಲಾ ಇದು. ಹಾಗೆ ನೋಡಿದರೆ ಮನುಷ್ಯನ ಸ್ವಾರ್ಥ ಚಲ್ತಾ ಹೈ ಧೋರಣೆಗಳು ಆಳುವವರ ಉಡಾಫೆ, ಭೂಮಿಗೆ ದಕ್ಕಿದ ಹೆಚ್ಚಿನ ಬೆಲೆ, ಲಂಚ ರುಷುವತ್ತು ಮಸಲ್‌ ಪವರ್‌ ಒಂದು ಸುಂದರ ಮನೆಯನ್ನು ಪಡೆದುಕೊಳ್ಳುವ ಕ್ರಿಯೆಯನ್ನು ಗಗನಕುಸುಮವಾಗಿಸಿದೆ. ಫ್ಲಾಟಿನ ಏರಿಳಿತಗಳು ಆಕಾಶ, ಅಳತೆ, ದಿಕ್ಕು, ಅನುಪಾತ ಇರುವ ಪ್ರದೇಶ, ಫ್ಲಾಟಿಗೆ ಎದುರು ರಸ್ತೆಯ ದಿಕ್ಸೂಚಿ ಸುತ್ತಮುತ್ತಲ ಪರಿಸರದ ವಾಸ್ತವಗಳು ಇತ್ಯಾದಿಗಳೆಲ್ಲಾ ಸಾಮಾಜಿಕ ಪತನಕ್ಕೆ ಕಾರಣವಾಗುವಂತಿರಬಾರದು. ಮನೆ ಕಟ್ಟಿ ವಾಸಿಸ ತೊಡಗಿದವರ ಉತ್ಸಾಹ, ಕ್ರಿಯಾಶೀಲತೆ, ಆರೋಗ್ಯ ಸಂಪತ್ತು ಕುಸಿಯಲು ಕಾರಣವಾಗಬಾರದು.

ಯಾವಾಗಲೂ ಮನೆಯ ವಾಯುವ್ಯ ಹಾಗೂ ಆಗ್ನೇಯ ಬಿಂದುವಿಗೆ ಒಂದು ಸರಳ ರೇಖೆ ಹಾಕಿದರೆ ಉತ್ತರ ಹಾಗೂ ಪೂರ್ವ ಭಾಗದಿಂದ ಆಗ್ನೇಯ ಬಿಂದುವ ವರೆಗಿನ ತ್ರಿಕೋನ ಭಾಗ ಸೂರ್ಯನ ಅಧಿಪತ್ಯಕ್ಕೆ ಒಳಗೊಳ್ಳುತ್ತದೆ. ಮಿಕ್ಕುಳಿದ ಭಾಗ ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಸೂರ್ಯನ ಭಾಗ ಸ್ವಪ್ರಕಾಶಿಸುವುದರಿಂದ ನಿಮ್ಮ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲ್ಲುವ ಶಕ್ತಿಯನ್ನು ಮನೆಯ ಈ ಭೂಭಾಗನಿಮಗೆ ಕರುಣಿಸಿ ಕೊಡುತ್ತದೆ. ಉಳಿದರ್ಧ ಭಾಗ ನಿಮ್ಮ ವಿಚಾರದಲ್ಲಿ ಒದಗಬೇಕಾದ ದೈಹಿಕ ಸಹಾಯ ಅದೃಷ್ಟಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯಲ್ಲಿ ವರಿಸಿದ ಚಂದ್ರನ ಭಾಗ ಸ್ವಲ್ಪ ಎತ್ತರವನ್ನು ಕಾಪಾಡಿಕೊಳ್ಳುವುದು ಫ್ಲಾಟ್‌ನ ವಾಸ್ತು ದೃಷ್ಟಿಯಿಂದ ಉತ್ತಮವಾದುದಾಗಿದೆ. ಉತ್ತರ ಮತ್ತು ಪೂರ್ವದತ್ತ ಇಳಿಜಾರು ಇರಬೇಕಾದುದು ವಾಸ್ತು ಸಿದ್ಧಿಗೆ ಸೂಕ್ತ. ಇದರಿಂದಾಗಿ ನೀರಿನ ಹರಿತ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣದಿಂದ ಉತ್ತರಕ್ಕೂ ಅವಕಾಶ ಒದಗಿಬರುತ್ತದೆ. ಈ ರೀತಿಯ ವಿಚಾರಗಳು ಒಗ್ಗೂಡಿದರೆ ಈ ರೀತಿಯ ಫ್ಲಾಟ್‌ನಲ್ಲಿ ತಲೆ ಎತ್ತಿದ ಮನೆಯ ನಿವಾಸಿಗಳಿಗೆ ಸುಖಕ್ಕೆ ದಾರಿ ಲಭ್ಯ.

