Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಗುರು"ವಿನ ತಾಕೀತಿಗೆ ಸೆಕ್ಸ್ ಒಲ್ಲೆ ಎಂದ ಪತ್ನಿ;ಡೈವೋರ್ಸ್ ಕೊಟ್ಟ ಪತಿ

ಮುಂಬಯಿ: ಇಲ್ಲೊಬ್ಬ ಪತಿರಾಯನಿಗೆ ಇಲ್ಲಿನ ನ್ಯಾಯಾಲಯವು ವಿವಾಹ ವಿಚ್ಛೇದನವನ್ನು ಮಂಜೂರು ಮಾಡಿದೆ. ತನ್ನ ಪತ್ನಿಗೆ ಆಕೆಯ ನಂಬಿಗಸ್ಥ ಗುರು ಒಬ್ಬರು ಪತಿಯ ಜತೆಗೆ ಸೆಕ್ಸ್‌ ನಡೆಸಬೇಡವೆಂದು ಅಪ್ಪಣೆ ಕೊಟ್ಟ ಪರಿಣಾಮವಾಗಿ, ಪತ್ನಿಯು ನನಗೆ ಸೆಕ್ಸ್‌ ನಿರಾಕರಿಸಿದ್ದಾಳೆ ಎಂಬ ಪತಿಯ ದೂರನ್ನು ನ್ಯಾಯಾಲಯವು ಪುರಸ್ಕರಿಸಿದ್ದು ಆ ನೆಲೆಯಲ್ಲಿ ಆತನಿಗೆ ಪತ್ನಿಯಿಂದ ವಿಚ್ಛೇದನವನ್ನು ಕೊಡಿಸಿದೆ.

ಆದರೆ ಪತ್ನಿಯು ಕೋರ್ಟಿನಲ್ಲಿ ಬೇರೆಯೇ ವಾದ ಮಂಡಿಸಿದ್ದಳು. "30ರ ಹರೆಯದ ನನ್ನ ಪತಿ ನನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಾನೆ. ಅದು ನನಗೆ ಇಷ್ಟವಿರಲಿಲ್ಲ; ಆದುದರಿಂದ ನಾನು ಆತನಿಗೆ ನನ್ನ ಜತೆ ಸೆಕ್ಸ್‌ ನಡೆಸಲು ಬಿಡುತ್ತಿರಲಿಲ್ಲ' ಎಂದು ನ್ಯಾಯಾಲಯದಲ್ಲಿ ವಾದಿಸಿದ್ದಾಳೆ ! ಈ ಜೋಡಿಗೆ ಮದುವೆಯಾದದ್ದು 2011ರಲ್ಲಿ.

ಪತಿರಾಯನು ತನ್ನ ವಿವಾಹ ವಿಚ್ಛೇದನ ಅರ್ಜಿಯಲ್ಲಿ ಹೀಗೆ ನಿವೇದಿಸಿಕೊಂಡಿದ್ದ: ನಮ್ಮ ಮದುವೆಯ ಮೊದಲ ರಾತ್ರಿಯೇ ನನ್ನ ಪತ್ನಿ ಕಾಂಡಂ ಗಳ ಪ್ಯಾಕೆಟ್‌ ತಂದಿದ್ದಳು. ನನಗ್ಯಾಕೋ ಅದು ವಿಚಿತ್ರವೆನಿಸಿತ್ತು. ಆದರೆ ಮದುವೆಯಾಗಿ ನಾಲ್ಕು ತಿಂಗಳಾದರೂ ನನಗೆ ಆಕೆ ಸೆಕ್ಸ್‌ ನಡೆಸಲು ಬಿಡುತ್ತಿರಲಿಲ್ಲ. ಆಕೆ ತನ್ನ ಗುರುವಿನ ಸಲಹೆಯ ಮೇರೆಗೆಯೇ ನನಗೆ ಸೆಕ್ಸ್‌ ನಿರಾಕರಿಸುತ್ತಿದ್ದಾಳೆ ಎಂಬುದು ಅನಂತರ ನನಗೆ ಗೊತ್ತಾಯಿತು. ಮಾತ್ರವಲ್ಲದೆ ಆಕೆ ಮುಂದಿನ ಐದು ವರ್ಷಗಳ ಮಟ್ಟಿಗೆ ತಾನು ಮಗುವನ್ನು ಹೊಂದಲು ಬಯಸುವುದಿಲ್ಲ ಎಂದು ಹೇಳುತ್ತಿದ್ದಳು.

