Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೀವು ಒಂಟಿಯಾಗಿದ್ದೀರಾ ? ಹಾಗಿದ್ರೆ ನಿಮ್ಮ ಆರೋಗ್ಯಕ್ಕೆ ಅಪಾಯ ಇದೆ!

ಲಂಡನ್‌ : ನೀವು ಅವಿವಾಹಿತರಾಗಿದ್ದು ಒಂಟಿಯಾಗಿದ್ದೀರಾ ? ನಿಮ್ಮ ಆರೋಗ್ಯ ಚೆನ್ನಾಗಿದೆಯಾ ? ಅರೆ ಈ ಪ್ರಶ್ನೆ ಯಾಕೆ ಎಂದು ನೀವು ಕೇಳಬಹುದು. 

ಹೌದು, ಲಂಡನ್‌ನಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಒಂಟಿಯಾಗಿದ್ದವರಿಗಿಂತ ವಿವಾಹಿತರಿಗೆ ಆರೋಗ್ಯ ಭಾಗ್ಯ ಹೆಚ್ಚಂತೆ. 

ಸಮೀಕ್ಷೆ ಪ್ರಕಾರ ವಿವಾಹಿತರಲ್ಲಿ ಮಾನಸಿಕ ಆರೋಗ್ಯ  ಉತ್ತಮವಾಗಿದ್ದು, ಒಬ್ಬಂಟಿಗರಾಗಿರುವವರಲ್ಲಿ, ವಿಚ್ಛೇಧಿತರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು ಎಂದು ತಿಳಿದು ಬಂದಿದೆ.

ವಿಚ್ಛೇಧನ ಪಡೆದು ಮರು ಮದುವೆಯಾದವರಲ್ಲಿಯೂ ಆರೋಗ್ಯ ಉತ್ತಮವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ವಿಚ್ಛೇಧನ ಪಡೆದು ಇನ್ನೊಂದು ಸಂಬಂಧ ಹೊಂದಿರುವವರ ಆರೋಗ್ಯ ಖುಷಿ ಖುಷಿಯಾಗಿರುವ ವಿವಾಹಿತರ ಆರೋಗ್ಯಕ್ಕೆ ಸಮ ಎಂದೂ ಹೇಳಲಾಗಿದೆ.

30 ರಿಂದ 35 ವರ್ಷದ ಒಳಗೆ ವಿಚ್ಛೇಧನ ಪಡೆದ ವರಿಗೆ ಶುಗರ್‌ ,ಬಿಪಿ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

 

Trending videos

 
ಓದುಗರ ಅಭಿಪ್ರಾಯ
Back to Top