ಯಾವಾಗಲೂ ತುಸು ತಗ್ಗಿದ ಈಶಾನ್ಯ ಮೂಲೆ ತುಸು ಎತ್ತರಿಸಲ್ಪಟ್ಟ ನೈರುತ್ಯ ಮೂಲೆ ಎಲ್ಲಾ ವಿಚಾರಗಳಲ್ಲಿ ಯಶಸಿಗೆ ದಾರಿ ನಿರ್ಮಿಸುತ್ತದೆ. ದೀರ್ಘಾಯಸ್ಸು ಕೂಡಾ ಕೂಡಿ ಬರಲು ಇದು ಸಹಾಯಕ. ಇಡಿಯಾದ ಪಶ್ಚಿಮ ದಿಕ್ಕು ಎತ್ತರವೂ, ಇಡಿಯಾದ ಪೂರ್ವ ದಿಕ್ಕು ತಗ್ಗಿಕೊಂಡಿದ್ದು ಇದ್ದುದಾದರೆ ಇಂಥ ಫ್ಲಾಟಿನಲ್ಲಿ ಕಟ್ಟಿದ ಮನೆಯಲ್ಲಿ ವಾಸಿಸುವ ಜನರಿಗೆ ಸಾಮಾಜಿಕವಾದ ಮನ್ನಣೆ ಧನವೃದ್ಧಿಯು ಉತ್ತಮ ರೀತಿಯಲ್ಲಿ ಲಭ್ಯವಾಗುತ್ತದೆ. ಮನೆಯ ಮಧ್ಯದ ಸ್ಥಳವು ತುಸು ಏರಿಕೊಂಡಿದ್ದು ವಿಕಸನ ಪಡೆದಿದ್ದರೆ ಇದಕ್ಕೆ ಕೂರ್ಮ ವೃದ್ಧಿ ಎನ್ನುತ್ತಾರೆ. ಇದರಿಂದಾಗಿ ಮನೆಯ ಫ್ಲಾಟ್‌ ತುಂಬಾ ಸಂಪನ್ನತೆಯನ್ನು ಪಡೆದು ಶ್ರೇಷ್ಠತ್ವಕೆ ಒಯ್ಯುವ ಸಾಧನವಾಗುತ್ತದೆ. ಇಂಥ ರೀತಿಯ ಮನೆಯಲ್ಲಿನ ವಾಸವು ವಸತಿಗಾರರ ಸುಖ, ಕ್ಷೇಮ, ಲಾಭ, ಜಯ, ಸಿರಿಗೆ ಸಿದ್ಧಿಗೆ ಅಂಶವಾಗಿದೆ.ಒಟ್ಟಿನಲ್ಲಿ ಭೂಮಿಯ ವಿವಿಧ ಏರಿಳಿತಗಳಿಂದಾಗಿ ತನ್ನ ಸಂಪನ್ನತೆಯನ್ನು ಪಡೆದುಕೊಳ್ಳುತ್ತದೆ. ಕೆಲವು ಸಲ ಪ್ಲಾಟ್‌ ಯಾವುದೋ ದಿಕ್ಕಲ್ಲಿ ಮೂಲೆಯಲ್ಲಿ ತುಸು ಬೆಳೆದಿರುತ್ತದೆ. ಈ ರೀತಿಯ ಬೆಳವಣಿಗೆಗಳಲ್ಲಿ ಎಲ್ಲವೂ ಒಳಿತಿಗೆ ಪೂರಕವಾಗಿ ವರ್ತಿಸುವುದಿಲ್ಲ. ಫ್ಲಾಟ್‌ಗೆ ಈಶಾನ್ಯದ ಕಡೆ ತುಸು ಬೆಸೆದುಕೊಂಡಿದ್ದರೆ ಇಂಥ ಫ್ಲಾಟ್‌ ನಲ್ಲಿ ಕಟ್ಟಿದ ಮನೆಯಿಂದ ಉತ್ತಮ ಫ‌ಲ ಸಮೃದ್ಧಿಗಳು ಲಭ್ಯವಾಗುವುವು. ಹಾಗೆಯೇ ದಕ್ಷಿಣ, ಪಶ್ಚಿಮ, ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ದಿಕ್ಕುಗಳು ಸರಿಯಾಗಿ ಲಂಬಕೋನಗಳಲ್ಲಿದ್ದರೆ ಕೂಡಾ ಇಲ್ಲಿನ ಮನೆಗಳು ಸಕಾರಾತ್ಮಕ ಗುಣ ಪಡೆಯುತ್ತದೆ ಅನುಮಾನವಿಲ್ಲ. ಆದರೆ ಆಗ್ನೇಯ ದಿಕ್ಕಿಗೆ ಫ್ಲಾಟಿನ ಬೆಳವಣಿಗೆ ಮನೆ ಕಟ್ಟಲು ಉತ್ತಮವಾಗಿರದು.