ಮುಂಬಯಿ ಬಾಂದ್ರಾ ಕೋರ್ಟ್‌ ನ್ಯಾಯಾಧೀಶರಾದ ಎಸ್‌ ಎ ಮೋರೆ ಅವರು ಈ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ, "ಪತಿಗೆ ಸೆಕ್ಸ್‌ ನಿರಾಕರಿಸುವುದಕ್ಕೆ ಮತ್ತು ಆತನೊಂದಿಗೆ ಅನುರಕ್ತೆಯಾಗಲು ಒಪ್ಪದಿರುವುದಕ್ಕೆ ಪತ್ನಿಗೆ ಯಾವುದೇ ಸರಿಯಾದ ಕಾರಣ ಇರುವಂತೆ ಕಂಡುಬರುವುದಿಲ್ಲ. ಆದುದರಿಂದ ಆಕೆಯ ನಿರಾಕರಣೆಯು ಮಾನಸಿಕ ಕ್ರೌರ್ಯವೆನಿಸುತ್ತದೆ' ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು.

ತನ್ನ ಪತ್ನಿಯು ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಸದಾ ಜಗಳ ಕಾಯುತ್ತಿದ್ದಳು; ಮಾತ್ರವಲ್ಲದೆ ತನಗೆ ಸದಾ ಆಫೀಸಿಗೆ ಫೋನ್‌ ಮಾಡಿ ಕಿರಿಕಿರಿ ಮಾಡುತ್ತಿದ್ದಳು; ಆಫೀಸಲ್ಲಿ ಕೆಲಸ ಮಾಡಲು ತೊಂದರೆ ಕೊಡುತ್ತಿದ್ದಳು ಎಂದು ಆಕೆಯ ಪತಿ ಹೇಳಿದ್ದಾನೆ.

30ರ ಹರೆಯದ ಈ ಪತಿರಾಯ ತನ್ನ ಪತ್ನಿ ತನ್ನ ಇ-ಮೇಲ್‌ ಖಾತೆಯನ್ನು ಹ್ಯಾಕ್‌ ಮಾಡಿ ತನ್ನ ಗೆಳೆಯರಿಗೆ ಅವಮಾನಕಾರಿ ಇ-ಮೇಲ್‌ಗ‌ಳನ್ನು ಕಳುಹಿಸುತ್ತಿದ್ದಳು ಎಂದೂ ದೂರಿದ್ದಾನೆ. ನನ್ನ ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಹುಡುಗಿಯನ್ನು ಮದುವೆಯಾಗಬೇಕೆಂಬ ನನ್ನ ಕನಸು ಈಕೆಯೊಂದಿಗೆ ನನ್ನ ಮದುವೆಯಿಂದಾಗಿ ಭಗ್ನವಾಗಿ ಹೋಗಿದೆ ಎಂದು ಆತ ರೋದಿಸಿದ್ದಾನೆ.

ತನ್ನ ಪತಿಯು ತನ್ನೊಂದಿಗೆ ಅನೈಸರ್ಗಿಕ ಸೆಕ್ಸ್‌ ಹೊಂದಲು ಬಯಸುತ್ತಿದ್ದ ಎಂಬ ಪತ್ನಿಯ ಅಹವಾಲನ್ನು ಕೋರ್ಟ್‌ ಈ ಪ್ರಕರಣದಲ್ಲಿ ತಿರಸ್ಕರಿಸಿದೆ.
 

 

Trending videos

 
ಓದುಗರ ಅಭಿಪ್ರಾಯ
Back to Top