ವಾಯುವ್ಯ ದಿಕ್ಕಿಗೂ ಫ್ಲಾಟ್‌ ಬೆಳೆಯಕೂಡದು. ಇಲ್ಲಿ ಮನೆಯ ಕಟ್ಟುವಿಕೆ ಉತ್ತಮ ಫ‌ಲಾವಳಿಗೆ ಪೂರಕವಾಗಿರುವುದಿಲ್ಲ. ಹಾಗೆಯೇ ನೈರುತ್ಯದ ಕಡೆಯ ದೀರ್ಘ‌ತೆ ಫ್ಲಾಟ್‌ ಗಳಿಗೆ ಉಚಿತವಾದುದಲ್ಲ. ದಯಮಾಡಿ ಗಮನಿಸಿ. ಈ ರೀತಿಯಲ್ಲಿ ವಾಸ್ತುವಿನ ಕುರಿತಾದ ಕೆಲವು ಅಂಶಗಳನ್ನು ಕಡೆಗಣಿಸದೆಯೇ ಪುರಸ್ಕರಿಸಿದರೆ ಒಳ್ಳೆಯದು. ಹೆಚ್ಚಾಗಿ ಜಾತಕದ ದಶಾಕಾಲ ಸರಿ ಇರದಿರುವಾಗ, ಶನಿಕಾಟದ ಕೇಮದ್ರುಮಯೋಗದ ನಕಾರಾತ್ಮಕ ದಿನಗಳಲ್ಲಿ ವಾಸ್ತುವಿನ ಶಿಸ್ತು ಬದ್ಧತೆ ಮನೆಯನ್ನು ಪುಷ್ಟೀಕರಿಸಿದ್ದರೆ ಗ್ರಹಗಳ ದೌರ್ಬಲ್ಯವನ್ನು ನಿಯಂತ್ರಿಸುವ ಶಕ್ತಿ ಒದಗಿಬರುತ್ತದೆ.

*ಅನಂತಶಾಸ್ತ್ರಿ

 

 

Trending videos

 
ಓದುಗರ ಅಭಿಪ್ರಾಯ
Back to Top